ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ಸ್ನೇಹ ಸದನ ಗೃಹಣಿ ಕೇಂದ್ರದ ಮುಂದೆ ಬಸ್ ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯರ್ತರು ಬಸ್ ಡಿಪೋ ವ್ಯವಸ್ಥಾಪಕ ಪಿ.ಕೆ.ಜಾಧವ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಬಸವನಬಾಗೇವಾಡಿ ಮಾರ್ಗದಿಂದ ಕಾನ್ನಾಳ ಗ್ರಾಮಕ್ಕೆ ಸಂಚರಿಸುವ ಬಸ್ ಗೃಹಣಿ ಕೇಂದ್ರ ಮುಂದೆ ಬಸ್ ನಿಲ್ಲಿಸುತ್ತಿಲ್ಲ. ಅಲ್ಲಿ ಸ್ನೇಹ ಸದನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ನ್ಯೂ ಹೈಸ್ಕೂಲ್, ಮಡಿವಾಳೇಶ್ವರ ಪ್ರಾಥಮಿಕ ಶಾಲೆ ಹಾಗೂ ಸ್ನೇಹ ಸದನ ಶಾಲೆಯಲ್ಲಿ ಹಾಸ್ಟೇಲ್ ವ್ಯವಸ್ಥೆ ಹಾಗೂ ಯುವತಿಯರಿಗೆ, ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ದಿನಾಲೂ ನೂರಾರು ಮಹಿಳೆಯರು ಸ್ನೇಹ ಸದನ ಗೃಹಣಿ ಕೇಂದ್ರಕ್ಕೆ ಬರುತ್ತಾರೆ. ಈ ಕೇಂದ್ರ ಕಣಕಾಲ ಬಸ್ ತಂಗುದಾಣದಂದ ೮ ನೂರು ಮೀಟರ್ ಅಂತರವಿದೆ. ಬಸ್ ತಂಗುದಾಣದಿಂದ ಮಹಿಳೆಯರು ೮ ನೂರು ಮೀಟರ್ ನಡೆದುಕೊಂಡು ಈ ಗೃಹಣಿ ಕೇಂದ್ರಕ್ಕೆ ಬಂದು ಹೋಗಬೇಕು. ಇದೇ ಮಾರ್ಗವಾಗಿ ಬಸ್ ಮುಂದೆ ಹೋಗುವದರಿಂದ ಈ ಗೃಹಣಿ ಕೇಂದ್ರ ಮುಂದೆ ಬಸ್ ನಿಲುಗಡೆ ಮಾಡಿದರೆ ಮಹಿಳೆಯರಿಗೆ, ಶಾಲೆಯ ಮಕ್ಕಳಿಗೆ, ಶಿಕ್ಷಕರಿಗೆ ತುಂಬಾ ಅನುಕೂಲವಾಗುತ್ತದೆ. ಬಸ್ ವ್ಯವಸ್ಥಾಪಕರು ಸ್ನೇಹ ಸದನ ಗೃಹಣಿ ಕೇಂದ್ರ ಮುಂದೆ ಬಸ್ ನಿಲುಗಡೆಗೆ ಕ್ರಮ ವಹಿಸಬೇಕೆಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ರಾಜಶೇಖರ ಹುಲ್ಲೂರ, ಜಿಲ್ಲಾ ಯುವ ಅಧ್ಯಕ್ಷ ಮಹಾಂತೇಶ ಚಕ್ರವರ್ತಿ, ತಾಲೂಕಾಧ್ಯಕ್ಷ ಸುನೀಲ ರಾಠೋಡ, ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಜಿಲ್ಲಾ ಸಂಚಾಲಕ ಪ್ರಭು ಮಂಕಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿದರಕುಂದಿ, ರಾಜ್ಯ ಸಮಿತಿ ಸದಸ್ಯ ಸಿದ್ದರಾಮ ಹಳ್ಳೂರ, ಮಹಿಳಾ ತಾಲೂಕಾಧ್ಯಕ್ಷೆ ಕಾವೇರಿ ಬಡಿಗೇರ, ನಗರ ಘಟಕದ ಅಧ್ಯಕ್ಷೆ ಭಾರತಿ ನಿಡಗುಂದಿ, ತಾಲೂಕಾ ಉಪಾಧ್ಯಕ್ಷ ಮಲ್ಲು ಕೋಲಕಾರ, ಜಿಲ್ಲಾ ಕಾರ್ಯದರ್ಶಿ ರಾಜು ಬಿರಾದಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

