ದೇವರಹಿಪ್ಪರಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಧರ್ಮದ ಕುರಿತು ಚಿಂತನೆ ಹಾಗೂ ಲಿಂಗ ಸಂಸ್ಕಾರ ಇಂದು ಅತ್ಯಂತ ಅಗತ್ಯವಾಗಿದೆ ಎಂದು ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜಡಿಮಠ ಆವರಣದಲ್ಲಿ ಮಂಗಳವಾರ ಜರುಗಿದ ವೀರಶೈವ ಲಿಂಗಾಯತ ಧರ್ಮಯಾತ್ರೆ ಹಾಗೂ ಸಂಸ್ಕಾರ ಶಿಬಿರದ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ನಮ್ಮ ಮಕ್ಕಳಲ್ಲಿ ಇಷ್ಟಲಿಂಗ ಪೂಜೆ, ಅಷ್ಠಾವರಣ ಸೇರಿದಂತೆ ವೀರಶೈವ ಲಿಂಗಾಯತ ಧರ್ಮ ಪರಂಪರೆಯ ಮಾಹಿತಿಯ ಕೊರತೆಯಿದೆ. ಇದನ್ನು ಸರಿದೂಗಿಸಲು ಕನಿಷ್ಟ ೨ ದಿನ ಪ್ರತಿ ಗ್ರಾಮದಲ್ಲಿ ಶಿಬಿರ ಏರ್ಪಡಿಸಿ ಸಂಸ್ಕಾರ ನೀಡುವ ಅಗತ್ಯತೆಯಿದೆ ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಸದಯ್ಯನಮಠದ ವೀರಗಂಗಾಧರಶ್ರೀ ಹಾಗೂ ತಪೋಧಾಮದಶ್ರೀ ಮಾತನಾಡಿ, ಸಂಸ್ಕಾರ ಶಿಬಿರ ಅತ್ಯಂತ ಸಮಯೋಚಿತವಾಗಿದೆ. ಇದಕ್ಕೆ ಜನತೆಯ ಅಭಿಪ್ರಾಯ ಅರಿತು ಶಿಬಿರದ ರೂಪುರೇಷೆಗಳು, ಸಂದರ್ಭ, ಸ್ಥಳ ನಿಗದಿಪಡಿಸುವುದು ಅಗತ್ಯವಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ನಿವೃತ್ತ ಉಪನ್ಯಾಸಕ ಎಂ.ಆರ್.ಶಿರಸಂಗಿಮಠ, ಸಿದ್ಧು ಆನಂದಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶೀಪತಿ ದೇವಣಗಾಂವ, ಮಡಿವಾಳಪ್ಪಗೌಡ ಪಾಟೀಲ, ಶಾಂತಗೌಡ ಬಿರಾದಾರ(ಯರನಾಳ), ಉಮಾಕಾಂತ ಸೊನ್ನದ, ಬಂಡೆಪ್ಪ ಬಿರಾದಾರ(ದಿಂಡವಾರ), ಸಾಹೇಬಗೌಡ ಬಿರಾದಾರ(ಡೋಣಿ ಬೂದಿಹಾಳ).ಭೀಮರಾಯ ತೆಗನೂರ,ಜೆ.ಆರ್.ಬಿರಾದಾರ, ಸಂಗನಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಯಲಗೂರೇಶ ದೇವೂರ, ಅಜ್ಜಯ್ಯಸ್ವಾಮಿ ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ಕುಮಾರಸ್ವಾಮಿ ಹಿರೇಮಠ, ಸೋಮಶೇಖರ ಹಿರೇಮಠ, ಕಾಶೀನಾಥ ಹಿರೇಮಠ, ರಮೇಶ ಮಶಾನವರ, ವೀರಯ್ಯ ಇಂಡಿ, ಆನಂದ ಜಡಿಮಠ, ಪ್ರಕಾಶ ಹಿರೇಮಠ, ಶಿವಪ್ಪ ವಸ್ತçದ, ಹಣಮಂತ ಹಳ್ಳದಮನಿ, ಈರಯ್ಯ ಹಿರೇಮಠ, ನಿಂಬೆಣಪ್ಪ ಧುತ್ತರಗಾಂವಿ, ರಾಮಗೊಂಡ ಅವಟಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

