ಸಿಂದಗಿ: ನಗರದಲ್ಲಿ ಪ್ರತಿ ವರ್ಷದಂತೆ ಜನನಿಬಿಡ ಸ್ಥಳಗಳಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ನೀರಿನ ಅರವಟಿಗೆಗಳನ್ನು ಅಳವಡಿಸಲಾಯಿತು.
ಈ ವೇಳೆ ವೇದಿಕೆಯ ಸಂಚಾಲಕ ಮೌಲಾನಾ ದಾವುದ ನದ್ವಿ ಅವರು ಮಾತನಾಡಿ, ನೀರು ನೀಡುವುದು ಒಂದು ದೊಡ್ಡ ಪ್ರತಿಫಲದ ಸೇವೆ ಹಾಗೂ ಮಹಾ ಕಾರ್ಯಯಾಗಿದೆ. ಬೇಸಿಗೆಯ ಸಮಯದಲ್ಲಿ ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯು ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಪರಸ್ಪರ ಸಹಕಾರ ಮತ್ತು ಪ್ರೀತಿಯ ಮನೋಭಾವವನ್ನು ಬೆಳೆಸುವುದು ಈ ವೇದಿಕೆಯ ಉದ್ದೇಶವಾಗಿದೆ. ಮನುಷ್ಯರಲ್ಲಿ ಸಹೋದರತೆ, ಪ್ರೀತಿ ಮತ್ತು ಸಹಾನುಭೂತಿಯ ಗುಣವನ್ನು ಪ್ರಚುರಪಡಿಸುವ ಸಂದೇಶವಾಗಿದೆ. ಹಸಿವು, ಬಾಯಾರಿಕೆ ಮತ್ತು ಗಾಳಿಯು ಮಾನವ ಜೀವನದ ಮೂಲಭೂತ ಅವಶ್ಯಕತೆಗಳು. ಇವುಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ಈ ಮೂಲಭೂತ ವಸ್ತುಗಳನ್ನು ನಿರ್ಗತಿಕರಿಗೆ ತಲುಪಿಸುವುದು ಅವರಿಗಾಗಿ, ಅನುಕೂಲತೆಯನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿ ಎಂದರು.
ಮೌಲಾನಾ ಕಲೀಮುಲ್ಲಾ ಮೌಲಾನಾ ಮಕತೂಮ ಹಾಜಿ ನಾಸಿರುದ್ದೀನ ರಾಜಶೇಖರ ನರಗೋದಿ, ವಿಧ್ಯಾ ಮೇಡಂ ತಾಲೂಕ ಆಸ್ಪತ್ರೆಯ ವೈದ್ಯರು, ಪೋಲಿಸ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

