ದೇವರಹಿಪ್ಪರಗಿ: ವಾರ್ಡಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಬೊರೆವೆಲ್ ಕೊರೆಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದ ಹೊಸನಗರದಲ್ಲಿನ ೧೩ನೇ ವಾರ್ಡಿನಲ್ಲಿ ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಅಡಿಯಲ್ಲಿ ಗುರುವಾರ ಬೊರೆವೆಲ್ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾರ್ಡಿನಲ್ಲಿ ಒಟ್ಟು ೩ ಬೊರೆವೆಲ್ ಕೊರೆಸಲಾಗಿದೆ. ಇವುಗಳಲ್ಲಿ ೨ ರಲ್ಲಿ ನೀರು ದೊರೆತಿದೆ. ಇನ್ನೂ ವಾರ್ಡಿನಲ್ಲಿ ಕಳೆದ ೨ ವರ್ಷಗಳಲ್ಲಿ ೭ ಸಿ.ಸಿ ರಸ್ತೆಗಳು, ಚರಂಡಿ ನಿರ್ಮಾಣ ಹಾಗೂ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವಾರ್ಡಿನಲ್ಲಿ ಮನೆಗಳಿಗೆ ನಳಗಳ ಸಂಪರ್ಕ ನೀಡಲಾಗುತ್ತಿದೆ. ಆದರೆ ಮಹಿಳೆಯರು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ನಿರ್ಲಕ್ಷö್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶೌಚಾಲಯ ಕುರಿತು ಕ್ರಮ ಕೈಗೊಳ್ಳದೇ ಹೋದರೆ ಸ್ವತಃ ನಾನೇ ಪಟ್ಟಣ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಈರಣ್ಣ ಒಂಟೆತ್ತಿನ, ಸದಯ್ಯ ಇಂಡಿ, ಸಲಬಯ್ಯ ಸದಯ್ಯನಮಠ, ಸುರೇಶ ಒಂಟೆತ್ತಿನ, ಮುತ್ತು ಜಾಲಗಾರ, ಬುಡ್ಡಾ ಬೇಪಾರಿ, ಮಂಜುನಾಥ ಒಂಟೆತ್ತಿನ, ಈರಯ್ಯ ಇಂಡಿಮಠ, ಯಾಸಿನ್ ಹಚ್ಯಾಳ, ಬಸವರಾಜ ಒಂಟೆತ್ತಿನ, ಶಂಕ್ರೆಪ್ಪ ಜಂಬಗಿ, ಅಪ್ಪಾಸಾಹೇಬ ವಾಡೇದಮನಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

