ಸಿಂದಗಿ: ಹಸಿರು ಕ್ರಾಂತಿಯ ಮೂಲಕ ದೇಶದ ಅಹಾರ ಭದ್ರತೆಯನ್ನು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಡಾ.ಬಾಬು ಜಗಜೀವನ್ ರಾಮ್ ರವರಿಗೆ ಸಲ್ಲುತ್ತದೆ ಎಂದು ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಡಾ.ಬಾಬು ಜಗಜೀವನ್‌ರಾಮ್ ಅವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಈ ವೇಳೆ ಕರ್ನಾಟಕ ಆದಿಜಂಭಾವ ಜನಸಂಘದ ಉತ್ತರ ಕರ್ನಾಟಕ ವಲಯಾಧ್ಯಕ್ಷ ಸಾಯಬಣ್ಣ ದೇವರಮನಿ ಮಾತನಾಡಿ, ೫೦ ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸಂವಿಧಾನದ ರಚನಾ ಸಭೆಯ ಸದಸ್ಯರಾಗಿ ಹಾಗೂ ರಾಷ್ಟ್ರ ನಾಯಕರಾಗಿ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ನೆಹರು ಅವರ ಸಂಪುಟದಲ್ಲಿ ಕೃಷಿ, ಆಹಾರ, ರೈಲ್ವೆ, ಸಾರಿಗೆ ಹಾಗೂ ಸಮುದಾಯ ಅಭಿವೃದ್ಧಿ, ಕಾರ್ಮಿಕ ಉದ್ಯೋಗಕ್ಕಾಗಿ ಹೆಚ್ಚು ಗಮನವಿಟ್ಟು ಶ್ರಮಿಸಿದರು ಎಂದರು.
ಈ ವೇಳೆ ಜಿ.ಎಸ್.ರೋಡಗಿ, ಏಕನಾಥ ದ್ವಾಶ್ಯಾಳ, ರಾಜಕುಮಾರ ಭಾಸಗಿ, ಎ.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ: ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಅವರ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆ ಸಿಡಿಪಿಓ ಶಂಭುಲಿಂಗ ಹಿರೇಮಠ ಡಾ.ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಎಸಿಡಿಪಿಒಎಸ್.ಎನ್.ಕೋರವಾರ, ವಿಜಯಕುಮಾರ, ಸೇರಿದಂತೆ ಮೇಲ್ವೀಚಾರಕಿಯರು ಇದ್ದರು.
ಶ್ರೀ ಪದ್ಮಾರಜ ಮಹಿಳಾ ಕಾಲೇಜ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಅವರ ಜಯಂತಿ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಉಮೇಶ ಪೂಜೇರಿ, ಜಿ.ವಿ.ಪಾಟೀಲ, ಎಸ್.ಎಮ್.ಹೂಗಾರ, ಬಿ.ಬಿ.ನಂದಿಮಠ, ಎಂ.ಕೆ.ಬಿರಾದಾರ, ಎಮ್.ಎಮ್.ಈಳಗೇರ, ಎಲ್.ಎಸ್.ಗೋಗಿ, ಹೇಮಾ ಕಾಸರ, ಡಿ.ಎಂ.ಪಾಟೀಲ್. ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ, ಮಮತಾ ಹರನಾಳ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

