Author: editor.udayarashmi@gmail.com

ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಪ್ರಸಕ್ತ ವರ್ಷ 2024ರ ಮೊದಲ ಭಾಗ(ಜನೇವರಿ) ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಹಾಗೂ ಸರ್ಟಿಫಿಕೆಟ್ ಕೋರ್ಸುಗಳಿಗೆ ಪ್ರವೇಶಗಳು ಪ್ರಾರಂಭವಾಗಿದ್ದು, 31.01.2024ರ ಒಳಗಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.ಇಗ್ನೊದಲ್ಲಿ ವರ್ಷಕ್ಕೆ ಎರಡು ಬಾರಿ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಈಗ ಮೊದಲ ಹಂತದ ಪ್ರವೇಶಕ್ಕೆ ನೋಂದಣಿ ಆರಂಭವಾಗಿವೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಇಗ್ನೊ ಅದ್ಯಯನ ಕೇಂದ್ರ, 1307, ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್ ವಿಜಯಪುರ, ಮೊಬೈಲ್ ಸಂಖ್ಯೆ- 9980691291 ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಬಯಸುವವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕವೂ ನೋಂದಣಿ ಮಾಡಿಸಬಹುದಾಗಿದೆ ಎಂದು ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.

Read More

ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಜ.೧೮ರಿಂದ ಜ.೨೨ರ ವರೆಗೆ ಶುಲ್ಕರಹಿತ ಹೆರಿಗೆ ಕಾರ್ಯ ವಿಜಯಪುರ: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತ ಒಂದು ವರ್ಷದ ಅವಧಿಯಲ್ಲಿಯೇ ಜನರ ಪ್ರೀತಿಗೆ ಪಾತ್ರವಾಗಿರುವ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದೇ ತಿಂಗಳ ೨೨ ನೇ ತಾರಿಖಿನಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸಲಾಗುತ್ತಿದೆ.ಅದರ ಪ್ರಯುಕ್ತ ನಗರ ಶಾಸಕ ಬಸನಗೌಡ ರಾ.ಪಾಟೀಲ್ ಯತ್ನಾಳ ಅವರ ಅಪೇಕ್ಷೆಯಂತೆ ಜ.೧೮ರಿಂದ ಜ.೨೨ರ ವರೆಗೆ ಐದು ದಿನಗಳ ಕಾಲ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಹುಟ್ಟಿದ ಮಗುವನ್ನು ಶ್ರೀ ರಾಮ ಹಾಗೂ ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆಯಲ್ಲಿ ಜರುಗುವ ರಾಮ ಮಂದಿರದ ಉದ್ಘಾಟನೆಯ ಸಮಯವನ್ನು ಮತ್ತಷ್ಟು ಸಾರ್ಥಕವಾಗಿಸಲಾಗುತ್ತಿದ್ದು ಅವಶ್ಯಕತೆಯುಳ್ಳ ರಾಮ ಭಕ್ತರು ಇದರ…

Read More

ವಿಜಯಪುರ: ಸ್ವಾಮಿ ವಿವೇಕಾನಂದರು ಹಾಗೂ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ವ್ಯಕ್ತಿ ತನ್ನನ್ನು ತಾನಾರು ಎನ್ನುವುದನ್ನು ಕಂಡುಕೊಂಡಾಗ ಮಾತ್ರ ಅರಿವಿನ ಬೆಳಕಿನೆಡೆಗೆ ಮನುಷ್ಯ ಸಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್ನಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೆಕಾನಂದರ ೧೬೧ ಜನ್ಮದಿನೋತ್ಸವ ಹಾಗೂ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ನಿಜವಾದ ಭಾರತವನ್ನು ಪರಿಚಯಿಸುವ ಮೂಲಕ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯ ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರು ಹಾಗೂ ಆಧ್ಯಾತ್ಮಿಕ ಶಕ್ತಿಯ ಮೂಲಕ ಜನಸಾಮಾನ್ಯರಲ್ಲಿ ಅರಿವಿನ ದೀಪ ಪ್ರಜ್ವಲಿಸಿದವರು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಎಂದು ಹೇಳಿದರು.ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿದಿರುವ ಭಾರತ ಸ್ವಾಮಿ ವಿವೇಕಾನಂದರನ್ನು ಅರಿಯುವಲ್ಲಿ ಎಡವಿದೆ. ಪಾಶ್ಚಾತ್ಯರು ಅವರ ಮಾತುಗಳನ್ನು ಕೇಳಿ ತಮ್ಮ ಬದುಕಿನಲ್ಲಿ ಪರಿವರ್ತನೆ ತಂದುಕೊಂಡರು. ಇಂದಿಗೂ ಅಮೇರಿಕಾದ ೨೮ ಪ್ರತಿಶತ ಜನಗಳು ಭಾರತೀಯ ಸಂಸ್ಕೃತಿಯಂತೆ…

Read More

ವಿಜಯಪುರ: ಸಂಚಾರಿ ನಿಯಮಗಳ ಪಾಲನೆ ಮತ್ತು ಜಾಗರೂಕತೆಯಿಂದ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಹಾಗೂ ಜೀವಹಾನಿ ತಡೆಯಲು ಸಾಧ್ಯ ಎಂದು ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದ್ದಾರೆ.ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ ನಲ್ಲಿ ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ವತಿಯಿಂದ ಇಂದು ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ರಸ್ತೆ ಅಪಘಾತಗಳು ಮತ್ತು ಅವುಗಳಿಗೆ ಕಾರಣಗಳ ಕುರಿತು ಎಳೆಎಳೆಯಾಗಿ ಮಾಹಿತಿ ನೀಡಿದ ಅವರು, ರಸ್ತೆ ಅಪಘಾತ ಮತ್ತು ಜೀವಹಾನಿ ತಪ್ಪಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಸರಕಾರಗಳು ಸಂಚಾರಿ ನಿಯಮಗಳನ್ನು ರೂಪಿಸಿವೆ. ಆದರೆ, ಬಹಳಷ್ಟು ಚಾಲಕರು ವಾಹನಗಳ ಚಾಲನೆ ಸಂದರ್ಭದಲ್ಲಿ ಅವುಗಳ ಬಗ್ಗೆ ಗಮನ ಹರಿಸುವುದಿಲ್ಲ. ಅತೀ ವೇಗದ ಚಾಲನೆ, ಸಂಚಾರಿ ನಿಯಮಗಳ ಉಲ್ಲಂಘನೆ, ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ. ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಅದರಿಂದ ತಾವಷ್ಟೇ ಅಲ್ಲ,…

Read More

– ಜಯಶ್ರೀ.ಜೆ. ಅಬ್ಬಿಗೇರಿ*ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ದಿಂಬಿಗೆ ತಲೆಯನ್ನು ಕೊಟ್ಟು ಅದೆಷ್ಟು ಪ್ರೀತಿಯಿಂದ ಕರೆದರೂ ಬಳಿ ಬಾರದೇ ಕಾಡುವ ನಿದ್ರಾ ರಾಣಿಯನ್ನು ಒತ್ತಾಯ ಪೂರ್ವಕವಾಗಿ ಮಾತ್ರೆಗಳ ಮೂಲಕ ಆಮಂತ್ರಿಸಿ ಸ್ವಲ್ಪ ಹೊತ್ತು ಮಾತ್ರ ಅವಳ ಬಳಿಯಿದ್ದು ಉಳಿದ ಹೊತ್ತು ನರಕಯಾತನೆ ಅನುಭವಿಸುವಂತೆ ಮಾಡುತ್ತಾಳೆ. ಕೆಲವರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಿ, ನಿತ್ಯದ ಕೆಲಸಗಳಲ್ಲಿ ಸೊಗಸಿಲ್ಲದಂತೆ ಮಾಡುತ್ತಾಳೆ. ಇನ್ನೂ ಕೆಲವರು ಕೇಳುವ ಮುನ್ನವೇ ತಾನೇ ಬಳಿ ಹೋಗಿ ತನ್ನ ತೋಳ ತೆಕ್ಕೆಯಲ್ಲಿ ಬಂಧಿಸಿ ಸುಖವಾದ ನಿದ್ದೆ ಕರುಣಿಸುತ್ತಾಳೆ. ಹಲವರಿಗೆ ಎಲ್ಲಿ ಹೋದರೂ ಬೆನ್ನು ಹತ್ತಿ ಕಾಡಿ ನಿಂತಲ್ಲಿ ಕೂತಲ್ಲಿ ಆವರಿಸಿಕೊಂಡು ಜನರಿಂದ ನಿದ್ದೆ ಬಡುಕ/ಕಿ ಎಂಬ ಉಪಾದಿಯನ್ನು ಕೊಡಿಸುತ್ತಾಳೆ. ಇವಳು ಅತಿಯಾಗಿ ಬಳಿ ಬಂದರೂ ತೊಂದರೆ ಬಾರದಿದ್ದರೂ ತೊಂದರೆ. ಇಂದು ನಮಗೆಲ್ಲ ಜೀವನದಲ್ಲಿ ಒತ್ತಡ ಸಾಮಾನ್ಯವೆನಿಸುವಷ್ಟು ಸಾಮಾನ್ಯವಾಗಿದೆ.. ಹೀಗಾಗಿ ಅತೀ ಅವಶ್ಯವಾಗಿರುವ ನಿದ್ದೆಯೂ ಕಣ್ಣು ತುಂಬಿಕೊಳ್ಳದೇ ದುಬಾರಿಯಾಗುತ್ತಿದೆ. ಎಷ್ಟು ನಿದ್ದೆ ಮಾಡಿದರೂ ಸುಖ ನಿದ್ದೆ ಮಾಯವಾಗಿ  ಸಾಲುತ್ತಿಲ್ಲವೆ ನಿದ್ದೆ ಸಾಲುತಿಲ್ಲವೇ ಎನ್ನುವಂತಾಗಿದೆ. ಹಾಯಾದ…

Read More

ಬಿಜೆಪಿಯ ಚುನಾವಣಾ ರಾಜಕೀಯ ಲಾಭದ ಯೋಜನೆ ಆರೋಪ | ಕಾಂಗ್ರೆಸ್ ನಾಯಕರಿಂದ ಆಹ್ವಾನ ತಿರಸ್ಕಾರ ದೆಹಲಿ: ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಸಮಾರಂಭ ಮೋದಿಯವರ ಕಾರ್ಯಕ್ರಮ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.ಭಾರತ್ ಜೋಡೋ ನ್ಯಾಯ ಯಾತ್ರೆಯ ನಡುವೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಜನವರಿ 22ರ ಕಾರ್ಯಕ್ರಮವನ್ನು ನರೇಂದ್ರ ಮೋದಿ ಕಾರ್ಯಕ್ರಮವನ್ನಾಗಿ ರಾಜಕೀಯ ಮಾಡುತ್ತಿದೆ. ಇದು ಆರ್‌ಎಸ್‌ಎಸ್ ಬಿಜೆಪಿ ಕಾರ್ಯವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷರು ಫಂಕ್ಷನ್‌ಗೆ ಹೋಗಲ್ಲ ಎಂದು ಹೇಳಿದರು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತವಾಗಿದ್ದೇವೆ. ಹಿಂದೂ ಧರ್ಮದ ದೊಡ್ಡ ದೊಡ್ಡ ಅಧಿಕಾರಿಗಳು ಸಹ ಜನವರಿ 22ರ ಸಮಾರಂಭದ ಬಗ್ಗೆ ಅವರು(ಮೋದಿ) ಏನು ಯೋಚಿಸುತ್ತಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ, ಇದು ರಾಜಕೀಯ ಕಾರ್ಯವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ” ಎಂದು ರಾಹುಲ್ ಗಾಂಧಿ ಹೇಳಿದರು.ಆದ್ದರಿಂದ ಭಾರತದ ಪ್ರಧಾನ ಮಂತ್ರಿಯ…

Read More

ವಿಜಾಪುರ: ಆಧ್ಯಾತ್ಮಿಕ ಪ್ರವಚನದ ಮೂಲಕ ಭಾವೈಕ್ಯತೆಯನ್ನು, ಕೌಟುಂಬಿಕ ಮೌಲ್ಯಗಳನ್ನು ಬಿತ್ತರಿಸಿದವರು ಶಂಕ್ರಯ್ಯ ಸ್ವಾಮೀಜಿಗಳು. ಧಾರ್ಮಿಕ ಸಮಾಜಕ ಸಾಂಸ್ಕೃತಿಕವಾಗಿ ಅಪಾರವಾದ ಕೊಡುಗೆ ನೀಡಿದ ಶಂಕ್ರಯ್ಯ ಸ್ವಾಮೀಜಿಯವರ ಕುರಿತು ರಚನೆಯಾದ’ ನಿಜ ಜಂಗಮ’ ಅಭಿನಂದನಾಕೃತಿ ಅರ್ಥಪೂರ್ಣ ಮತ್ತು ಮೌಲಿಕ ಕೃತಿಯಾಗಿದೆ ಎಂದು ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಪೂಜ್ಯ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ತಿಕೋಟ ತಾಲೂಕಿನ ತಾಜಾಪುರ ತೋಟದ ಆಶ್ರಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜ ಜಂಗಮನ ಅಭಿನಂದನ ಗ್ರಂಥವನ್ನು ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು ದಣಿ ಅರಿಯದ ಸಮಾಜ ಸೇವೆಯಿಂದ ಮಾನವನು ದೇವನಾಗುತ್ತಾನೆ ನಮ್ಮಲ್ಲಿರುವ ಉತ್ತಮ ಗುಣಗಳೇ ನಮ್ಮನ್ನು ಎಚ್ಚರಿಕೆ ತೆಗೆದುಕೊಂಡು ಹೋಗುತ್ತವೆ. ಶಂಕ್ರಯ್ಯ ಸ್ವಾಮೀಜಿಗಳು ನಾಡಿನಾದಂತ ಪ್ರವಚನ ನೀಡಿ ಭಕ್ತರನ್ನು ಉದ್ಧಾರ ಮಾಡಿದರು ಹೋದಲ್ಲ ಭಕ್ತರಿಗೆ ಲಿಂಗಧಾರಣೆ ಪೂಜಾವಿಧಾನವನ್ನು ಕಳಿಸಿಕೊಡುತ್ತಿದ್ದರು.ನಿಜ ಜಂಗಮ ಅಭಿನಂದನ ಗ್ರಂಥವನ್ನು ಪರಿಚಯಿಸಿದ ಬಬಲೇಶ್ವರ ಶಾಂತವೀರ ಕಾಲೇಜಿನ ರಾಜ್ಯಪ್ರಶಸ್ತಿ ಪುರಸ್ಕೃತ ಮಹಾದೇವ ರೆಬಿನಾಳ ಮಾತನಾಡಿ, ಈ ಗ್ರಂಥದಲ್ಲಿ ಸ್ವಾಮೀಜಿಗಳ ಜೀವನ ಬಾಲ್ಯ ಅವರ ಸಮಾಜ ಸೇವೆ ಮಠಮಾನ್ಯಗಳ ಪರಿಚಯವನ್ನು ಸಮಗ್ರವಾಗಿ…

Read More

ಆಲಮಟ್ಟಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಇದೇ ಜ.೨೦, ೨೧ ಎರಡು ದಿನ, ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸಭಾಭವನದಲ್ಲಿ ಜರುಗಲಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ತಿಳಿಸಿದರು.ಮಂಗಳವಾರ, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.ಜ.೨೦ ರಂದು ಬೆಳಿಗ್ಗೆ ೧೧ ಕ್ಕೆ ಅಧ್ಯಯನ ಶಿಬಿರವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ, ರಮೇಶ ಆಸಂಗಿ, ಎಚ್.ಪಿ. ಸುಧಾಮದಾಸ್, ರಾಜು ಅಲಗೂರ, ಶರಣಪ್ಪ ಸುಣಗಾರ, ರಾಜಶೇಖರ ಯಡಹಳ್ಳಿ, ಹಾಸಿಂಪೀರ ವಾಲಿಕಾರ, ವಿಜಯನರಸಿಂಹ, ಸೂಲಿಕಂಟೆ ರಮೇಶ, ಎಸ್.ಎನ್. ಮಲ್ಲಪ್ಪ, ಎಸ್.ವಿಘ್ನೇಷ, ಸತ್ಯ ಭದ್ರಾವತಿ, ಬಸವರಾಜ ಕೌತಾಳ್, ಅಂಬಣ್ಣ ಅರೋಳಿಕರ್ ಆಗಮಿಸಲಿದ್ದಾರೆ.”ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಮತ್ತು ಬೆಳವಣಿಗೆ’ ಮೊದಲ ಗೋಷ್ಠಿಯಲ್ಲಿ ಸಿ.ಕೆ. ಮಹೇಶ ವಿಷಯ ಮಂಡಿಸಲಿದ್ದಾರೆ. ಮಲ್ಲೇಶ್ ಸಜ್ಜನ…

Read More

ವ್ಯವಸ್ಥಿತ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳ ಮೂಲಕ ಚಾಲನೆ ನೀಡಲು ಉದ್ದೇಶಿಸಲಾಗಿರುವ ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜನವರಿ ೨೬ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಭಾರತದ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮವನ್ನು ಆಚರಿಸುವ ಕುರಿತು ಪ್ರಸ್ತಾಪಿಸಲು ಹಾಗೂ ಏಕಕಾಲದಲ್ಲಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಆಚರಿಸುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರದ ಮೆರವಣಿಗೆಗೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಎರಡೂ ಸ್ತಬ್ಧಚಿತ್ರಗಳು ಜಿಲ್ಲೆಯಾದ್ಯಂತ ೨೭ ದಿನಗಳ ಕಾಲ ಸಂಚರಿಸಲಿವೆ. ಜನವರಿ ೨೬ ರಿಂದ ಫೆಬ್ರವರಿ ೨೩ರವರೆಗೆ ಸ್ತಬ್ಧಚಿತ್ರ ಜಿಲ್ಲೆಯಾದ್ಯಂತ ಸಂಚರಿಸಿ, ಫೆ.೨೩ರಂದು ಬೆಂಗಳೂರಿಗೆ ಎರಡೂ ಸ್ತಬ್ಧಚಿತ್ರಗಳು ತಲುಪಲಿವೆ. ಒಂದು ವಿಜಯಪುರದಿಂದ ಹಾಗೂ ಇನ್ನೊಂದು…

Read More