ಬ್ರಹ್ಮದೇವನಮಡು: ಸುಡು ಬಿಸಿಲು ಲೆಕ್ಕಸದೆಯೇ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು-ಹೊನ್ನಳ್ಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಹಿರಿಯರು, ಯುವಕರು, ಚಿಣ್ಣರು, ವಿವಿಧ ವಣ೯ದ ಬಣ್ಣಗಳನ್ನು ಕೈಯಲ್ಲಿಡಿದು ಬೀದಿಗಿಳಿದು ಬಣ್ಣದಾಟವಾಡಿ ಮಧ್ಶಾಹ್ನ ೧ರವರೆಗೆ ಸಂಭ್ರಮಿಸಿದರು.
ಸೋಮವಾರ ರಾತ್ರಿವರೆಗೆ ಕಾಮದಹನ ಮಾಡಿದ್ದ ಯುವಕರು ಮಂಗಳವಾರ ಬೆಳಗ್ಗೆಯಿಂದಲೇ ಬಣ್ಣದಾಟದಲ್ಲಿ ತೊಡಗಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚಿ ಬೊಬ್ಬೆ ಹಾಕುತ್ತ ಕುಣಿದು ಕುಪ್ಪಳಿಸಿದರು.
ಈ ವೇಳೆ ಬಣ್ಣದಾಟದಲ್ಲಿ ಗ್ರಾಮದ ಹಿರಿಯರಾದ ರುದ್ರಣ್ಣಸಾಹು ಮಾನಶೇಟ್ಟಿ, ಸಿದ್ದಯ್ಶ ಮಠ, ದೇವಿಂದ್ರ ತೊನಶ್ಶಾಳ, ಗುರಸಿದ್ದಪ್ಪ ಮನಗೂಳಿ, ನಿಂಗಣ್ಣ ಕೋರವಾರ, ನಡಗೇರಪ್ಪ ತಳವಾರ, ಮಲ್ಲಿಕಾಜು೯ನ ಯಲಗೋಡ, ಗೋಲ್ಲಾಳಪ್ಪ ಕರಿಕಲ್ಲ್, ಭೀಮು ಕೆಂಭಾವಿ, ಮಲ್ಲು ಅಲ್ಲಾಪೂರ, ಶ್ರವಣಕುಮಾರ ಕೆಂಭಾವಿ, ಶರಣು ಮನಗೂಳಿ, ಅಂಬ್ರುತ್ ದೊಡ್ಡಮನಿ, ಶರಣು ಹರಿಜನ, ಚನ್ನಪ್ಪ ಕೆಂಭಾವಿ, ಮುತ್ತು ಕರಿಕಲ್ಲ್ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

