ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂಬುವದು ಬಹುದಿನಗಳಿಂದ ಆಶೆ ನಮ್ಮದಾಗಿತ್ತು.ಎಲ್ಲಕ್ಕೂ ಕಾಲ ಕೂಡಿಬರಬೇಕು. ಈಗ ಕಾಲ ಕೂಡಿಬಂದಿದೆ. ಇದೀಗ ಇಲ್ಲಿನ ವಿಪ್ರಸಮಾಜ ಬಾಂಧವರು ಮುಂದೆ ಬಂದು ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿ ರೂ.೭೫ ಲಕ್ಷ ಹಣ ಸಂಗ್ರಹ ಮಾಡಿರುವುದು ಶ್ಲಾಘನೀಯ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಹೃದಯಭಾಗದಲ್ಲಿರುವ ಮೆಗಾಮಾರುಕಟ್ಟೆ ಪಕ್ಕದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಬುಧವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ದೇವಸ್ಥಾನವು ಜಿಲ್ಲೆಯಲ್ಲಿಯೇ ವಿಶಿಷ್ಠ ದೇವಸ್ಥಾನವಾಗಿ ರೂಪಗೊಳ್ಳುವಂತೆ ನಿರ್ಮಾಣವಾಗಬೇಕು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ಅಗತ್ಯವಿದೆ. ದೇವಸ್ಥಾನದ ನೀಲಿನಕ್ಷೆ ಸಿದ್ದಗೊಳ್ಳುತ್ತಿದ್ದಂತೆ ರೂ.೫೦ ಲಕ್ಷ ಅನುದಾನ ತಕ್ಷಣವೇ ನೀಡುವುದಾಗಿ ಭರವಸೆ ನೀಡಿದರು.
ಆರಂಭದಲ್ಲಿ ರೂ. ೧.೨೫ ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಲಿ. ಮುಂಬರುವ ದಿನಗಳಲ್ಲಿ ದೇವಸ್ಥಾನಕ್ಕೆ ಬೇಕಾದ ಅನುದಾನವನ್ನು ಕೊಡುವ ಭರವಸೆ ನೀಡಿದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಲೋಕನಾಥ ಅಗರವಾಲ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಿಲ ದೇಶಪಾಂಡೆ, ಕಾರ್ಯದರ್ಶಿ ಬಾಬು ಜೋಶಿ, ಮುಖಂಡರಾದ ಅನಿಲ ಅಗರವಾಲ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ರವಿ ರಾಠೋಡ, ವಿಪ್ರ ಸಮಾಜ ಬಾಂಧವರಾದ ಅನಿಲ ದೇಶಪಾಂಡೆ, ಮುಕುಂದ ದೇಶಪಾಂಡೆ, ವಿನಾಯಕ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಮಾಧವ ಕುಲಕರ್ಣಿ, ವಿಠ್ಠಲ ಕುಲಕರ್ಣಿ, ರಾಮಾಚಾರಿ ಯರ್ಜುವೇದಿ, ಅನಿಲ ಕುಲಕರ್ಣಿ, ವಾಸು ಕುಲಕರ್ಣಿ, ಕಿರಣ ಕುಲಕರ್ಣಿ, ಆರ್.ಡಿ.ಇನಾಮದಾರ, ಸಂಜೀವ ಕುಲಕರ್ಣಿ, ಪಿ.ಎಚ್.ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಇತರರು ಇದ್ದರು. ಕೆ.ಪಿ.ಕುಲಕರ್ಣಿ ಸ್ವಾಗತಿಸಿ,ದೇವಸ್ಥಾನದ ಜೀರ್ಣೋದ್ಧಾರ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

