Author: editor.udayarashmi@gmail.com

ಕೃಷಿಮೇಳದ ಘೋಷವಾಕ್ಯ – ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ವಿಜಯಪುರ: “ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ” ಘೋಷವಾಕ್ಯದೊಂದಿಗೆ ನಗರದ ಹೊರವಲಯದ ವಿಜಯಪುರದ ಹಿಟ್ನಳ್ಳಿ ಫಾರ್ಮ್ನನಲ್ಲಿ ಜನವರಿ ೨೧ ರಿಂದ ೨೩ವರೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಬೃಹತ್ ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೃಷಿ ಮೇಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಡಾ. ಭೀಮಪ್ಪ ಎ ತಿಳಿಸಿದರು.ಇಂದು ಕೃಷಿ ಮಹಾವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ-ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳಗಳಂತಹ ಬೃಹತ್ ವಿಸ್ತರಣಾ ಕಾರ್ಯಕ್ರಮಗಳು ಬಹಳ ಮಹತ್ವವನ್ನು ಪಡೆದಿವೆ ಎಂದು ಹೇಳಿದರು.ಜನವರಿ ೨೧ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ನಾಗಠಾಣ ಮತಕ್ಷೇತ್ರದ ಶಾಸಕ…

Read More

ಮುದ್ದೇಬಿಹಾಳ: ತಾಲೂಕಿನ ನಾತವಾಡ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಹಣಮಂತ ದೇವರ ಗುಡಿಯ ಮುಂದೆ ಇಸ್ಪೀಟ್ ಆಡುತ್ತಿದ್ದ ನಾಲತವಾಡದ ಆರ್ ಗಣೇಶ ಗುರುಗೋಳ, ಹಣಮಂತ ವಡ್ಡರ, ಸುನೀಲ ಹಾದಿಮನಿ, ಸೈಯ್ಯದ ಕತೀಬ, ಸುಭಾಷ್ ಕಸಬೇಗೌಡರ ಮೇಲೆ ಪ್ರಕರಣ ದಾಖಲಾಗಿದೆ.

Read More

ಆಲಮಟ್ಟಿ: ಇನ್ನುಳಿದ ಸಂಘಟನೆಗಳಿಗಿಂತ ಶಿಕ್ಷಕ ಸಂಘಟನೆ ಸಂಪೂರ್ಣ ಭಿನ್ನವಾಗಿದ್ದು, ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತವಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಕ್ಷಕ ಸಂಘಟನೆ ಸದಾ ಶಿಕ್ಷಕರ ಏಳಿಗೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.ಇಲ್ಲಿಯ ಎಚ್.ಪಿ.ಎಸ್. ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.ನಿಡಗುಂದಿ ತಾಲ್ಲೂಕಿನಲ್ಲಿಯೂ ಶಿಕ್ಷಕ ಸಂಘಟನೆ ಹೊಸ ಹೊಸ ಕಾರ್ಯಚಟುವಟಿಕೆಗಳಿಂದ ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು. ಶಿಕ್ಷಕ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ೨೦೦೫ ರಲ್ಲಿ ಅಧಿಸೂಚಿತಗೊಂಡು ೨೦೦೭ ರಲ್ಲಿ ನೌಕರಿಗೆ ಸೇರಿದ ೧೧,೦೦೦ ಕ್ಕೂ ಅಧಿಕ ನೌಕರರಿಗೆ ಎನ್ ಪಿಎಸ್ ನಿಂದ ಹಳೆ ಪಿಂಚಣಿ ವ್ಯವಸ್ಥೆಗೆ ರಾಜ್ಯ ಸರ್ಕಾರ ಒಪ್ಪಿದೆ ಎಂದರು. ಅದಕ್ಕಾಗಿ ನಡೆಸಿದ ಪ್ರಯತ್ನ ಹಾಗೂ ಹೋರಾಟವನ್ನು ವಿವರಿಸಿದರು. ಎಲ್ಲಾ ನೌಕರರಿಗೂ ಹಳೆ ಪಿಂಚಣಿ ವ್ಯವಸ್ಥೆ ಕೊಡಿಸುವುದು, ೭ ನೇ ವೇತನ…

Read More

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಾಲಯದಲ್ಲಿ ದಿ.೨೨ ರಂದು ಬೆಳಿಗ್ಗೆ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಾಕ್ಷಿ ಹನುಮಾನ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಬೊಮ್ಮನಹಳ್ಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ರಾಮರಾಜ್ಯದ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ, ರಾಮ ಮಂದಿರ ಲೋಕಾರ್ಪಣೆಯನ್ನು ಆಧ್ಯಾತ್ಮಿಕವಾಗಿ ಸಂಭ್ರಮಿಸುವ ದೃಷ್ಟಿಯಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಇಡೀ ವಿಶ್ವದ ದೃಷ್ಟಿ ಈಗ ಅಯೋಧ್ಯೆ ಕಡೆಗೆ ನೆಟ್ಟಿದೆ. ಐದು ನೂರು ವರ್ಷಗಳ ಹೋರಾಟಕ್ಕೆ ಅಂತಿಮ ಜಯ ದೊರಕಿದೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇದೇ ದಿನಾಂಕ ೨೨ ರಂದು ನೆರವೇರಲಿರುವುದು. ಪ್ರತಿಯೊಬ್ಬರು ಸಂತಸಪಡುವ ಸುಸಮಯ,ದಿನಾಂಕ ೨೨ ರಂದು ಬೆಳಿಗ್ಗೆ ಇಲ್ಲಿನ ಗಣೇಶನಗರ ಶ್ರೀಸಾಕ್ಷಿ ಹನುಮಾನ ಮಂದಿರದಲ್ಲಿ ಅತ್ಯಂತ ವಿಶೇಷವಾದ ಶ್ರೀರಾಮ ತಾರಕ ಯಜ್ಞ ನೆರವೇರಲಿದೆ. ಈ ಯಜ್ಞನ ವಿಶೇಷತೆ…

Read More

ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಬುಧವಾರದಂದು ಗ್ರಾಮದ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ೫೪ ನೇ ಪುಣ್ಯಾರಾಧನೆಯ ‘ಧರ್ಮಸಭೆ’ಯಲ್ಲಿ ಸಿಂಹಗಢ ಮಹಾರಾಜರ ಶಿಥಿಲಗೊಂಡಿರುವ ಈ ಮಹಾದೇವನ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಬೇಕು ಎಂದು ಗ್ರಾಮಸ್ಥರು ಶಿಥಿಲಗೊಂಡಿರುವ ದೇವಾಸ್ಥಾನದ ಭಾವಚಿತ್ರಗಳನ್ನು ನೀಡಿದರು.ಈ ವೇಳೆ ಚಡಚಣ ಪಟ್ಟದ ಜವಳಿ ವ್ಯಾಪಾರಸ್ಥ ಸಿದ್ದಾರಾಮ ಭಂಢರಕವಟೆಯವರು ಶಿಥಿಲಗೊಂಡಿರುವ ದೇವಾಸ್ಥಾನದ ಮೆಟ್ಟಿಲುಗಳ ನಿರ್ಮಾಣಕ್ಕೆ ೧.೫೦ ಲಕ್ಷ ರೂಗಳ ದೇಣಿಗೆ ನೀಡಿದರು.ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಶಾಸಕರ ನಿಧಿಯಿಂದ ನಾನು ೫೦ ಲಕ್ಷ ರೂ ಅನುದಾನ ನೀಡುತ್ತೇನೆ. ಹಾಗೂ ಪುರಾತತ್ವ ಇಲಾಖೆಯ ಜೊತೆ ಚರ್ಚಿಸಿ ದೇವಾಸ್ಥಾನದ ಸಂಪೂರ್ಣ ಜಿರ್ಣೋದ್ಧಾರಗೊಳಿಸುವುದಾಗಿ ಭರವಸೆ ನೀಡಿದರು.ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ರವರು ಕೂಡಾ ತಮ್ಮ ವೈಯಕ್ತಿಕ ನಿಧಿಯಿಂದ…

Read More

ವಿಜಯಪುರ: ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ಕಾಯ್ದಿರಿಸಿದ ಜಾಗದಲ್ಲಿ ಕೆಲವು ವ್ಯಕ್ತಿಗಳು ಗುಂಟಾ ಪ್ಲಾಟ್ ಹಾಕಿರುವುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ಗುರುವಾರ ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗದಲ್ಲಿ, ಗುಂಟಾ ಪ್ಲಾಟ್ ಹಾಕಿ ಬಡವರಿಗೆ ಮೋಸದಿಂದ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಜಮಖಂಡಿ ರಸ್ತೆಗೆ ಸಮೀಪದ ಸ.ನಂ.584, 585, 586 ರಲ್ಲಿ, ಜೈನಾಪುರ ಗ್ರಾಮದ ಜಮೀನು ಕಳೆದುಕೊಂಡ ಜನರಿಗೆ ಪುನರ್ವಸತಿ ಸ್ಥಾಪಿಸಲು, ಸರ್ಕಾರದಿಂದ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗುತ್ತಿದೆ. ಈ ಜಮೀನಿನ ಕೆಲವು ಭಾಗವನ್ನು ಅಲ್ಲಿನ ಸಾರ್ವಜನಿಕರಿಗೆ ಉಪಯೋಗಿಸಲು ಆಟದ ಮೈದಾನ, ಪ್ರೌಢಶಾಲೆ ಹಾಗೂ ಇತರೆ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ.ಆದರೆ, ಆ ಜಾಗವನ್ನು ಕೆಲವು ವ್ಯಕ್ತಿಗಳು ಖೊಟ್ಟಿ ಹಕ್ಕುಪತ್ರ ಸೃಷ್ಟಿಸಿ, ಮಹಾನಗರ ಪಾಲಿಕೆಯಲ್ಲಿ ಖಾತಾ ದಾಖಲು ಮಾಡಿಸಿಕೊಂಡು, ಅಮಾಯಕ ಜನರಿಗೆ ಗುಂಟಾ ಪ್ಲಾಟ್ ಅಂತ ಮಾರಾಟ ಮಾಡಿ ಮೋಸ ಮಾಡುತ್ತಿರುವುದು…

Read More

ಇಂಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ, ಬಡವರಿಗಾಗಿ, ಮಹಿಳೆಯರಿಗಾಗಿ, ಬುಡಕಟ್ಟು ಜನರಿಗಾಗಿ, ನಿರ್ಲಕ್ಷಿತರಿಗೆ, ವಿಕಲಚೇತನರಿಗಾಗಿ, ದುಡಿಯುವ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಪಟ್ಟಣದ ಎಸ್ ಬಿ ಐ ವ್ಯವಸ್ಥಾಪಕ ಆರ್.ಜಿ.ರಾಮಸ್ವಾಮಿ ಕರೆ ನೀಡಿದರು.ಪಟ್ಟಣದ ಪುರಸಭೆಯ ಎದುರು ಒಂದು ದೊಡ್ಡ ಪರದೆಯ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಾಡಿ ಅವರು ಮಾತನಾಡಿದರು.ಇತ್ತೀಚೆಗೆ ಸರ್ಕಾರಗಳು ಮನೆ ಮನೆಗಳಿಗೆ ಬೆಳೆ ಸಾಲ ಮಂಜೂರು ಮಾಡುತ್ತಿದೆ. ಇದು ರೈತರಿಗೆ ಉಪಯೋಗವಾಗಿದೆ. ಇದನ್ನು ರೈತರು ಪಡೆದುಕೊಂಡು ಹೆಚ್ಚಿನ ಉತ್ಪಾದನೆ ಮಾಡಿಕೊಳ್ಳಬೇಕು. ಇದರಂತೆ ರೈತರಿಗೆ ಇನ್ನೂ ಅನೇಕ ರೀತಿಯ ಸಾಲಗಳನ್ನು ನೀಡಲು ಮುಂದಾಗಿದೆ. ರೈತರು ಬ್ಯಾಂಕಿಗೆ ಭೇಟಿ ನೀಡಿ ಅವುಗಳ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ನಾವು ಈಗಾಗಲೇ ತಾಲೂಕಿನ ೭ ಕಡೆ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯ ಮಾಡಿದ್ದೇವೆ. ಪಟ್ಟಣದಲ್ಲಿ ಇದು ಮೊದಲನೇ ಸಲ ಪ್ರಚಾರ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಬೆಳವಣಿಗೆ…

Read More

ಇಂಡಿ: ಸಿಂದಗಿ, ಇಂಡಿ, ಮತ್ತು ಆಲಮೇಲ ತಾಲೂಕಿನಲ್ಲಿರುವ ಕೆರೆಗಳ ಅಂಚಿನ ಸುತ್ತಲೂ ೩೦ ಮೀ ಪರೀಧಿಯಲ್ಲಿ ಬರುವ ಖಾಸಗಿ ಮಾಲೀಕರ ತೆರೆದ ಮತ್ತು ಕೊಳವೆ ಬಾವಿಗಳನ್ನು ಹಾಗೂ ಇನ್ನಿತರ ಯಾವದೇ ನೀರಿನ ಮೂಲಗಳನ್ನು ತಾತ್ಕಾಲಿಕವಾಗಿ ಸರಕಾರದ ಆಧೀನಕ್ಕೆ ಪಡೆಯಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ತಾಲೂಕಿನ ಸಂಗೊಗಿ ಕೆರೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ರೈತರಿಗೆ ಮನವರಿಕೆ ಮಾಡಿ ಬರಗಾಲ ನಿವಾರಿಸಲು ಮಾನವೀಯ ಆಧಾರದ ಮೇಲೆ ಎಲ್ಲರೂ ಕೂಡಿ ಸಹಕಾರ ನೀಡಲು ವಿನಂತಿಸುವ ಸಂದರ್ಭದಲ್ಲಿ ಮಾತನಾಡಿದರು.ಇಂಡಿ ಉಪವಿಭಾಗದಲ್ಲಿ ಬರಗಾಲ ಆವರಿಸುವದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುವ ಸಂಭವವಿದ್ದು ಮಾನವೀಯ ಆಧಾರದ ಮೇಲೆ ಸಹಕಾರ ನೀಡಬೇಕೆಂದು ಎಸಿಯವರು ಕೋರಿದ್ದಾರೆ.ಇಂಡಿ ತಾಲೂಕಿನ ಸಂಗೊಗಿ,ತಡವಲಗಾ,ಹಂಜಗಿ,ಲೋಣಿ ಕೆಡಿ ಮತ್ತು ಅರ್ಜನಾಳ ಹಾಗೂ ಆಲಮೇಲ ತಾಲೂಕಿನ ಬಳಗಾನೂರ ಮತ್ತು ಸಿಂದಗಿ ತಾಲೂಕಿನ ಹೊನ್ನಳ್ಳಿ, ಯಂಕಚಿ ಗ್ರಾಮದ ಕೆರೆಗಳ ಅಂಚಿನ ಸುತ್ತ ೧೪೭ ಕಾಯ್ದೆ ಜಾರಿ ಮಾಡಿದೆ ಎಂದರು.ಕಾರಣ ಸಧ್ಯ ಮತ್ತು ಮುಂಬರುವ ಬೇಸಿಗೆ ಕಾಲದಲ್ಲಿ…

Read More

ಕೊಲ್ಹಾರ: ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ತಹಶೀಲ್ದಾರ ಎಸ್.ಎಸ್.ನಾಯಕಲ್ಮಠ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ನಿಮಿತ್ಯವಾಗಿ ತಾಲೂಕಿನ ಸಾರ್ವಜನಿಕರ ಚುನಾಯಿತ ಸದಸ್ಯರ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಗುರುವಾರ ಕರೆಯಲಾಗಿತ್ತು.ದೇಶದ ಪ್ರಜೆಗಳ ಹಬ್ಬವಾದ ಪ್ರಜಾರಾಜ್ಯೋತ್ಸವದ ಸಮಾರಂಭದಲ್ಲಿ ಕೊಲ್ಹಾರ ಪಟ್ಟಣದ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳ ನಾಗರಿಕ ಬಂಧುಗಳು ಮಹಿಳೆಯರು ಸಂಘ ಸಂಸ್ಥೆಯ ಪದಾದಿಕಾರಿಗಳು ತಮ್ಮ ಊರುಗಳಲ್ಲಿ ಬೆಳಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿದ ನಂತರ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದ ಧ್ವಜಾರೋಹಣ ಮತ್ತು ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು.ಅಂದಿನ ದಿವಸ ಎಲ್ಲ ಶಾಲಾ ಕಾಲೇಜುಗಳ, ಸರಕಾರಿ ಹಾಗೂ ಖಾಸಗಿ ಕಚೇರಿಗಳ ಸಂಘ ಸಂಸ್ಥೆಗಳ ಪ್ರಾಂಗಣದಲ್ಲಿ ಬೆಳಗಿನಜಾವ ೭.೩೦ಕ್ಕೆ ಧ್ವಜಾರೋಹಣ ನೆರವೇರಿಸಬೇಕು. ತದನಂತರ ೯.೦೦ ಘಂಟೆಗೆ ನಡೆಯುವ ಸಾರ್ವಜನಿಕ ಧ್ವಜಾರೋಹಣದಲ್ಲಿ ಭಾಗವಹಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಾಗುವದು. ರಾಜಕೀಯ ಗಣ್ಯಮಾನ್ಯರು…

Read More

ಬ್ರಹ್ಮದೇವನಮಡು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಡಾ.ವಿರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಆಶಯದಂತೆ ಅಸಹಾಯಕರ ನೆರವಿಗೆ ಯೋಜನೆ ಸದಾ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗುರುವಾರ ನಿರ್ಗತಿಕ ಫಲಾನುಭವಿ ನಿಂಗಮ್ಮ ಸಜ್ಜನ ಅವರಿಗೆ ಹೊನ್ನಳ್ಳಿ ಕಾಯ೯ಕ್ಷೇತ್ರದಲ್ಲಿ ಮಂಜೂರಾಗಿರುವ ವಾತ್ಸಲ್ಯ ಮನೆಯ ಕಟ್ಟಡ ನಿಮಾ೯ಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಯೋಜನೆಯ ಇನ್ನಿತರ ಕಾರ್ಯಕ್ರಮಗಳಾದ ವಾತ್ಸಲ್ಯ ಕಿಟ್, ಅಸಹಾಯಕರಿಗೆ ಸೇವಿಸಲು ಪೌಷ್ಠಿಕ ಆಹಾರದ ಕಿಟ್ ಮತ್ತು ಅಂಗವಿಕರಿಗಾಗಿ ವೀಲ್ ಚೇರ್, ಸ್ಟಾಂಡ್, ವಾಟರ್ ಬೆಡ್, ಪ್ರತಿ ತಿಂಗಳು ದುಡಿಯಲು ಶಕ್ತಿ ಇಲ್ಲದೆ ಇರುವ ನಿಗ೯ತಿಕರಿಗೆ ಹಾಗೂ ಪೋಷಕರಿಲ್ಲದೆ ಇರುವ ಹಿರಿಯ ಜೀವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುವ ಮೂಲಕ ಅವರ ಜೀವನಕ್ಕೆ ಬೆಂಗಾವಲಾಗಿ ಯೋಜನೆ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಿಂದಗಿ ತಾಲೂಕಿನಲ್ಲಿ ೫ ವಾತ್ಸಲ್ಯ…

Read More