Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಝಳಕಿ: ಸುಡುವ ಬಿಸಿಲಿನ ತಾಪದಲ್ಲಿ ಭಕ್ತರ ತಣ್ಣನೆಯ ಮಜ್ಜಿಗೆ ನಿಡುತ್ತ ಜನ ಸೇವೆಯೇ ಜನಾರ್ದನ ಸೇವೆ ಎಂದು ಯುವ ಮುಖಂಡ ರಾಘವೇಂದ್ರ ಕಾಪಸೆ ಹೇಳಿದರು.ಸಮೀಪದ ಸುಕ್ಷೇತ್ರ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರರ 38ನೇ ಪುಣ್ಯಾರಾಧನೆ ನಿಮಿತ್ತ ಬಂದ ಭಕ್ತರಿಗೆ ಮಜ್ಜಿಗೆ ಸೇವೆ ಸಲ್ಲಿಸಿದರುಜಾತ್ರೆಗೆ ಬಂದ ಭಕ್ತರಿಗೆ ಸುಮಾರು15 ರಿಂದ 20 ಸಾವಿರ ಲೀಟರ್ ನಷ್ಟು ಮಜ್ಜಿಗೆ ತಯಾರಿಸಿ ಜನಸಾಗರಕ್ಕೆ ವಿತರಣೆ ಮಾಡಲಾಯಿತು.ಈ ವೇಳೆ ಸುನೀಲ ಹೂಗಾರ, ವಿಠ್ಠಲ ಕಾಗರ, ಜಾಕಿರ್ ನದಾಪ್, ಸುರೇಶ ಹೂಗಾರ, ಸಿದ್ದರಾಮ ಕಾಪಸೆ ಸೇರಿದಂತೆ ಇತರರು ಇದ್ದರು.
ವಿಜಯಪುರ: ಜಿಲ್ಲೆಯ ಒಬ್ಬ ಸಂಸದ ಜಿಲ್ಲೆಯ ಜನರ ಕಷ್ಟಗಳನ್ನು ಕೇಳದೆ ಒಂದುಬಾರಿಯೂ ಲೋಕಸಭೆಯಲ್ಲಿ ಮಾತನಾಡದೆ ಇರುವ ರಮೇಶ ಜಿಗಜೆಣಗಿಯವರು ಬಂಜಾರ ಸಮುದಾಯವನ್ನು ಹೀಯಾಳಿಸಿ ಮಾತನಾಡಿದ ಕಾಕಾ ಮಾಮಾ ಗೌಡ್ರ ಎಂದು ಮೋದಿಯ ಹೆಸರೇಳಿ ಮೂರು ಬಾರಿ ಆರಿಸಿ ಬಂದ ರಮೇಶ ಜಿಗಜಿಣಗಿಯವರು ಮತ್ತೆ ವೋಟು ಕೇಳಲು ಬರುತ್ತಿದ್ದಾರೆ.ಈ ಬಾರಿ ನಮ್ಮ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಈ ಜಿಲ್ಲೆಯ ಜನರು ಸಂಸದ ರಮೇಶ ಜಿಗಜೆಣಗಿಗೆ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ. ಹಾಗೂ ರಾಜು ಆಲಗೂರ ಅವರ ಗೆಲುವು ಸೂರ್ಯ ಚಂದ್ರ ಹುಟ್ಟಿ ಮುಳುಗೊದು ಎಷ್ಟು ಸತ್ಯವೋ ಅಷ್ಟೇ ಸತ್ಯ. ರಾಜು ಆಲಗೂರವರು ಸಂಸದರಾಗುತ್ತಾರೆ. ವಿಜಯಪುರ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಆಗುತ್ತೆ. ಕಾರಣ ಆಲಗೂರವರನ್ನು ಗೆಲ್ಲಿಸಬೇಕೆಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕಾಲುವೆಗಳ ಕ್ಲೋಜರ್ ಕಾಮಗಾರಿ ನಡೆಸಲು ನೀತಿ ಸಂಹಿತೆಯಿಂದ ವಿನಾಯಿತಿ ನೀಡಿ ಕಾಮಗಾರಿಗೆ ಅನುಮತಿ ನೀಡಬೇಕೆಂದು ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರಿಗೆ ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಲಾಲ್ ಬಹದ್ಧೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಲ್ಲಿ ಬೆಳೆದಿರುವ ಮುಳ್ಳು ಕಂಟಿಗಳು ಇನ್ನೀತರ ಗಿಡಗಂಟಿಗಳು ಹಾಗೂ ಹೂಳು ತುಂಬಿರುವುದರಿಂದ ಪ್ರತಿ ಬಾರಿಯು ಕಾಲುವೆಗಳಿಗೆ ನೀರು ಹರಿಸಿದಾಗ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪದೆ ಕೊನೆಯ ಭಾಗದ ರೈತರು ನೀರಿನಿಂದ ವಂಚಿತರಾಗುತ್ತಾರೆ. ಕಳೆದ ವರ್ಷವು ಕೂಡಾ ವಿವಿಧ ಕಾಲುವೆಗಳ ದುರಸ್ತಿಯ ಕ್ಲೋಜರ್ ಕಾಮಗಾರಿಯನ್ನು ಅನುದಾನದ ಕೊರತೆಯಿಂದ ಕಾಮಗಾರಿ ಮಾಡಲಿಲ್ಲ ಈ ಭಾರಿಯೂ ಕೂಡಾ ಕ್ಲೋಜರ್ ಕಾಮಗಾರಿ ಪ್ರಾರಂಭಿಸುವುದು ಅನುಮಾನವಾಗಿದೆ. ಈ ಭಾರಿ ಲೋಕಸಭಾ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾಮಗಾರಿಗೆ…
ಚುನಾವಣಾ ಪ್ರಚಾರಾರ್ಥ ಕಾರ್ಯಕರ್ತರ ಸಭೆ | ಶಾಸಕ ಅಶೋಕ ಮನಗೂಳಿ ಮನವಿ ಮೋರಟಗಿ: ಕಳೆದ ಎರಡು ಬಾರಿಯೂ ಕೂಡಾ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತದಾರರಿಗೆ ಮರಳು ಮಾಡಿ ಅಧಿಕಾರಕ್ಕೆ ಬಂದಿದೆ ಹೊರತು ಅಭಿವೃದ್ಧಿಯಿಂದಲ್ಲ, ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸಿ ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.ಲೋಕಸಭಾ ಚುನಾವಣೆ ಪ್ರಯುಕ್ತ ಮಂಗಳವಾರ ಸಾಯಂಕಾಲ ಗ್ರಾಮದ ಕೇರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಸರಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದೆ ಸದ್ಯಕ್ಕೆ ರಾಹುಲ್ ಗಾಂಧಿ ಅವರು ಕೊಟ್ಟಿರುವ ಎಲ್ಲ ಭರವಸೆಗಳು ಕೂಡಾ ಖಂಡಿತವಾಗಿಯೂ ಈಡೇರಿಸುತ್ತಾರೆ ಎನ್ನುವ ಭರವಸೆ ನಮ್ಮಲ್ಲಿದೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ನಂತರ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಈ ದೇಶದಲ್ಲಿರುವ ನಿರ್ಗತಿಕರ ಬಡವರ ದೀನ ದಲಿತರ ಹಿಂದುಳಿದ ವರ್ಗಗಳ ಪಾಲಿನ ಆಶಾ ಕಿರಣವಾಗಿ…
ವಿಜಯಪುರ: ಪ್ರಜ್ಞಾವಂತ ಯುವ ಮತದಾರರು ಕಡ್ಡಾಯವಾಗಿ ದೇಶ ಮೊದಲು ಎಂಬ ಪ್ರಜ್ಞೆಯೊಂದಿಗೆ ಮತ ಚಲಾಯಿಸಬೇಕಾಗಿದೆ ಯುವಶಕ್ತಿಯನ್ನು ಅರ್ಥ ಮಾಡಿಕೊಂಡು ದುಡಿಯುವ ಕೈಗಳಿಗೆ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವ ಯುವ ಸ್ನೇಹಿ ಸರ್ಕಾರವನ್ನ ಪ್ರತಿಷ್ಠಾಪಿಸಬೇಕಾಗಿದೆ ಎಂದು ಎಬಿವಿಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಹೇಳಿದರು.ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಮತದಾನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ವಿಶೇಷ ಮೌಲ್ಯವಿದೆ ಮಹತ್ವವಿದೆ, ಭಾರತದ ಇತಿಹಾಸದಲ್ಲಿ ಕೇವಲ ಒಂದು ಮತದ ಕೊರತೆಯಿಂದ ಜನಪರ ಸರ್ಕಾರವು ಕುಸಿದು ಬಿದ್ದಿರುವ ಉದಾರಣೆ ಇದೆ. ಒಂದು ಮತದ ಅಂತರದಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಸೋತಿರುವ ನಿದರ್ಶನಗಳಿವೆ. ಹೀಗಿರುವಾಗ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಭಾರತೀಯರು ತಮ್ಮ ಮತವನ್ನ ಚಲಾಯಿಸಬೇಕೆಂದು ಕರೆ ನೀಡಿದರು.ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಸದೃಢ ಸಶಕ್ತ ಸ್ವಾಭಿಮಾನಿ ಭಾರತಕ್ಕಾಗಿ ಭಯೋತ್ಪಾದನಾ ಮುಕ್ತ ಭಾರತಕ್ಕಾಗಿ, ದೇಶ ವಿಭಜಕ ಶಕ್ತಿಗಳ ವಿರುದ್ಧ ರಾಷ್ಟ್ರದ ಏಳಿಗೆಗಾಗಿ,…
ದೇವರಹಿಪ್ಪರಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಧರ್ಮದ ಕುರಿತು ಚಿಂತನೆ ಹಾಗೂ ಲಿಂಗ ಸಂಸ್ಕಾರ ಇಂದು ಅತ್ಯಂತ ಅಗತ್ಯವಾಗಿದೆ ಎಂದು ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಜಡಿಮಠ ಆವರಣದಲ್ಲಿ ಮಂಗಳವಾರ ಜರುಗಿದ ವೀರಶೈವ ಲಿಂಗಾಯತ ಧರ್ಮಯಾತ್ರೆ ಹಾಗೂ ಸಂಸ್ಕಾರ ಶಿಬಿರದ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ನಮ್ಮ ಮಕ್ಕಳಲ್ಲಿ ಇಷ್ಟಲಿಂಗ ಪೂಜೆ, ಅಷ್ಠಾವರಣ ಸೇರಿದಂತೆ ವೀರಶೈವ ಲಿಂಗಾಯತ ಧರ್ಮ ಪರಂಪರೆಯ ಮಾಹಿತಿಯ ಕೊರತೆಯಿದೆ. ಇದನ್ನು ಸರಿದೂಗಿಸಲು ಕನಿಷ್ಟ ೨ ದಿನ ಪ್ರತಿ ಗ್ರಾಮದಲ್ಲಿ ಶಿಬಿರ ಏರ್ಪಡಿಸಿ ಸಂಸ್ಕಾರ ನೀಡುವ ಅಗತ್ಯತೆಯಿದೆ ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.ಸದಯ್ಯನಮಠದ ವೀರಗಂಗಾಧರಶ್ರೀ ಹಾಗೂ ತಪೋಧಾಮದಶ್ರೀ ಮಾತನಾಡಿ, ಸಂಸ್ಕಾರ ಶಿಬಿರ ಅತ್ಯಂತ ಸಮಯೋಚಿತವಾಗಿದೆ. ಇದಕ್ಕೆ ಜನತೆಯ ಅಭಿಪ್ರಾಯ ಅರಿತು ಶಿಬಿರದ ರೂಪುರೇಷೆಗಳು, ಸಂದರ್ಭ, ಸ್ಥಳ ನಿಗದಿಪಡಿಸುವುದು ಅಗತ್ಯವಾಗಿದೆ ಎಂದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ನಿವೃತ್ತ ಉಪನ್ಯಾಸಕ ಎಂ.ಆರ್.ಶಿರಸಂಗಿಮಠ, ಸಿದ್ಧು ಆನಂದಿ ತಮ್ಮ ಅನಿಸಿಕೆ…
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲೂಕಾ ಅಧ್ಯಕ್ಷರನ್ನಾಗಿ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಎಂ.ಹೆಚ್.ಪೂಜಾರಿ ಅವರನ್ನು ನೇಮಕ ಮಾಡಿ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿ ರೈತಪರವಾದ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.ಇಡೀ ಜಗತ್ತಿನಲ್ಲಿ ಶೇ ೭೫% ರಷ್ಟು ಜನರು ಉದ್ಯೋಗಕ್ಕಾಗಿ ಕೃಷಿಯನ್ನೆ ಅವಲಂಭಿಸಿದ್ದಾರೆ, ಹಾಗೆ ದೇಶದ ಪ್ರಗತಿಯಲ್ಲಿ ಕೃಷಿಯ ಪಾತ್ರ ಬಹು ದೊಡ್ಡದಾಗಿದೆ, ಆದರೆ ವಾಸ್ತವದಲ್ಲಿ ರೈತರಿಗೆ ದಿನನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿ ಅದನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ, ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ಅನ್ಯಾಯವಾದರೆ ತಕ್ಷಣದಲ್ಲಿ ಕಂಕಣಬದ್ದರಾಗಿ ನ್ಯಾಯಕ್ಕಾಗಿ ನಾವೂ ನೀವೆಲ್ಲರೂ ನಿಲ್ಲಬೇಕು, ಸಂಘಟನೆಯಲ್ಲಿ ಬಡವ ಬಲ್ಲಿದ, ಮೇಲು ಕೀಳು, ಹಿರಿಯ ಕಿರಿಯ ಎಂಬಿತ್ಯಾದಿ ತಾರತಮ್ಯ ಎಸಗದೇ, ಇದರಲ್ಲಿ ರಾಜಕೀಯ ಮಾಡದೇ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರನ್ನು ಸಮಾನಾಗಿ ಕಾಣಬೇಕು ಎಂದರು.ಅದೇ ರೀತಿ ಇಂಡಿ ತಾಲೂಕಿನಲ್ಲಿ ಬರುವ…
ದೇವರಹಿಪ್ಪರಗಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಪ್ರಬಲ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದ ಖ್ಯಾತ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಎಬಿಡಿ ಫೌಂಡೇಷನ್ ಅಧ್ಯಕ್ಷ ಆನಂದಗೌಡ ದೊಡ್ಡಮನಿ ಇವರುಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಲೋಕಸಭೆಯ ಚುನಾವಣೆ ಹೊಸ್ತಿಲಲ್ಲಿ ೧೩೮ ಜನ ಸದಸ್ಯರನ್ನು ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದು, ಇದರಲ್ಲಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಈರ್ವರನ್ನು ಗುರುತಿಸಿ, ಈ ನೇಮಕ ಆದೇಶ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ.
ಜೇವೂರ ರೇವಣಸಿದ್ಧೇಶ್ವರ 38ನೇ ಪುಣ್ಯಾರಾಧನೆ | ಭವ್ಯ ರಥೋತ್ಸವ | ಜನಮನ ರಂಜಿಸಿದ ಕುಸ್ತಿ ಸೆಣಸಾಟ ಚಡಚಣ: ಸಮೀಪದ ಸುಕ್ಷೇತ್ರ ಜೇವೂರ ಕೈವಲ್ಯಧಾಮ ಮಠದ ಹಠಯೋಗಿ ರೇವಣಸಿದ್ಧೇಶ್ವರ ಮಹಾರಾಜರ 38 ನೇ ಪುಣ್ಯಾರಾಧನೆ ಪ್ರತಿ ವರ್ಷದಂತೆ ಐದು ದಿನಗಳ ಕಾಲ ಅತಿ ವೈಭವದಿಂದ ಜರುಗಿ, ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು.ಜಾತ್ರಾ ಮಹೋತ್ಸವದ ಕೊನೆಯ ದಿನ ಮಂಗಳವಾರದಂದು ಬೆಳಗಿನ ಜಾವ 4 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೇರವೇರಿಸಲಾಯಿತು. ನಂತರ ತೋಟದ ದೇವಸ್ಥಾನದಿಂದ ರೇವಣಸಿದ್ಧೇಶ್ವರ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೇರವಣಿಗೆ ಆನೆಯ ಅಂಬಾರಿ ಮೇಲೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ, ದೇವಸ್ಥಾನ ತಲುಪಿ, ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಮೂಲ ಗದ್ದುಗೆಗೆ ಅಸಂಖ್ಯಾತ ಭಕ್ತಸ್ತೋಮದ ಸಮ್ಮುಖದಲ್ಲಿ ಭಕ್ತಿ-ಭಾವದಿಂದ ಪುಷ್ಪವೃಷ್ಠಿ ಕಾರ್ಯಕ್ರಮ ನೇರವೇರಿತು.ಮಧ್ಯಾಹ್ನ 3-30 ಗಂಟೆ ಸುಮಾರಿಗೆ ರೇವಣಸಿದ್ಧೇಶ್ವರ ದೇವಸ್ಥಾನ ಹಿಂಭಾಗದ ಮೈದಾನದಲ್ಲಿ ಅಸಂಖ್ಯಾತ ಜನಸ್ತೋಮದೊಂದಿಗೆ ವಿವಿಧ ಶ್ರೀಗಳ ಸಮ್ಮುಖದಲ್ಲಿ ಅದ್ಧೂರಿ ರಥೋತ್ಸವ ಸಮಾರಂಭ…
ಅಫಜಲಪುರ: ಭಾರತ ಸಂವಿಧಾನದಲ್ಲಿ ಮತದಾನದ ಅರ್ಹತೆ ಪಡೆದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡೂವ ಮೂಲಕ ಮತದಾನದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಹೇಳಿದರು.ಪಟ್ಟಣದ ತಾಲೂಕು ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಡೆದ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚುನಾವಣೆಗಳು ಶಾಂತಿಯುತವಾಗಿ ನಡೆಯುವಂತೆ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಕುರಿತು ತಿಳಿ ಹೇಳಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಸಿಬ್ಬಂದಿಗಳು ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯಾವುದೇ ಆಸೆ ಆಮಿಷಗಳಿಗೊಳಗಾಗದೆ ಮತದಾನ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಡಿ ರಮೇಶ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಜಿಮಲಂಗ, ಪಿಡಿಒ ಈರಯ್ಯ ಹಿರೇಮಠ, ಪಾರ್ವತಿ ಪೂಜಾರಿ, ಮೇಗಾ ಪಾಟೀಲ, ಸಾವಿತ್ರಿ ಮೇತ್ರಿ, ಅನಸೂಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
