ವಿಜಯಪುರ: ಜಿಲ್ಲೆಯ ಒಬ್ಬ ಸಂಸದ ಜಿಲ್ಲೆಯ ಜನರ ಕಷ್ಟಗಳನ್ನು ಕೇಳದೆ ಒಂದುಬಾರಿಯೂ ಲೋಕಸಭೆಯಲ್ಲಿ ಮಾತನಾಡದೆ ಇರುವ ರಮೇಶ ಜಿಗಜೆಣಗಿಯವರು ಬಂಜಾರ ಸಮುದಾಯವನ್ನು ಹೀಯಾಳಿಸಿ ಮಾತನಾಡಿದ ಕಾಕಾ ಮಾಮಾ ಗೌಡ್ರ ಎಂದು ಮೋದಿಯ ಹೆಸರೇಳಿ ಮೂರು ಬಾರಿ ಆರಿಸಿ ಬಂದ ರಮೇಶ ಜಿಗಜಿಣಗಿಯವರು ಮತ್ತೆ ವೋಟು ಕೇಳಲು ಬರುತ್ತಿದ್ದಾರೆ.
ಈ ಬಾರಿ ನಮ್ಮ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಈ ಜಿಲ್ಲೆಯ ಜನರು ಸಂಸದ ರಮೇಶ ಜಿಗಜೆಣಗಿಗೆ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ. ಹಾಗೂ ರಾಜು ಆಲಗೂರ ಅವರ ಗೆಲುವು ಸೂರ್ಯ ಚಂದ್ರ ಹುಟ್ಟಿ ಮುಳುಗೊದು ಎಷ್ಟು ಸತ್ಯವೋ ಅಷ್ಟೇ ಸತ್ಯ. ರಾಜು ಆಲಗೂರವರು ಸಂಸದರಾಗುತ್ತಾರೆ. ವಿಜಯಪುರ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಆಗುತ್ತೆ. ಕಾರಣ ಆಲಗೂರವರನ್ನು ಗೆಲ್ಲಿಸಬೇಕೆಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

