ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲೂಕಾ ಅಧ್ಯಕ್ಷರನ್ನಾಗಿ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಎಂ.ಹೆಚ್.ಪೂಜಾರಿ ಅವರನ್ನು ನೇಮಕ ಮಾಡಿ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿ ರೈತಪರವಾದ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಇಡೀ ಜಗತ್ತಿನಲ್ಲಿ ಶೇ ೭೫% ರಷ್ಟು ಜನರು ಉದ್ಯೋಗಕ್ಕಾಗಿ ಕೃಷಿಯನ್ನೆ ಅವಲಂಭಿಸಿದ್ದಾರೆ, ಹಾಗೆ ದೇಶದ ಪ್ರಗತಿಯಲ್ಲಿ ಕೃಷಿಯ ಪಾತ್ರ ಬಹು ದೊಡ್ಡದಾಗಿದೆ, ಆದರೆ ವಾಸ್ತವದಲ್ಲಿ ರೈತರಿಗೆ ದಿನನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿ ಅದನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ, ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ಅನ್ಯಾಯವಾದರೆ ತಕ್ಷಣದಲ್ಲಿ ಕಂಕಣಬದ್ದರಾಗಿ ನ್ಯಾಯಕ್ಕಾಗಿ ನಾವೂ ನೀವೆಲ್ಲರೂ ನಿಲ್ಲಬೇಕು, ಸಂಘಟನೆಯಲ್ಲಿ ಬಡವ ಬಲ್ಲಿದ, ಮೇಲು ಕೀಳು, ಹಿರಿಯ ಕಿರಿಯ ಎಂಬಿತ್ಯಾದಿ ತಾರತಮ್ಯ ಎಸಗದೇ, ಇದರಲ್ಲಿ ರಾಜಕೀಯ ಮಾಡದೇ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರನ್ನು ಸಮಾನಾಗಿ ಕಾಣಬೇಕು ಎಂದರು.
ಅದೇ ರೀತಿ ಇಂಡಿ ತಾಲೂಕಿನಲ್ಲಿ ಬರುವ ಎಲ್ಲಾ ಹೊಬಳಿ ಹಾಗೂ ಗ್ರಾಮ ಘಟಕಗಳನ್ನು ಮಾಡಲು ಇಂದಿನಿಂದ ನಿಮಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ, ಅದರಲ್ಲಿ ಯುವ, ಹಿರಿಯ, ಮಹಿಳಾ ಹಾಗೂ ಕಾರ್ಮಿಕ ರೈತ ಸಂಘಟನೆಯನ್ನು ಶಿಸ್ತುಬದ್ಧವಾಗಿ ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ಸಂಘಟನೆ ಮಾಡುವಂತೆ ತಿಳಿಸಲಾಯಿತು.
ಈ ವೇಳೆ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಇಂಡಿ ತಾಲೂಕಾ ಅಧ್ಯಕ್ಷರಾದ ಎಂ.ಹೆಚ್.ಪೂಜಾರಿ, ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಮಹಾದೇವಪ್ಪ ತೇಲಿ, ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಗೋಡೆಕಾರ, ಮುಖಂಡರಾದ ಮಲ್ಲಿಕಾರ್ಜುನ ಮಹಾಂತಮಠ, ಆಥರ್ಗಾ ಗ್ರಾಮದ ಲಕ್ಷö್ಮಣ ಮ ಪೂಜಾರಿ ಅವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

