ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವಾರ್ಡ್ ೨೦ ರ ಹುಡ್ಕೋ ಕಾಲೋನಿ ಸೇರಿದಂತೆ ಕೆಲ ಭಾಗದಲ್ಲಿ ಕಳೆದ ೧೫ ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ನಮ್ಮ ಭಾಗಕ್ಕೆ ನೀರು ಬಿಡಿಸುವಂತೆ ವಾರ್ಡಿನ ಸದಸ್ಯೆ ಫರಜಾನ ಚೌಧರಿ ಅವರ ನಿವಾಸಕ್ಕೆ ಗುರುವಾರ ಅಲ್ಲಿನ ನಿವಾಸಿಗಳು ಭೇಟಿ ನೀಡಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ಚರಂಡಿ ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ. ಇದರ ಬಗ್ಗೆಯೂ ಸದಸ್ಯರು ಗಮನ ಹರಿಸಬೇಕೆಂದು ಹೇಳಿದರು.
ನಿವಾಸಿಗಳ ಮನವಿಗೆ ಪುರಸಭೆ ಸದಸ್ಯೆ ಪತಿ ನಿಸಾರ ಚೌಧರಿ ಅವರು ಇದರ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ಇಂದೇ ನೀರು ಬಿಡಿಸುವ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಮಣ್ಣೂರ, ಅಶೋಕ ಬಾರಿಕಾಯಿ, ಸಂಗಪ್ಪ ಬಿರಾದಾರ, ಅಶೋಕ ಗೋನಾಳ, ಮಾನು ಚವ್ಹಾಣ, ಮುತ್ತು ಒಡೆಯರ, ಸಿದ್ದು ಭಜಂತ್ರಿ, ಸಂಗಣ್ಣ ಮುತ್ತಗಿ, ಎ.ಐ.ನಧಾಪ, ರಾವುತಪ್ಪ ದೊಡಮನಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

