ವಿಜಯಪುರ: ಬಂಜಾರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಹೊಣೆಯನ್ನು ನುಡಿದಂತೆ ನಡೆಯುವ ಹೆಮ್ಮೆಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರು ತೆಗೆದುಕೊಂಡಿದ್ದು, ಕಾರಣ ಅವರ ಮೇಲೆ ನಂಬಿಕೆಯಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಂಜಾರ ಸಮಾಜ ಬಾಂಧವರು ಬಿಜೆಪಿ ಬೆಂಬಲಿಸೋಣ ಎಂದು ಬಿಜೆಪಿ ನಗರ ಮಂಡಲದ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಭಿವೃದ್ಧಿ, ಸುರಕ್ಷತೆಗಾಗಿ ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಿವಾರ್ಯ. ಭಾರತೀಯ ಜನತಾ ಪಾರ್ಟಿ ಕಲಬುರ್ಗಿಯಲ್ಲಿ ಲೋಕಸಭಾ ಟಿಕೆಟ್ ಟಿಕೆಟ್ ನೀಡಿದ್ದಲ್ಲದೆ, ಸದಾ ನಮ್ಮ ಸಮುದಾಯದ ಅಭಿವೃದ್ಧಿ ಪರ ಕೆಲಸ ಮಾಡಿದೆ. ನಮ್ಮ ನಾಯಕ ಬಸನಗೌಡ ಪಾಟೀಲ ಯತ್ನಾಳರು ಕೂಡ ಎಲ್ಲಾ ರೀತಿಯ ಸಹಾಯ ಸಹಕಾರ ಮಾಡಿದ್ದಾರೆ. ಅವರು ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ನಮ್ಮ ಸಮಾಜಕ್ಕೆ ಸೂಕ್ತ ಸ್ಥಾನ ಕೊಡುವ ನಿಟ್ಟಿನಲ್ಲಿ ಮಾತು ಕೊಟ್ಟಿದ್ದಾರೆ. ಹೀಗಾಗಿ ಜಗತ್ತು ಒಪ್ಪಿಕೊಂಡಿರುವ ಮಹಾನ್ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಸಮಸ್ತ ಬಂಜಾರ ಸಮಾಜ ಬಾಂಧವರು ಬಿಜೆಪಿ ಬೆಂಬಲಿಸೋಣ ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

