Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲ: ಪಟ್ಟಣದಲ್ಲಿ ಮಂಗಳವಾರ ಹೋಳಿ ಹಬ್ಬ ಬಣ್ಣದ ಆಟ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಿದರು.ಮಂಗಳವಾರ ಹೋಳಿ ಹಬ್ಬದ ನಿಮಿತ್ಯವಾಗಿ ನಡೆದ ಬಣ್ಣದ ಆಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರು ಸಡಗರದಿಂದ ಬಣ್ಣದಾಟ ಆಡಿ ಸಂಭ್ರಮಿಸಿದರು. ನಂತರ ಸಾಯಂಕಾಲ ಜನರನ್ನು ಮನರಂಜಿಸಲು ಅಣಕು ಶವಯಾತ್ರೆ ಮಾಡಲಾಯಿತು.ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಬ್ಬದಂದು ಬಣ್ಣ ಆಡಿ ಪಟ್ಟಣದ ಕೆಲವು ನಗರದಲ್ಲಿ ಸಾಯಂಕಾಲ ಅಣಕು ಶವಯಾತ್ರೆ ಮಾಡುವದು ಇಲ್ಲಿನ ಪದ್ದತಿ. ಶವ ಯಾತ್ರೆಯಲ್ಲಿ ಮೃತನ ಹೆಂಡತ್ತಿ ಮತ್ತು ಮಗಳು ಆತನ ಬಗ್ಗೆ ಹೊಗಳಿಕೊಂಡು ಅಳುತ್ತಿರುವ ದೃಶ್ಯ ಜನರನ್ನು ನಗೆಗಡಲಲ್ಲಿ ತೇಲಿಸಿತು.ಈ ವರ್ಷ ಹುಣ್ಣಿಮೆ ಎರಡು ಇರುವದರಿಂದ ಗೊಂದಲದಿಂದ ಸೋಮವಾರ ಹೋಳ್ಳಿ ಹುಣ್ಣಿಮೆ ಆಚರಿಸಿ ಅಂದೇ ರಾತ್ರಿ ಕಾಮದಹನ ಮಾಡಿ ಮಂಗಳವಾರ ಬಣ್ಣದ ಆಟವಾಡಿದರು.ಪತಂಜಲಿ ಯೋಗ ಸಮಿತಿಯವರು ರಾಸಾಯನಿಕ ಬಣ್ಣದ ಆಟವಾಡಿ ಹೋಳಿ ಹುಣ್ಣಿಮೆಯ ಬಣ್ಣದೋಕಳಿ ಸಂಬ್ರಮದಿಂದ ಆಚರಿಸಿದರು.ಪಟ್ಟಣದ ಕಡಣಿ ಅಗಸಿ ನಗರದ ನೂರಾರು ಯುವಕರು ಅಣಕು ಶವಯಾತ್ರೆ ಮಾಡಿ ಡಿಜೆ ಸೌಂಡ ದ್ವನಿವರ್ದಕ ಮೂಲಕ ಪಟ್ಟಣದ…
ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವೆಂದ ಶಾಸಕರು ಮೋರಟಗಿ: ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಗಬಸಾವಳಗಿ ಗ್ರಾಮದ ಬಸ್ ನಿಲ್ದಾಣ ಬಳಿ ಅವಳಿ ಗ್ರಾಮಸ್ಥರು ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.ನಾನು ಬೆಂಗಳೂರಿನಲ್ಲಿ ಇದ್ದಾಗಲೇ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದು ಇಲ್ಲಿಗೆ ಆಗಮಿಸಿದ್ದೇನೆ. ನಾನು ಯಾವತ್ತೂ ಹೋರಾಟಗಾರರೊಂದಿಗೆ ಇದ್ದೇನೆ. ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಕಾರ್ಯವನ್ನು ಕೂಡಲೇ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎರಡು ಗ್ರಾಮಗಳ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಬೇಡಿಕೆ…
ಮುದ್ದೇಬಿಹಾಳ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಾಳಿಕಾ ದ್ವಿಚಕ್ರ ವಾಹನ ಸರ್ವೀಸ್ ಸೆಂಟರ್ ನ ಮಾಲೀಕ ಸಂತೋಷ ಕಂಬಾರ ಅವರು ಪ್ರತೀ ವರ್ಷದಂತೆ ಈ ವರ್ಷವೂ ಗಂಗಾ-ತುಂಗಾ ಎಂಬ ಎರಡು ಮಡಿಕೆಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೇವೆ ನೀಡಿ ಮಾದರಿಯಾದರು.ಈ ವೇಳೆ ಪ್ರಮುಖರಾದ ಮಹಾಂತೇಶ ಮಠಪತಿ, ಶಂಕರ ಶಿವಯೋಗಿಮಠ, ಬಸವರಾಜ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.
ಬ್ರಹ್ಮದೇವನಮಡು: ಸಿಂದಗಿ ಮತಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಕಾಯ೯ಕತ೯ರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎಂ.ಪಿ.ರಾಠೋಡ(ಡಂಬಳ) ಆರೋಪಿಸಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕೆ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಮೂಲ ಕಾಂಗ್ರೆಸೀಗರಿಗೆ ಯಾವುದೇ ರೀತಿಯ ಕಿಮ್ಮತ್ತಿಲ್ಲ. ಸಕಾ೯ರದ ನಾಮ ನಿದೇ೯ಶನ ಮಾಡುವುಲ್ಲಿ ಮೂಲ ಮತ್ತು ನಿಷ್ಠಾವಂತ ಕಾಂಗ್ರೆಸೀಗರಿಗೆ ಬೆಲೆ ಇಲ್ಲದಂತಾಗಿದೆ. ತಮ್ಮ ಹಿಂಬಾಲಕರನ್ನೇ ನಾಮನಿದೇ೯ಶನ ಮಾಡಿದ್ದಾರೆ. ಅಲ್ಲದೇ,ಲಂಬಾಣಿ ಸಮಾಜದ ಅಭಿವೃದ್ದಿಗೆ ಬಗ್ಗೆ ಸ್ವಲ್ಪವು ಕಾಳಜಿ ಮಾಡುತ್ತಿಲ್ಲ. ಸಿಂದಗಿಯಲ್ಲಿ ಶಾಸಕ ಅಶೋಕ ಮನಗೂಳಿ ಶಾಸಕರಾಗಲು ಕೇವಲ ಜೆಡಿಎಸ್ ನಿಂದ ವಲಸೆ ಬಂದವರು ಮಾತ್ರ ಮತ ಹಾಕಿದ್ದಾರೆಯೇ ? ಹಿಂದುಳಿದವರು – ಮುಸ್ಲಿಂ, ದಲಿತರು, ಲಂಬಾಣಿಗರು ಸೇರಿದಂತೆ ಎಲ್ಲ ಜಾತಿ ಜನಾಂಗದ ಜನತೆ ತಮಗೆ ಮತ ಹಾಕಿದ್ದನ್ನು ಮರೆಯಬಾರದು. ಪಕ್ಷದ ಕಾಯ೯ಕತ೯ರನ್ನು ವಿಶ್ವಾಸಕ್ಕೆ ತಗೆದುಕೊಂಡು ಅಧಿಕಾರ ಮಾಡುಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತೆ ಎಂದು ರಾಠೋಡ ಎಚ್ಚರಿಕೆ ನೀಡಿದ್ದಾರೆ.
ಮುದ್ದೇಬಿಹಾಳ: ಪಟ್ಟಣದಲ್ಲಿ ಈ ಬಾರಿ ರಂಗಿನಾಟ ಹೇಳಿ ಕೊಳ್ಳುವಷ್ಟು ಹುರುಪಿನಿಂದ ಕೂಡಿರಲಿಲ್ಲ.ಸೋಮುವಾರ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಇದ್ದವು. ಆದರೆ ಬಣ್ಣದಾಟದಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಭಾಗಿಯಾಗಿ ಸಂಭ್ರಮಿಸಿದರು.ಹರಣಶಿಕಾರಿ ಸಮುದಾಯದವರು ಪ್ರತೀ ವರ್ಷದಂತೆ ತಮ್ಮ ಹಲಿಗೆ ಬಡಿತದ ತಂಡದೊಂದಿಗೆ ವಿವಿಧ ಕಡತಗಳನ್ನು ಬಾರಿಸುತ್ತ, ಕುಣಿಯುತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುಖ್ಯ ಬಜಾರನಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.ಮಂಗಳವಾರವೂ ಹೇಳಿಕೊಳ್ಳುವಷ್ಟು ಹುರುಪು ತುಂಬಿರಲಿಲ್ಲ. ಕೆಲ ಏರಿಯಾಗಳಲ್ಲಿ ಮಾತ್ರ ಬಣ್ಣದಾಟದ ಸಂಭ್ರಮವಿತ್ತು. ಒಂದೆಡೆ ಬಿಸಿಲು ಇನ್ನೊಂದೆಡೆ ಬರಗಾಲ ಮತ್ತೊಂದೆಡೆ ಹಿರಿಯರ ನೇತೃತ್ವ ಇಲ್ಲದೇ ಆಟಕ್ಕೆ ಮಂಕು ಬಡಿದುಕೊಳ್ಳುವಂತೆ ಮಾಡಿತ್ತು.
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ವಿವೇಕ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳು ಬೇಸಿಗೆಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆಗೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಪಟ್ಟಣಕ್ಕೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವದು ಶ್ಲಾಘನೀಯ. ಇದೊಂದು ಉತ್ತಮ ಕಾರ್ಯ. ಜನರು ನೀರಿನ ಮಹತ್ವ ಅರಿತು ಅರವಟ್ಟಿಗೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಲು ಅರವಟ್ಟಿಗೆ ತುಂಬಾ ಸಹಕಾರಿಯಾಗುತ್ತದೆ. ವಿವೇಕ ಬ್ರಿಗೇಡ್ದವರು ಅರವಟ್ಟಿಗೆಯಿಂದ ಜನರು ನೀರು ತೆಗೆದುಕೊಳ್ಳುವಾಗ ರಸ್ತೆ ಬಾರದಂತೆ ನೋಡಿಕೊಳ್ಳವ ಜೊತೆಗೆ ಅದರ ಕೆಳಗೆ ನೀರಿನ ತೊಟ್ಟಿಯನ್ನು ಇಟ್ಟಿರುವುದು ಜಾನುವಾರುಗಳು ನೀರು ಕುಡಿಯಲು ಅನುಕೂಲವಾಗಿದೆ. ಇದರ ಪಕ್ಕದಲ್ಲಿರುವ ಗಿಡಗಳಲ್ಲಿ ಮಣ್ಣಿನ ಪರಾಣಿಯನ್ನು ನೇತು ಹಾಕಿ ಅದರಲ್ಲಿ ನೀರು ಹಾಕಿರುವದು ಪಕ್ಷಿಗಳಿಗೆ ನೀರು ಕುಡಿಯಲು ತುಂಬಾ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆ ಸಹ ಒಳ್ಳೆಯದು. ಈ ಸಲ ಕಳೆದ ವರ್ಷಕ್ಕಿಂತ ಬಿಸಿಲು ಹೆಚ್ಚಾಗಿದೆ. ಜನರು ನೀರು ಪೋಲಾಗದಂತೆ ಬಳಕೆ ಮಾಡುವುದು ಅಗತ್ಯವಿದೆ.…
ವಿಜಯಪುರ: ನಾದ ೩೩/೧೧ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦ಕೆವಿ ಮಾರ್ಗದ ಗೋಪುರ ಹಾಗೂ ತಂತಿ ಎಳೆಯುವ ಕಾಮಗಾರಿ ಕೈಗೊಂಡಿರುವಾದರಿಂದ, ಸದರಿ ವಿದ್ಯುತ ಉಪಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ಮಾ.೨೭ ಹಾಗೂ ಮಾ.೨೮ರಂದು ಬೆಳಗ್ಗೆ ೧೧ರಿಂದ ಸಾಯಂಕಾಲ ೫ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮದೇವನಮಡು: ಸುಡು ಬಿಸಿಲು ಲೆಕ್ಕಸದೆಯೇ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು-ಹೊನ್ನಳ್ಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಹಿರಿಯರು, ಯುವಕರು, ಚಿಣ್ಣರು, ವಿವಿಧ ವಣ೯ದ ಬಣ್ಣಗಳನ್ನು ಕೈಯಲ್ಲಿಡಿದು ಬೀದಿಗಿಳಿದು ಬಣ್ಣದಾಟವಾಡಿ ಮಧ್ಶಾಹ್ನ ೧ರವರೆಗೆ ಸಂಭ್ರಮಿಸಿದರು.ಸೋಮವಾರ ರಾತ್ರಿವರೆಗೆ ಕಾಮದಹನ ಮಾಡಿದ್ದ ಯುವಕರು ಮಂಗಳವಾರ ಬೆಳಗ್ಗೆಯಿಂದಲೇ ಬಣ್ಣದಾಟದಲ್ಲಿ ತೊಡಗಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚಿ ಬೊಬ್ಬೆ ಹಾಕುತ್ತ ಕುಣಿದು ಕುಪ್ಪಳಿಸಿದರು.ಈ ವೇಳೆ ಬಣ್ಣದಾಟದಲ್ಲಿ ಗ್ರಾಮದ ಹಿರಿಯರಾದ ರುದ್ರಣ್ಣಸಾಹು ಮಾನಶೇಟ್ಟಿ, ಸಿದ್ದಯ್ಶ ಮಠ, ದೇವಿಂದ್ರ ತೊನಶ್ಶಾಳ, ಗುರಸಿದ್ದಪ್ಪ ಮನಗೂಳಿ, ನಿಂಗಣ್ಣ ಕೋರವಾರ, ನಡಗೇರಪ್ಪ ತಳವಾರ, ಮಲ್ಲಿಕಾಜು೯ನ ಯಲಗೋಡ, ಗೋಲ್ಲಾಳಪ್ಪ ಕರಿಕಲ್ಲ್, ಭೀಮು ಕೆಂಭಾವಿ, ಮಲ್ಲು ಅಲ್ಲಾಪೂರ, ಶ್ರವಣಕುಮಾರ ಕೆಂಭಾವಿ, ಶರಣು ಮನಗೂಳಿ, ಅಂಬ್ರುತ್ ದೊಡ್ಡಮನಿ, ಶರಣು ಹರಿಜನ, ಚನ್ನಪ್ಪ ಕೆಂಭಾವಿ, ಮುತ್ತು ಕರಿಕಲ್ಲ್ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು.
ಇಂಡಿ, ಚಡಚಣ, ಅಪಜಲ್‌ಪುರ ತಾಲೂಕಿನ ಗ್ರಾಮಗಳಿಗೆ ನೀರು ಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ ಗೆ ಮನವಿ ಇಂಡಿ: ಪಟ್ಟಣ, ಚಡಚಣ ಮತ್ತು ಅಪಜಲ್‌ಪುರ ತಾಲೂಕಿನಲ್ಲಿ ಹರಿಯುವ ಭೀಮಾ ನದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಇಂಡಿ ಶಾಖಾ ಕಾಲುವೆಯಿಂದ ಒಂದು ಟಿ.ಎಂ.ಸಿ ನೀರು ಬಿಡಬೇಕೆಂದು ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ಅಪಜಲಪುರ ಶಾಸಕ ಎಂ.ವೈ. ಪಾಟೀಲರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರಿಗೆ ಮನವಿ ಮಾಡಿದ್ದಾರೆ.ಪ್ರಸಕ್ತ ವರ್ಷ ಭೀಕರ ಬರಗಾಲ ಇರುವದರಿಂದ ನದಿ, ಕೆರೆ ಹಳ್ಳ ಕೊಳ್ಳಗಳು ಜಲಮೂಲಗಳು ಬತ್ತಿಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅತೀವ ತೊಂದರೆ ಯಾಗುತ್ತಿವೆ. ಹೀಗಾಗಿ ಐ.ಬಿ.ಸಿ ಮುಖಾಂತರ ಎಸ್ಕೇಪ್ ಕಿಮಿ ೯೩, ೧೧೮, ೧೩೩, ೧೪೩,೧೬೦, ೧೬೭ ಮುಖಾಂತರ ಸುಮಾರು ಪ್ರತಿದಿನ ೧೫೦ ಕ್ಯೂಸೆಕ್ಸ ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿದ್ದಾರೆ.ಮಹಾರಾಷ್ಟ್ರ ಸರಕಾರ ಪ್ರತಿ ವರ್ಷ ಬೇಸಿಗೆಯಲ್ಲಿ ಉಜನಿ ಆಣೆಕಟ್ಟಿನಿಂದ ಎರಡು ಟಿ.ಎಂ.ಸಿ ನೀರು ಬಿಡುತ್ತಿದ್ದರು. ಈ ಬಾರಿ ಬಿಟ್ಟಿಲ್ಲ. ಹೀಗಾಗಿ…
ಸಿಂದಗಿ: ನಗರದಲ್ಲಿ ಪ್ರತಿ ವರ್ಷದಂತೆ ಜನನಿಬಿಡ ಸ್ಥಳಗಳಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ನೀರಿನ ಅರವಟಿಗೆಗಳನ್ನು ಅಳವಡಿಸಲಾಯಿತು.ಈ ವೇಳೆ ವೇದಿಕೆಯ ಸಂಚಾಲಕ ಮೌಲಾನಾ ದಾವುದ ನದ್ವಿ ಅವರು ಮಾತನಾಡಿ, ನೀರು ನೀಡುವುದು ಒಂದು ದೊಡ್ಡ ಪ್ರತಿಫಲದ ಸೇವೆ ಹಾಗೂ ಮಹಾ ಕಾರ್ಯಯಾಗಿದೆ. ಬೇಸಿಗೆಯ ಸಮಯದಲ್ಲಿ ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯು ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಪರಸ್ಪರ ಸಹಕಾರ ಮತ್ತು ಪ್ರೀತಿಯ ಮನೋಭಾವವನ್ನು ಬೆಳೆಸುವುದು ಈ ವೇದಿಕೆಯ ಉದ್ದೇಶವಾಗಿದೆ. ಮನುಷ್ಯರಲ್ಲಿ ಸಹೋದರತೆ, ಪ್ರೀತಿ ಮತ್ತು ಸಹಾನುಭೂತಿಯ ಗುಣವನ್ನು ಪ್ರಚುರಪಡಿಸುವ ಸಂದೇಶವಾಗಿದೆ. ಹಸಿವು, ಬಾಯಾರಿಕೆ ಮತ್ತು ಗಾಳಿಯು ಮಾನವ ಜೀವನದ ಮೂಲಭೂತ ಅವಶ್ಯಕತೆಗಳು. ಇವುಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ಈ ಮೂಲಭೂತ ವಸ್ತುಗಳನ್ನು ನಿರ್ಗತಿಕರಿಗೆ ತಲುಪಿಸುವುದು ಅವರಿಗಾಗಿ, ಅನುಕೂಲತೆಯನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿ ಎಂದರು.ಮೌಲಾನಾ ಕಲೀಮುಲ್ಲಾ ಮೌಲಾನಾ ಮಕತೂಮ…
