ಆಲಮೇಲ: ಪಟ್ಟಣದಲ್ಲಿ ಮಂಗಳವಾರ ಹೋಳಿ ಹಬ್ಬ ಬಣ್ಣದ ಆಟ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಿದರು.
ಮಂಗಳವಾರ ಹೋಳಿ ಹಬ್ಬದ ನಿಮಿತ್ಯವಾಗಿ ನಡೆದ ಬಣ್ಣದ ಆಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರು ಸಡಗರದಿಂದ ಬಣ್ಣದಾಟ ಆಡಿ ಸಂಭ್ರಮಿಸಿದರು. ನಂತರ ಸಾಯಂಕಾಲ ಜನರನ್ನು ಮನರಂಜಿಸಲು ಅಣಕು ಶವಯಾತ್ರೆ ಮಾಡಲಾಯಿತು.
ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಬ್ಬದಂದು ಬಣ್ಣ ಆಡಿ ಪಟ್ಟಣದ ಕೆಲವು ನಗರದಲ್ಲಿ ಸಾಯಂಕಾಲ ಅಣಕು ಶವಯಾತ್ರೆ ಮಾಡುವದು ಇಲ್ಲಿನ ಪದ್ದತಿ. ಶವ ಯಾತ್ರೆಯಲ್ಲಿ ಮೃತನ ಹೆಂಡತ್ತಿ ಮತ್ತು ಮಗಳು ಆತನ ಬಗ್ಗೆ ಹೊಗಳಿಕೊಂಡು ಅಳುತ್ತಿರುವ ದೃಶ್ಯ ಜನರನ್ನು ನಗೆಗಡಲಲ್ಲಿ ತೇಲಿಸಿತು.
ಈ ವರ್ಷ ಹುಣ್ಣಿಮೆ ಎರಡು ಇರುವದರಿಂದ ಗೊಂದಲದಿಂದ ಸೋಮವಾರ ಹೋಳ್ಳಿ ಹುಣ್ಣಿಮೆ ಆಚರಿಸಿ ಅಂದೇ ರಾತ್ರಿ ಕಾಮದಹನ ಮಾಡಿ ಮಂಗಳವಾರ ಬಣ್ಣದ ಆಟವಾಡಿದರು.
ಪತಂಜಲಿ ಯೋಗ ಸಮಿತಿಯವರು ರಾಸಾಯನಿಕ ಬಣ್ಣದ ಆಟವಾಡಿ ಹೋಳಿ ಹುಣ್ಣಿಮೆಯ ಬಣ್ಣದೋಕಳಿ ಸಂಬ್ರಮದಿಂದ ಆಚರಿಸಿದರು.
ಪಟ್ಟಣದ ಕಡಣಿ ಅಗಸಿ ನಗರದ ನೂರಾರು ಯುವಕರು ಅಣಕು ಶವಯಾತ್ರೆ ಮಾಡಿ ಡಿಜೆ ಸೌಂಡ ದ್ವನಿವರ್ದಕ ಮೂಲಕ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಅದ್ದೂರಿಯಾರಿ ಬಣ್ಣದಾಟವಾಡಿ ಸಂಭ್ರಮಿಸಿದರು.
ಪತಂಜಲಿ ಯೋಗಸಮಿತಿಯ ಲಕ್ಷ್ಮೀ ಗುಣಾರಿ, ಸುನೀಲ ನಾರಾಯಣಕರ, ಗೀರಿಮಲ್ಲ ಅವರಾದಿ, ಅನ್ನಪೂರ್ಣ ಪುರಾಣಿಕ, ಲಕ್ಷ್ಮೀ ಅವರಾದಿ, ಗ್ರಾಮದ ಮುಖಂಡರಾದ ಶ್ರೀಶೈಲ ಭೋವಿ, ಸಿದ್ದಣ್ಣ ಪಾಟೀಲ ಮಲಘಾಣ, ಚಿತ್ರನಟ ಸಂತೋಷ ಉಪ್ಪಿನ, ಪರಸು ತಳವಾರ, ಶಿವಯ್ಯ ಮಠ, ಸಿದ್ದು ಪಾಲವೆ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

