Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಪಟ್ಟಣದ ಶ್ರೀನಿವಾಸ ಕಂದಗಲ್ ಅವರು ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಎಸ.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರ ಆಯ್ಕೆಗೆ ಪಟ್ಟಣ ಪಂಚಾಯ್ತಿ ಸದಸ್ಯ ಮಲ್ಲು ದೋತ್ರೆ, ಮುಖಂಡರಾದ ಸುರೇಶ ವಡ್ಡರ, ಕೃಷ್ಣ ಗುಂಜೇ, ಶಿವಾನಂದ ಪಾಟೀಲ, ನಾಮದೇವ ಕಂದಗಲ, ಮಾದೇವ ಪೂಜಾರಿ, ಶಿವಾನಂದ ಮೇತ್ರಿ, ಸಿದ್ದು ಪೂಜಾರಿ, ಸುಧೀರ ಅಂಕೋಲೆ, ಸುಭಾಸ್ ತಳಕೇರಿ, ಶಂಕರ್ ಗೌಂಡಿ, ಶಿವಪ್ಪ ತಿಮ್ಮಣ್ಣ ಗೌಂಡಿ, ಸುರೇಶ್ ಎಲ್ಲಪ್ಪ ಪವಾರ, ವಿದ್ಯಾಧರ ಬನಪಟ್ಟಿ, ಪರಶುರಾಮ ಬನಪಟ್ಟಿ, ರಾಮಚಂದ್ರ ಬನಪಟ್ಟಿ, ತಿಮ್ಮಣ್ಣ ಗಾಡಿವಡ್ಡರ್ ಹರ್ಷ ವ್ಯಕ್ತಪಡಿಸಿದ್ದಾರೆ.
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ) – ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ ಮೊ:೯೪೪೯೨೩೪೧೪೨ ಸಕಾರಾತ್ಮಕ ಮನೋಭಾವ ಎಂದರೆ..ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ ಭಾಗವನ್ನು ಕೇಂದ್ರೀಕರರಿಸುತ್ತದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ.’ ಇನ್ನೊಂದು ಹೆಚ್ಚು ವಿಸ್ತೃತವಾದ ಚರ‍್ರಿಯವರು ನೀಡಿರುವ ವ್ಯಾಖ್ಯಾನವನ್ನು ನೋಡುವುದಾದರೆ ‘ ಧನಾತ್ಮಕ ಚಿಂತನೆಯು ವಾಸ್ತವವಾಗಿ ಜೀವನದ ಸವಾಲುಗಳನ್ನು ಸಕಾರಾತ್ಮಕ ದೃಷ್ಟ್ಟಿಕೋನದಿಂದ ಸಮೀಪಿಸುವುದು ಎಂದರ್ಥ. ಕೆಟ್ಟ ವಿಷಯಗಳನ್ನು ತಪ್ಪಿಸುವುದು ಅಥವಾ ನಿರ್ಲಕ್ಷಿಸುವುದು ಎಂದರ್ಥವಲ್ಲ. ಬದಲಾಗಿ ಸಂಭಾವ್ಯ ಕೆಟ್ಟ ಸನ್ನಿವೇಶಗಳನ್ನು ಹೆಚ್ಚು ಬಳಸಿಕೊಳ್ಳುವುದು. ಇತರ ಜನರಲ್ಲಿ ಉತ್ತಮವಾದುದದ್ದನ್ನು ನೋಡಲು ಪ್ರಯತ್ನಿಸುವುದು ಮತ್ತು ನಿಮ್ಮನ್ನು ನಿಮ್ಮ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ನೋಡುವುದನ್ನು ಒಳಗೊಂಡಿರುತ್ತದೆ.’ ಧನಾತ್ಮಕವಾದ ಮನಸ್ಥಿತಿಯು ಪ್ರಕಾಶಮಾನವಾದ ಬದಿಯಲ್ಲಿ ಗಮನಹರಿಸುವ ಮತ್ತು ಸವಾಲುಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಸಮೀಪಿಸುವ ಪ್ರವೃತ್ತಿಯೆಂದು ಈ ವ್ಯಾಖ್ಯಾನಗಳಿಂದ ತಿಳಿದು ಬರುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದುವುದು ಎಂದರೆ ಧನಾತ್ಮಕ ಚಿಂತನೆಯನ್ನು ಅಭ್ಯಾಸ ಮಾಡುವುದು. ನಿರಂತರವಾಗಿ…
Udayarashmi kannada daily newspaper
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವಾರ್ಡ್ ೨೦ ರ ಹುಡ್ಕೋ ಕಾಲೋನಿ ಸೇರಿದಂತೆ ಕೆಲ ಭಾಗದಲ್ಲಿ ಕಳೆದ ೧೫ ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ನಮ್ಮ ಭಾಗಕ್ಕೆ ನೀರು ಬಿಡಿಸುವಂತೆ ವಾರ್ಡಿನ ಸದಸ್ಯೆ ಫರಜಾನ ಚೌಧರಿ ಅವರ ನಿವಾಸಕ್ಕೆ ಗುರುವಾರ ಅಲ್ಲಿನ ನಿವಾಸಿಗಳು ಭೇಟಿ ನೀಡಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ಚರಂಡಿ ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ. ಇದರ ಬಗ್ಗೆಯೂ ಸದಸ್ಯರು ಗಮನ ಹರಿಸಬೇಕೆಂದು ಹೇಳಿದರು.ನಿವಾಸಿಗಳ ಮನವಿಗೆ ಪುರಸಭೆ ಸದಸ್ಯೆ ಪತಿ ನಿಸಾರ ಚೌಧರಿ ಅವರು ಇದರ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ಇಂದೇ ನೀರು ಬಿಡಿಸುವ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಮಣ್ಣೂರ, ಅಶೋಕ ಬಾರಿಕಾಯಿ, ಸಂಗಪ್ಪ ಬಿರಾದಾರ, ಅಶೋಕ ಗೋನಾಳ, ಮಾನು ಚವ್ಹಾಣ, ಮುತ್ತು ಒಡೆಯರ, ಸಿದ್ದು ಭಜಂತ್ರಿ, ಸಂಗಣ್ಣ ಮುತ್ತಗಿ, ಎ.ಐ.ನಧಾಪ, ರಾವುತಪ್ಪ ದೊಡಮನಿ ಇತರರು ಇದ್ದರು.
ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಉಚಿತ ದಂತ ತಪಾಸಣಾ ಶಿಬಿರ ಬಸವನಬಾಗೇವಾಡಿ: ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣಿನಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಖನಿಜಯುಕ್ತ ಆಹಾರ ಸೇವಿಸಬೇಕೆಂದು ಡಾ.ಆನಂದ ಪಾಟೀಲ ಹೇಳಿದರು.ಪಟ್ಟಣದ ವಿದ್ಯಾನಗರದ ಗಂಗಾಂಬಿಕ ಅಕ್ಕನ ಬಳಗವು ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ವಿಜಯಪುರದ ಐಡಿ ಸಹಯೋಗದಲ್ಲಿ ಸ್ಥಳೀಯ ಈರಕಾರಮುತ್ಯಾ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಯಿ ಮನುಷ್ಯನ ಕನ್ನಡಿ ಇದ್ದಹಾಗೆ. ನಮ್ಮ ಮುಖದ ಸೌಂದರ್ಯ ಚೆನ್ನಾಗಿ ಇರುವದರಲ್ಲಿ ಹಲ್ಲಿನ ಪಾತ್ರ ಬಹಳವಿದೆ. ಮಹಿಳೆಯರು ಗರ್ಭಿಣಿಯರಿದ್ದಾಗ ಹಲ್ಲುಗಳನ್ನು ಉಜ್ಜಬಾರದು ಎಂಬ ತಪ್ಪು ಕಲ್ಪನೆಯಿದೆ. ಇದರ ಸರಿಯಲ್ಲ. ಗರ್ಭೀಣಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ದಿನಕ್ಕೆ ಎರಡು ಸಲ ಹಲ್ಲು ಉಜ್ಜಬೇಕು. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕೆಂದರು.ಸೌಭಾಗ್ಯ ಗುಬ್ಬ ಮಾತನಾಡಿ, ತಾಯಂದಿರಿಗೆ ಮಕ್ಕಳ ಆರೋಗ್ಯದಲ್ಲಿ ಹಲ್ಲುಗಳ ರಕ್ಷಣೆ ಕುರಿತು, ಮನುಷ್ಯನ ಅಂಗಗಳಲ್ಲಿ ಹಲ್ಲಿನ ಪಾತ್ರ…
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂಬುವದು ಬಹುದಿನಗಳಿಂದ ಆಶೆ ನಮ್ಮದಾಗಿತ್ತು.ಎಲ್ಲಕ್ಕೂ ಕಾಲ ಕೂಡಿಬರಬೇಕು. ಈಗ ಕಾಲ ಕೂಡಿಬಂದಿದೆ. ಇದೀಗ ಇಲ್ಲಿನ ವಿಪ್ರಸಮಾಜ ಬಾಂಧವರು ಮುಂದೆ ಬಂದು ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿ ರೂ.೭೫ ಲಕ್ಷ ಹಣ ಸಂಗ್ರಹ ಮಾಡಿರುವುದು ಶ್ಲಾಘನೀಯ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಹೃದಯಭಾಗದಲ್ಲಿರುವ ಮೆಗಾಮಾರುಕಟ್ಟೆ ಪಕ್ಕದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಬುಧವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ದೇವಸ್ಥಾನವು ಜಿಲ್ಲೆಯಲ್ಲಿಯೇ ವಿಶಿಷ್ಠ ದೇವಸ್ಥಾನವಾಗಿ ರೂಪಗೊಳ್ಳುವಂತೆ ನಿರ್ಮಾಣವಾಗಬೇಕು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ಅಗತ್ಯವಿದೆ. ದೇವಸ್ಥಾನದ ನೀಲಿನಕ್ಷೆ ಸಿದ್ದಗೊಳ್ಳುತ್ತಿದ್ದಂತೆ ರೂ.೫೦ ಲಕ್ಷ ಅನುದಾನ ತಕ್ಷಣವೇ ನೀಡುವುದಾಗಿ ಭರವಸೆ ನೀಡಿದರು.ಆರಂಭದಲ್ಲಿ ರೂ. ೧.೨೫ ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಲಿ. ಮುಂಬರುವ ದಿನಗಳಲ್ಲಿ ದೇವಸ್ಥಾನಕ್ಕೆ ಬೇಕಾದ ಅನುದಾನವನ್ನು ಕೊಡುವ ಭರವಸೆ ನೀಡಿದರು.ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ…
ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ಸ್ನೇಹ ಸದನ ಗೃಹಣಿ ಕೇಂದ್ರದ ಮುಂದೆ ಬಸ್ ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯರ್ತರು ಬಸ್ ಡಿಪೋ ವ್ಯವಸ್ಥಾಪಕ ಪಿ.ಕೆ.ಜಾಧವ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಬಸವನಬಾಗೇವಾಡಿ ಮಾರ್ಗದಿಂದ ಕಾನ್ನಾಳ ಗ್ರಾಮಕ್ಕೆ ಸಂಚರಿಸುವ ಬಸ್ ಗೃಹಣಿ ಕೇಂದ್ರ ಮುಂದೆ ಬಸ್ ನಿಲ್ಲಿಸುತ್ತಿಲ್ಲ. ಅಲ್ಲಿ ಸ್ನೇಹ ಸದನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ನ್ಯೂ ಹೈಸ್ಕೂಲ್, ಮಡಿವಾಳೇಶ್ವರ ಪ್ರಾಥಮಿಕ ಶಾಲೆ ಹಾಗೂ ಸ್ನೇಹ ಸದನ ಶಾಲೆಯಲ್ಲಿ ಹಾಸ್ಟೇಲ್ ವ್ಯವಸ್ಥೆ ಹಾಗೂ ಯುವತಿಯರಿಗೆ, ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ದಿನಾಲೂ ನೂರಾರು ಮಹಿಳೆಯರು ಸ್ನೇಹ ಸದನ ಗೃಹಣಿ ಕೇಂದ್ರಕ್ಕೆ ಬರುತ್ತಾರೆ. ಈ ಕೇಂದ್ರ ಕಣಕಾಲ ಬಸ್ ತಂಗುದಾಣದಂದ ೮ ನೂರು ಮೀಟರ್ ಅಂತರವಿದೆ. ಬಸ್ ತಂಗುದಾಣದಿಂದ ಮಹಿಳೆಯರು ೮ ನೂರು ಮೀಟರ್ ನಡೆದುಕೊಂಡು ಈ ಗೃಹಣಿ ಕೇಂದ್ರಕ್ಕೆ ಬಂದು ಹೋಗಬೇಕು. ಇದೇ ಮಾರ್ಗವಾಗಿ ಬಸ್ ಮುಂದೆ ಹೋಗುವದರಿಂದ ಈ ಗೃಹಣಿ ಕೇಂದ್ರ ಮುಂದೆ…
ಪಿಕೆಪಿಎಸ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಆಗ್ರಹ ಬಸವನಬಾಗೇವಾಡಿ: ನಿತ್ಯ ಜೀವನದಲ್ಲಿ ಉಪಯೋಗಿಸುವ ವಸ್ತುಗಳಿಗೆ ಸ್ಥಿರಬೆಲೆ ಇದೆ. ಅದೇ ರೈತರು ಬೆಳೆದ ಬೆಳೆಗೆ ಸ್ಥಿರವಾದ ಬೆಲೆ ಇರದೇ ಇರುವುದು ನೋವಿನ ಸಂಗತಿ. ಇದರಿಂದಾಗಿ ರೈತರು ಸಂಕಷ್ಟ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಹಳೆ ಸಂತೆಕಟ್ಟೆ ಆವರಣದಲ್ಲಿ ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಪಿಕೆಪಿಎಸ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಉದ್ಘಾಟನೆಯಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೆಣಸಿಕಾಯಿ ದರ ಕುಸಿತದ ಪರಿಣಾಮವಾಗಿ ಬ್ಯಾಡಗಿಯಲ್ಲಿ ರೈತರು ಎಪಿಎಂಸಿಗೆ ಬೆಂಕಿಹಚ್ಚಿದರು. ದರ ಕುಸಿತ ರೈತರಿಗೆ ನೋವು ಆಗುವುದು ಸಹಜ. ಈರುಳ್ಳಿ ಬೆಲೆ ಉತ್ತಮವಾಗಿ ಇರುವಾಗ ಕೇಂದ್ರ ಸರ್ಕಾರ ೫ ಲಕ್ಷ ಟನ್ ಈರುಳ್ಳಿಯನ್ನು ಬೇರೆ ದೇಶದಿಂದ…
ದೇವರಹಿಪ್ಪರಗಿ: ವಾರ್ಡಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಬೊರೆವೆಲ್ ಕೊರೆಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹೇಳಿದರು.ಪಟ್ಟಣದ ಹೊಸನಗರದಲ್ಲಿನ ೧೩ನೇ ವಾರ್ಡಿನಲ್ಲಿ ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಅಡಿಯಲ್ಲಿ ಗುರುವಾರ ಬೊರೆವೆಲ್ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ವಾರ್ಡಿನಲ್ಲಿ ಒಟ್ಟು ೩ ಬೊರೆವೆಲ್ ಕೊರೆಸಲಾಗಿದೆ. ಇವುಗಳಲ್ಲಿ ೨ ರಲ್ಲಿ ನೀರು ದೊರೆತಿದೆ. ಇನ್ನೂ ವಾರ್ಡಿನಲ್ಲಿ ಕಳೆದ ೨ ವರ್ಷಗಳಲ್ಲಿ ೭ ಸಿ.ಸಿ ರಸ್ತೆಗಳು, ಚರಂಡಿ ನಿರ್ಮಾಣ ಹಾಗೂ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ವಾರ್ಡಿನಲ್ಲಿ ಮನೆಗಳಿಗೆ ನಳಗಳ ಸಂಪರ್ಕ ನೀಡಲಾಗುತ್ತಿದೆ. ಆದರೆ ಮಹಿಳೆಯರು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ನಿರ್ಲಕ್ಷö್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶೌಚಾಲಯ ಕುರಿತು ಕ್ರಮ ಕೈಗೊಳ್ಳದೇ ಹೋದರೆ ಸ್ವತಃ ನಾನೇ ಪಟ್ಟಣ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.ಈರಣ್ಣ ಒಂಟೆತ್ತಿನ, ಸದಯ್ಯ ಇಂಡಿ, ಸಲಬಯ್ಯ ಸದಯ್ಯನಮಠ, ಸುರೇಶ ಒಂಟೆತ್ತಿನ, ಮುತ್ತು…
ಮುಳಸಾವಳಗಿಯಲ್ಲಿ ಸಿದ್ದೇಶ್ವರ ಶ್ರೀಗಳ ಗುರುನಮನ | ಆಧ್ಯಾತ್ಮಿಕ ಪ್ರವಚನ ದೇವರಹಿಪ್ಪರಗಿ: ನಾವು ಮಾಡುವ ಯೋಗ್ಯ ಕೆಲಸವನ್ನು ಶ್ರದ್ದೆ, ನಿಷ್ಠೆ, ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಬಾಲಗಾಂವ ಆಶ್ರಮದ ಅಮೃತಾನಂದಶ್ರೀ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಗುರುವಾರ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದ ಅಂಗವಾಗಿ ಜರುಗುತ್ತಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದರು.ಕಾಯಕವೇ ಕೈಲಾಸ ಎಂದರು ಬಸವೇಶ್ವರರು, ಅದರಂತೆ ನಡೆದರು ನಮ್ಮ ನಡೆದಾಡುವ ದೈವ ಸಿದ್ದೇಶ್ವರರು. ಕಾಯಕದಲ್ಲಿ ಚಿತ್ತಶುದ್ದ ಮನಸ್ಸಿನಿಂದ ಪರಮಾತ್ಮನನ್ನು ಕಾಣಬೇಕು. ಆತನ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು.ಹಿಪ್ಪರಗಿಯ ಮಡಿವಾಳ ಮಾಚಿದೇವರು, ಶಿವಣಗಿಯ ನೂಲಿಯ ಚಂದಯ್ಯನವರ ಕಾಯಕ ನಿಷ್ಠೆಯನ್ನು ನಾವೆಲ್ಲರೂ ಅರಿತು, ನಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಕಾಯಕ ಜೀವಿಗಳಾಗಬೇಕಾಗಿದೆ. ಪ್ರಮುಖವಾಗಿ ಬದುಕಿನಲ್ಲಿ ಕೆಟ್ಟದ್ದನ್ನು ತಲೆಗೆ ಹಾಕಿಕೊಳ್ಳದೇ, ಕೆಟ್ಟದ್ದಕ್ಕೆ ನೀರು, ಗೊಬ್ಬರ ಹಾಕದೇ, ಕೆಟ್ಟದ್ದನ್ನು ಬಿಟ್ಟಾಕಿ ಸತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಾಗಿದೆ ಎಂದರು.ಪ್ರತಿನಿತ್ಯ ಬೆಳಿಗ್ಗೆ ೬ ಗಂಟೆಯಿಂದ ೭ ಗಂಟೆಯವರೆಗೆ ಜರುಗುವ ಸತ್ಸಂಗ ಪ್ರವಚನ ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಕಾರ್ಯಕ್ರಮದಲ್ಲಿ ಬಸವಾನಂದಶ್ರೀಗಳು, ದಯಾನಂದ ಸ್ವಾಮೀಜಿ, ನಿಂಗರಾಯ ಮಹಾರಾಜ, ಬಸವರಾಜಶ್ರೀ,…
