Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡಲಿ
(ರಾಜ್ಯ ) ಜಿಲ್ಲೆ

ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡಲಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪಿಕೆಪಿಎಸ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಆಗ್ರಹ

ಬಸವನಬಾಗೇವಾಡಿ: ನಿತ್ಯ ಜೀವನದಲ್ಲಿ ಉಪಯೋಗಿಸುವ ವಸ್ತುಗಳಿಗೆ ಸ್ಥಿರಬೆಲೆ ಇದೆ. ಅದೇ ರೈತರು ಬೆಳೆದ ಬೆಳೆಗೆ ಸ್ಥಿರವಾದ ಬೆಲೆ ಇರದೇ ಇರುವುದು ನೋವಿನ ಸಂಗತಿ. ಇದರಿಂದಾಗಿ ರೈತರು ಸಂಕಷ್ಟ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಹಳೆ ಸಂತೆಕಟ್ಟೆ ಆವರಣದಲ್ಲಿ ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಪಿಕೆಪಿಎಸ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಉದ್ಘಾಟನೆಯಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೆಣಸಿಕಾಯಿ ದರ ಕುಸಿತದ ಪರಿಣಾಮವಾಗಿ ಬ್ಯಾಡಗಿಯಲ್ಲಿ ರೈತರು ಎಪಿಎಂಸಿಗೆ ಬೆಂಕಿಹಚ್ಚಿದರು. ದರ ಕುಸಿತ ರೈತರಿಗೆ ನೋವು ಆಗುವುದು ಸಹಜ. ಈರುಳ್ಳಿ ಬೆಲೆ ಉತ್ತಮವಾಗಿ ಇರುವಾಗ ಕೇಂದ್ರ ಸರ್ಕಾರ ೫ ಲಕ್ಷ ಟನ್ ಈರುಳ್ಳಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಂಡ ಪರಿಣಾಮ ಈರುಳ್ಳಿ ದರ ಕುಸಿಯಿತು. ಇದು ರೈತರ ಬೆಳೆದ ಈರುಳ್ಳಿ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಒಂದೊಂದು ವರ್ಷ ಒಂದೊಂದು ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಯಾವ ಬೆಳೆಗೂ ಸ್ಥಿರ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಬೆಳಗಳಿಗೆ ಯೋಗ್ಯ ಬೆಲೆ ನೀಡಬೇಕು. ದೇಶಕ್ಕೆ ಉತ್ತಮ ಪ್ರಧಾನಿ ಸಿಗುವವರೆಗೂ ರೈತರು ಸಂದಿಗ್ಧ ಪರಿಸ್ಥಿತಿಯಲ್ಲಿರುತ್ತಾರೆ ಎಂದ ಅವರು, ದೇಶದ ಜಿಡಿಪಿಯಲ್ಲಿ ಮೊದಲು ಶೇ.೪.೫ ರಿಂದ ೫ ರವರೆಗೆ ರೈತರ ಪಾಲು ಇರುತ್ತಿತ್ತು. ಇದು ಈಗ ಶೇ.೨.೫ ರಿಂದ ೩ ಪಾಲು ಬಂದಿದೆ. ಜಿಡಿಪಿಯಲ್ಲಿ ರೈತರ ಪಾಲು ಕ್ರಮೇಣ ಕಡಿಮೆಯಾಗಿರುವದೇ ರೈತರು ಈ ದುಃಸ್ಥಿತಿಗೆ ಬರಲು ಕಾರಣವಾಗಿದೆ ಎಂದರು.
ಜಿಲ್ಲೆಯಲ್ಲಿ ತಿಕೋಟಾ ಪಿಕೆಪಿಎಸ್ ನಂತರ ಇಲ್ಲಿನ ಪಿಕೆಪಿಎಸ್ ಸಂಘವು ರೂ. ೬೦ ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಎರಡನೇ ಸ್ಥಾನದಲ್ಲಿರುವುದು ಶ್ಲಾಘನೀಯ. ಬಸವನಬಾಗೇವಾಡಿ ಪಿಕೆಪಿಎಸ್ ಸಂಘವು ರೈತರ ಬಾಂಧವರಿಗೆ ಅಲ್ಪಾವಧಿ, ದೀರ್ಘಾವಧಿ ಸಾಲ ಸೇರಿದಂತೆ ಇತರೇ ಸಾಲ ನೀಡುವ ಮೂಲಕ ಅವರಿಗೆ ನೆರವಾಗುವ ಜೊತೆಗೆ ಅವರಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವುದು ಇಲ್ಲಿನ ಆಡಳಿತ ಮಂಡಳಿ, ಸಿಬ್ಬಂದಿಗಳ ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿರುವದಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿಯೇ ಪ್ರಥಮವಾಗಿ ರೈತರಿಗೆ ರಿಯಾಯತಿ ದರದಲ್ಲಿ ಔಷಧಿಗಳನ್ನು ನೀಡಲು ಮೆಡಿಕಲ್ ಸ್ಟೋರ್ಸ್ ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದ ಅವರು, ನಿರಂತರವಾಗಿ ನಿಯಂತ್ರಣ ಇಟ್ಟುಕೊಂಡು ಕಾರ್ಯನಿರ್ವಹಣೆ ಮಾಡಿದರೆ ಖಂಡಿತ ಅಭಿವೃದ್ಧಿ ಸಾಧಿಸಬಹುದು. ಮುಂಬರುವ ದಿನಗಳಲ್ಲಿ ಈ ಸಂಘವು ಇನ್ನಷ್ಟು ಉತ್ತಮ ಸೇವೆ ನೀಡುವ ಮೂಲಕ ಮೊದಲ ಸ್ಥಾನ ಪಡೆದುಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.
ಡಾ.ಎನ್.ಬಿ.ವಜೀರಕರ ಮಾತನಾಡಿ, ಮನುಷ್ಯನಿಗೆ ಆರೋಗ್ಯ ತಪ್ಪಿದಾಗ ಯಾವಾಗ ಸರಿಯಾಗುತ್ತದೆ ಎಂಬ ಆತಂಕ ರೋಗಿಯಲ್ಲಿರುತ್ತದೆ. ಜೊತೆಗೆ ಔಷಧೋಪಚಾರ ಖರ್ಚಿನ ಬಗ್ಗೆಯೂ ರೋಗಿಯೂ ಆಲೋಚನೆ ಮಾಡುವುದು ಸಹಜ. ಕಡಿಮೆ ದರದಲ್ಲಿ ಔಷಧ ನೀಡಲು ಪಿಕೆಪಿಎಸ್ ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಪ್ರಾಸ್ತವಿಕವಾಗಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ ಮಾತನಾಡಿದರು.
ವೇದಿಕೆಯಲ್ಲಿ ಶಿವಾನಂದ ಈರಕಾರಮುತ್ಯಾ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ವಿವಿಧ ಸಮಾಜದ ಮುಖಂಡರಾದ ಪ್ರೇಮಕುಮಾರ ಮ್ಯಾಗೇರಿ, ಬಸಣ್ಣ ದೇಸಾಯಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ನೀಲಪ್ಪ ನಾಯಕ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಪ್ಪ ವಾಡೇದ, ಪ್ರವೀಣ ಪವಾರ, ಸಂಗಮೇಶ ಓಲೇಕಾರ, ಬಸವರಾಜ ಬಿಜಾಪುರ, ರುದ್ರಮುನಿ ಸಾರಂಗಮಠ, ಕೆ.ಬಿ.ಕಡೆಮನಿ, ಕಾಶೀನಾಥ ಹಿಂಗೋಲಿ, ಎಸ್.ಎ.ದೇಗಿನಾಳ, ಸಿದ್ದನಗೌಡ ಪಾಟೀಲ, ನಿಂಗು ಗುಂಡಳ್ಳಿ, ಅಶೋಕ ಬಾಗೇವಾಡಿ, ಮುತ್ತು ಕಿಣಗಿ, ಪರಶುರಾಮ ಜಮಖಂಡಿ, ಸುಭಾಸ ಚಕ್ರಮನಿ, ಡಾ.ಶಬ್ಬೀರ ನದಾಫ, ಮೈಬೂಬಬಾಷಾ ನಾಯ್ಕೋಡಿ, ಸಹಕಾರಿ ಇಲಾಖೆಯ ಅಧಿಕಾರಿಗಳಾದ ಚೇತನ ಭಾವಿಕಟ್ಟಿ, ರವಿ ಬಣಗಾರ, ಶ್ರೀಶೈಲ ಹಂಗರಗಿ, ಪಿಕೆಪಿಎಸ್ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕರಾದ ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ನಿಂಗಪ್ಪ ಕುಳಗೇರಿ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ಗಂಗಾಬಾಯಿ ಕಡ್ಲಿಮಟ್ಟಿ, ಮಹಾದೇವಿ ಮೈಲೇಶ್ವರ, ಕ್ಷೇತ್ರಾಧಿಕಾರಿ ಎಸ್.ವ್ಹಿ.ರಾಜಗಿರಿ ಇತರರು ಇದ್ದರು.
ಶರಣು ಬಸ್ತಾಳ ಪ್ರಾರ್ಥಿಸಿ, ರೈತಗೀತೆ ಹಾಡಿದರು. ಪಿಕೆಪಿಎಸ್ ಸಿಇಓ ಪ್ರವೀಣ ಚಿಕ್ಕೊಂಡ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಚಂದ್ರು ಹದಿಮೂರ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಿಕೆಪಿಎಸ್ ನಿರ್ದೇಶಕರಾಗಿದ್ದ ಮುದುಕಪ್ಪ ಬಾರಿಗಿಡದ(ಅಸ್ಕಿ) ಅವರು ನಿಧನರಾದ ಹಿನ್ನೆಲೆಯಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ

ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ಚಡಚಣದಲ್ಲಿ ಕಳ್ಳರ ಹಾವಳಿ: ಭಯಭೀತಿಯಲ್ಲಿ ನಾಗರಿಕರು
    In (ರಾಜ್ಯ ) ಜಿಲ್ಲೆ
  • ಅಂತರ್ಜಾಲದ ಬಳಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಿ
    In (ರಾಜ್ಯ ) ಜಿಲ್ಲೆ
  • ದ್ವೇಷ ಭಾಷಣ ವಿರೋಧಿ ಮಸೂದೆಗೆ ರಾಜ್ಯಪಾಲರು ಒಪ್ಪಬಾರದು
    In (ರಾಜ್ಯ ) ಜಿಲ್ಲೆ
  • ಪಿಪಿಪಿ ಮಾದರಿ ಬಿಜೆಪಿ ಹಾಗೂ ಮೋದಿ ಅವರ ಕೂಸು
    In (ರಾಜ್ಯ ) ಜಿಲ್ಲೆ
  • ಸಾರವಾಡ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯಕ್ಕೆ ಬದ್ಧ
    In (ರಾಜ್ಯ ) ಜಿಲ್ಲೆ
  • ದೇಹ ದಾರ್ಡ್ಯ ಸ್ಪರ್ಧೆ: ಎಸ್.ಎಸ್.ಬಿ. ಪ್ರತಿಭೆ ಪ್ರಜ್ವಲ ಗೆ ಬೆಳ್ಳಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.