ಬಸವನಬಾಗೇವಾಡಿ: ಗ್ರಾಮಗಳಲ್ಲಿನ ದೇವಸ್ಥಾನಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಅವುಗಳನ್ನು ಜೀರ್ಣೋದ್ಧಾರ ಮಾಡುವುದರಿಂದ ಗ್ರಾಮಗಳು ಪ್ರಗತಿ ಹೊಂದುತ್ತವೆ, ಗ್ರಾಮ ಪ್ರಗತಿ ಹೊಂದುವುದ್ದರಿಂದ ಜನರು ಅಭಿವೃದ್ಧಿ ಹೊಂದುತ್ತಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಹೆಚ್.ಕೆ. ಹೇಳಿದರು.
ತಾಲೂಕಿನ ಕಣಕಾಲ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದ ಅನ್ನ ಛತ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇಸ್ಥಾನದ ಸಮಿತಿಗೆ ೧.೫ಲಕ್ಷ ರೂಪಾಯಿಗಳ ಚಕ್ ವಿತರಣೆ ಮಾಡಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ಗ್ರಾಮದ ಮಡಿವಾಳೇಶ್ವರ ಅನ್ನ ಛತ್ರಕ್ಕೆ ಪ್ರಸಾದದ ರೂಪದಲ್ಲಿ ಸಹಾಯಧನವನ್ನು ನೀಡಿದ್ದಾರೆ ಅದನ್ನು ಸದ್ಭಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕ ಅನಂತಗೌಡ ರಂಗೊಳ್ಳಿ, ಗ್ರಾಮದ ಮುಖಂಡರಾದ ಶಂಕರಗೌಡ ಪಾಟೀಲ, ಮಲ್ಲಕಾಜಪ್ಪ ಅಂಗಡಿ, ಸಿದ್ಧನಗೌಡ ಪಾಟೀಲ, ಕಾಶೀನಾಥ ಸಜ್ಜನ, ಅಯ್ಯಪ್ಪ ದಿನ್ನಿ, ಗುಂಡುಭಟ್ ಜೋಶಿ, ಚನ್ನಬಸಪ್ಪ ಅಂಗಡಿ, ಮಾರುತಿ ಹಡಪದ, ಮಲ್ಲಪ್ಪ ಇಟಗಿ, ಸಿದ್ರಾಮ ಎತ್ತನಟ್ಟಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

