ಮುದ್ದೇಬಿಹಾಳ: ಪಟ್ಟಣದಲ್ಲಿ ಈ ಬಾರಿ ರಂಗಿನಾಟ ಹೇಳಿ ಕೊಳ್ಳುವಷ್ಟು ಹುರುಪಿನಿಂದ ಕೂಡಿರಲಿಲ್ಲ.
ಸೋಮುವಾರ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಇದ್ದವು. ಆದರೆ ಬಣ್ಣದಾಟದಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಭಾಗಿಯಾಗಿ ಸಂಭ್ರಮಿಸಿದರು.
ಹರಣಶಿಕಾರಿ ಸಮುದಾಯದವರು ಪ್ರತೀ ವರ್ಷದಂತೆ ತಮ್ಮ ಹಲಿಗೆ ಬಡಿತದ ತಂಡದೊಂದಿಗೆ ವಿವಿಧ ಕಡತಗಳನ್ನು ಬಾರಿಸುತ್ತ, ಕುಣಿಯುತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುಖ್ಯ ಬಜಾರನಲ್ಲಿ ಬೆರಳಿಕೆಯಷ್ಟು ಜನ ಮಾತ್ರ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಮಂಗಳವಾರವೂ ಹೇಳಿಕೊಳ್ಳುವಷ್ಟು ಹುರುಪು ತುಂಬಿರಲಿಲ್ಲ. ಕೆಲ ಏರಿಯಾಗಳಲ್ಲಿ ಮಾತ್ರ ಬಣ್ಣದಾಟದ ಸಂಭ್ರಮವಿತ್ತು. ಒಂದೆಡೆ ಬಿಸಿಲು ಇನ್ನೊಂದೆಡೆ ಬರಗಾಲ ಮತ್ತೊಂದೆಡೆ ಹಿರಿಯರ ನೇತೃತ್ವ ಇಲ್ಲದೇ ಆಟಕ್ಕೆ ಮಂಕು ಬಡಿದುಕೊಳ್ಳುವಂತೆ ಮಾಡಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

