ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ವಿವೇಕ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳು ಬೇಸಿಗೆಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆಗೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಪಟ್ಟಣಕ್ಕೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವದು ಶ್ಲಾಘನೀಯ. ಇದೊಂದು ಉತ್ತಮ ಕಾರ್ಯ. ಜನರು ನೀರಿನ ಮಹತ್ವ ಅರಿತು ಅರವಟ್ಟಿಗೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಲು ಅರವಟ್ಟಿಗೆ ತುಂಬಾ ಸಹಕಾರಿಯಾಗುತ್ತದೆ. ವಿವೇಕ ಬ್ರಿಗೇಡ್ದವರು ಅರವಟ್ಟಿಗೆಯಿಂದ ಜನರು ನೀರು ತೆಗೆದುಕೊಳ್ಳುವಾಗ ರಸ್ತೆ ಬಾರದಂತೆ ನೋಡಿಕೊಳ್ಳವ ಜೊತೆಗೆ ಅದರ ಕೆಳಗೆ ನೀರಿನ ತೊಟ್ಟಿಯನ್ನು ಇಟ್ಟಿರುವುದು ಜಾನುವಾರುಗಳು ನೀರು ಕುಡಿಯಲು ಅನುಕೂಲವಾಗಿದೆ. ಇದರ ಪಕ್ಕದಲ್ಲಿರುವ ಗಿಡಗಳಲ್ಲಿ ಮಣ್ಣಿನ ಪರಾಣಿಯನ್ನು ನೇತು ಹಾಕಿ ಅದರಲ್ಲಿ ನೀರು ಹಾಕಿರುವದು ಪಕ್ಷಿಗಳಿಗೆ ನೀರು ಕುಡಿಯಲು ತುಂಬಾ ಅನುಕೂಲವಾಗುವಂತೆ ಮಾಡಿರುವ ವ್ಯವಸ್ಥೆ ಸಹ ಒಳ್ಳೆಯದು. ಈ ಸಲ ಕಳೆದ ವರ್ಷಕ್ಕಿಂತ ಬಿಸಿಲು ಹೆಚ್ಚಾಗಿದೆ. ಜನರು ನೀರು ಪೋಲಾಗದಂತೆ ಬಳಕೆ ಮಾಡುವುದು ಅಗತ್ಯವಿದೆ. ನೀರಿನ ಮಹತ್ವ ಅರಿತು ಅದರ ಬಳಕೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ವಿವೇಕ ಬಿಗ್ರೇಡ್ದ ವಿನುತ ಕಲ್ಲೂರ,ರವಿಗೌಡ ಚಿಕ್ಕೊಂಡ, ಸಚೀನ ಕಲ್ಲೂರ, ಶಿವಾನಂದ ತೋಳನೂರ, ಸಂಗಮೇಶ ಹುಜರತಿ, ಪ್ರಭಾಕರ ಖೇಡದ, ಕಾಶೀನಾಥ ಅವಟಿ, ಮಹೀಂದ್ರ ಕೋಮಾವತ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

