ವಿಜಯಪುರ: ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ ರಚಿಸಿರುವವ ಶ್ರೀಸಾಕ್ಷಿ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ದಿನಾಂಕ ೬ ರಂದು ಸಂಜೆ ೬ ಕ್ಕೆ ಇಲ್ಲಿನ ಗಣೇಶ ನಗರದ ಸಾಕ್ಷಿ ಹನುಮಾನ್ ಹಾಗೂ ಸಿದ್ಧವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಜ್ಯೋತಿಷಿ ವಿದ್ವಾನ್ ಶ್ರೀಕಾಂತ ಆಚಾರ್ಯ ಆಶ್ರೀತ ಕಾರ್ಯಕ್ರಮದ ಸಾನಿಧ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿವೈಎಸ್‌ಪಿ ಬಸವರಾಜ ಯಲಿಗಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ರಾಘವ ಅಣ್ಣಿಗೇರಿ, ಶ್ರೀನಿವಾಸ ಬೆಟಗೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಟಾಕಳಿಯ ಖ್ಯಾತ ಜ್ಯೋತಿಷಿ ನೀಲಕಂಠಯ್ಯ ಶ್ರೀಶೈಲಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
