Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮೋರಟಗಿ: ಗ್ರಾಮದ ಪತ್ರಕರ್ತ ಸಿದ್ದು ಕೆರಿಗೊಂಡ ಅವರ ಪುತ್ರಿ ಮೀನಾಕ್ಷಿ ಕೆರಿಗೊಂಡ ೨೦೨೪ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೫೭೧ ಅಂಕಗಳನ್ನು ಗಳಿಸಿ ಶೇ ೯೫.೧೭% ಫಲಿತಾಂಶ ಮಾಡಿ ಸಾಧನೆ ಮಾಡಿದ್ದಾಳೆ.ಗ್ರಾಮದ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಸಾಯನ ಜೀವಶಾಸ್ತ್ರಕ್ಕೆ ೯೯, ಗಣಿತ ವಿಷಯಕ್ಕೆ ೯೯, ರಾಸಾಯನಶಾಸ್ತ್ರಕ್ಕೆ ೯೬, ಬೌತಶಾಸ್ತ್ರಕ್ಕೆ ೯೪, ಹಿಂದಿ ವಿಷಯಕ್ಕೆ ೯೫, ಇಂಗ್ಲಿಷ್ ವಿಷಯಕ್ಕೆ ೮೮ ಅಂಕಗಳನ್ನು ಪಡೆಡಿದ್ದಾಳೆ.ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಿಂದಗಿ ಹಾಗೂ ಆಲ್ಮೆಲ್ ತಾಲೂಕು ಕಾರ್ಯನಿರತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ : ಬಿ.ಡಿ.ಪಿ.ಹೆಚ್. ಡಬ್ಲೂö್ಯ. ಶಿಕ್ಷಣ ಸಂಸ್ಥೆಯ ಎಸ್.ಕೆ.ವ್ಹಿ.ಎಮ್.ಎಸ್. (ಖೇಡ) ಪದವಿ ಪೂರ್ವ ಕಾಲೇಜು, ವಿಜಯಪುರ ಇದರ ೨೦೨೪ರ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಂದೀಪ ಲಮಾಣಿ ಶೇ.೯೪ ರಷ್ಟು, ದ್ವಿತೀಯ ಸ್ಥಾನವನ್ನು ಸಚೀನ ದೊಡಮನಿ ಶೇ.೯೧.೩೩% ರಷ್ಟು ಹಾಗೂ ತೃತೀಯ ಸ್ಥಾನವನ್ನು ಕಾರ್ತಿಕ ಜಾಧವ ಶೇ.೮೪% ರಷ್ಟು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇದರೊಂದಿಗೆ ಮನೀಶ ರಾಠೋಡ ಶೇ.೮೨.೫%, ಸಚೀನ ಮಾದರ ಶೇ.೮೨%, ಅಕ್ಷತಾ ನಾಯಕ ಶೇ.೮೦%, ಸಿದ್ರಾಮ ಕುಂಬಾರ ಶೇ.೮೧.೧೬%, ಕಿರಣ ಲಮಾಣಿ ಶೇ.೭೮%, ರಾಹುಲ ರಾಠೋಡ ಶೇ.೭೮%, ವಿಶಾಲ ದೊಡಮನಿ ಶೇ.೭೮% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪ್ರತಿಭಾ ರಾಠೋಡ ಶೇ.೮೯.೫%,ದ್ವಿತೀಯ ಸ್ಥಾನವನ್ನು ಮಹೇಶ ರಾಠೋಡ ಶೇ.೮೫.೩೩%, ತೃತೀಯ ಸ್ಥಾನವನ್ನು ರಾಜಕುಮಾರ ತೊರವಿ ಶೇ.೮೪.೬೬%, ಪಡೆದುಕೊಂಡಿರುತ್ತಾರೆ. ಇದರೊಂದಿಗೆ ವಿಜಯ ಇಂಗಳೇಶ್ವರ ಶೇ.೮೩.೩೩%, ವಿನಾಯಕ ರಾಠೋಡ ಶೇ.೮೧.೫%, ಮೇಘಾ ಮಂಜಳಕರ ಶೇ.೮೧%, ಪ್ರೀಯಾ ಪೂಜಾರಿ ಶೇ.೮೧%, ಅರ್ಚನಾ ದೋತ್ರೆ ಶೇ.೮೦.೪%, ಸುದೀಪ…
ವಿಜಯಪುರ: ಮೊನ್ನೆ ನಡೆದ ದ್ವಿತೀಯ ಪಿಯುಸಿಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದು ಕೂಡಗಿ ಗ್ರಾಮ ಪಂಚಾಯತಿ, ಎಸ್. ಡಿ. ಎಮ್. ಸಿ, ಗ್ರಾಮದ ಗುರು, ಹಿರಿಯರು ಹಾಗೂ ಕಾಲೇಜಿನ ಸಿಬ್ಬಂದಿವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.ರುಕ್ಮಿಣಿ ತಳೇವಾಡ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದರ ಮೂಲಕ ಶೇಕಡಾ ೯೬% ಕಾಲೇಜಿಗೆ ಪ್ರಥಮ ಸ್ಥಾನ ಸೌಮ್ಯ ಬಡಿಗೇರ ಸಮಾಜ ಶಾಸ್ತ್ರದಲ್ಲಿ ನೂರಕ್ಕೆ ೯೬ ಅಂಕಗಳ ಮೂಲಕ ಶೇಕಡಾ ೯೪% ಗಳಿಸಿ ದ್ವಿತೀಯ ಸ್ಥಾನ ಹಾಗೂ ಉಮೇಶ ನಾಯಕ ಶೇಕಡಾ ೯೨% ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಒಟ್ಟು ೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡದೇ ಗೈರು ಹಾಜರಾಗಿದ್ದಾರೆ. ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಆಂಗ್ಲ ವಿಷಯದಲ್ಲಿ ಅನುತ್ತೀರ್ಣಗೊಂಗಡಿದ್ದು ಕಾಲೇಜಿನ ಫಲಿತಾಂಶ ಶೇಕಡಾ ೯೭’% ರಷ್ಟಾಗಿದ್ದು. ಪ್ರಾಚಾರ್ಯ ಕೆ. ಜಿ. ಲಮಾಣಿ ಹಾಗೂ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ವಿಜಯಪುರ: ಆನಂದಗೌಡರ ಗೆಳೆಯರ ಬಳಗ ಮತ್ತು ವಿಜಯಪುರ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಮಂಡಳಿ ವತಿಯಿಂದ ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಎಸ್.ಎಲ್. ಖಜಾಪೂರ ಅವಿರೋಧವಾಗಿ ಆಯ್ಕೆಗೊಂಡ ಹಿನ್ನೆಲೆ ಹೃದಯಸ್ಪರ್ಶಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರುಗಳಾದ ಅರ್ಜುನ.ಜಿ.ಲಮಾಣಿ, ಹಣಮಂತ.ಬಿ.ಕೊಣದಿ, ಆನಂದಗೌಡ. ಎನ್. ಬಿರಾದಾರ, ಅಶೋಕ.ವಿ.ಚನಬಸಗೋಳ, ಜಯಶ್ರೀ.ಎಸ್.ಬೆಣ್ಣೆ, ಶ್ರೀಮತಿ ನೀಲಾ.ಎಲ್.ಇಂಗಳೆ ಮುಂತಾದವರು ಇದ್ದರು.
ವಿಜಯಪುರ: ಬಿಸಿಲ ತಾಪಕ್ಕೆ ಬಳಲುವ ಪಕ್ಷಿಗಳಿಗೆ ವಿಜಯಪುರ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆಂದು ಓದಲು ಬಂದ ವಿದ್ಯಾರ್ಥಿ ಯಾಸಿನ್ ನಿತ್ಯ ಪಕ್ಷಿಗಳಿಗೆ ನೀರು ಧಾನ್ಯಗಳನ್ನಿಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಮಿಷನ್ ಕಂಪೌಂಡ್ ಹತ್ತಿರ ರೂಮ್ ಮಾಡಿಕೊಂಡು ಓದುತ್ತಿರುವ ಈ ವಿದ್ಯಾರ್ಥಿ, ಹತ್ತಿರದ ಮರಗಳಲ್ಲಿ ಕುಳಿತ ಹಕ್ಕಿಗಳು ಬಿಸಿಲ ಬೇಗೆಗೆ ಬಸವಳಿಯುತ್ತಿರುವುದನ್ನು ಕಂಡು ಹಕ್ಕಿಗಳಿಗೆ ಆಹಾರ ಮತ್ತು ನೀರನ್ನು ಇಡಲು ಏನಾದರೂ ಮಾಡಲೇಬೇಕೆಂದು ಯೋಚಿಸಿ, ಅಡಿಗೆ ಎಣ್ಣೆಯ ಕ್ಯಾನನ್ನು ಯೋಜಿತವಾಗಿ ಕತ್ತರಿಸಿ ನಾಲ್ಕು ಕಡೆಗೆ ಕಾಳುಗಳನ್ನು ಹಾಗೂ ಮಧ್ಯ ನೀರನ್ನು ಹಾಕಲು ಅನುಕೂಲವಾಗುವಂತೆ ಮಾಡಿ ರಮಝಾನ್ ಪ್ರಯುಕ್ತ ನಿತ್ಯವೂ ನಸುಕಿನ ಜಾವ ಎಳುವಾಗಲೇ, ಅವುಗಳಿಗೆ ನೀರು ಕಾಳುಗಳನ್ನು ಹಾಕಿ, ನಂತರ ನಮಾಜ್ ಮಾಡಲು ಹೊರಡುತ್ತಾನೆ.”ನಾವು ಉಳಿಯಬೇಕು, ಮತ್ತು ವನ್ಯ ಸಮುದಾಯವು ಉಳಿಯಬೇಕು. ಇಲ್ಲದಿದ್ದರೆ ಪರಿಸರದ ಅಸಮತೋಲನದಿಂದ ಮಾನವ ಸಮುದಾಯವೇ ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಯಾಸೀನ್.ನಗರದ ಇತರ ವಿದ್ಯಾರ್ಥಿಗಳು ಇವರಂತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ.
ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾ ಜಾತ್ರೆಯಂಗವಾಗಿ ಗುರುವಾರ ಭಾರವಾದ ಗುಂಡು ಎತ್ತುವದು, ಸಂಗ್ರಾಣಿ ಕಲ್ಲು ಸಾಗ ಎತ್ತುವದು ಸ್ಪರ್ಧೆಗಳು ಜರುಗಿದವು.ಭಾರವಾದ ಗುಂಡು ಎತ್ತುವ ಸ್ಪರ್ಧೆ ಪ್ರಥಮ ಸ್ಥಾನ ನಗದು ರೂ.೧೦ ಸಾವಿರ ಯಾಳವಾರ ಗ್ರಾಮದ ಮಾಳಪ್ಪ ಕೊಂಡಗುಳಿ ಪೂಜಾರಿ, ಹಳ್ಳೂರಿನ ಚಂದ್ರಶೇಖರ ಯಾಳವಾರ, ದ್ವಿತೀಯ ಸ್ಥಾನ ಯಾಳವಾರದ ಮಾಳಪ್ಪ ಬಿಸನಾಳ ಪಡೆದುಕೊಂಡರು.ಸಂಗ್ರಾಣಿ ಕಲ್ಲು ಮೇಲೆ ಒತ್ತಗಲ್ಲು ಸ್ಪರ್ಧೆಯಲ್ಲಿ ಗೋಕಾಕ ತಾಲೂಕಿನ ಶಿವು ಬೆಳಬೆಂಕಿ ದ್ವಿತೀಯ ವಿಠ್ಠಲ ಬೆನ್ನಿಕಟ್ಟಿ, ತೃತೀಯ ಶಿವರಾಜ ಹುಣಶ್ಯಾಳ ಪಡೆದುಕೊಂಡರು. ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ಅಫಝಲಖಾನ ಮುಜಾವರ ಪ್ರಥಮ ಸ್ಥಾನ, ವಿಠ್ಠಲ ಬೆನ್ನಕಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು. ಭಾರವಾದ ಚೀಲ ಎತ್ತುವ ಬಿದರಕುಂದಿಯ ಮಲ್ಲಣ್ಣ ಹನುಮಸಾಗರ, ಗೋನಾಳದ ವಿಠ್ಠಲ ಗೋನಾಳ ಬಹುಮಾನ ಪಡೆದುಕೊಂಡರು. ಮಧ್ಯಾನ್ಹ ಜಂಗೀ ಕುಸ್ತಿಗಳು ಜರುಗಿದವು. ರಾತ್ರಿ ಜಮಖಂಡಿ ತಾಲೂಕಿನ ಕುಲ್ಲಹಳ್ಳಿಯ ಶಿವಲಿಂಗೇಶ್ವರ ನಾಟ್ಯ ಸಂಘದಿಂದ ತವರಿಗೆ ಬಂದ ತಂಗಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು. ಜಾತ್ರೆಯಂಗವಾಗಿ…
ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಈದ್ ಉಲ್ ಫಿತ್ರ್ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಸೇರಿದಂತೆ ಸಮಸ್ತ ಗ್ರಾಮದ ಹಿಂದೂ ಸಮದಾಯದವರು ಮುಸ್ಲಿಂ ಬಾಂಧವರಿಗೆ ಪ್ರಸಾದ, ತಂಪುಪಾನೀಯ, ಮಜ್ಜಿಗೆ ಬಾಳೆಹಣ್ಣು ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮ ಹಜರತ್ ಮತಾಬ್ ಸಾಹೇಬ್ ದರ್ಗಾ ಉರುಸ್ ಹಾಗೂ ಮಲ್ಲಯ್ಯ ದೇವಸ್ಥಾನ ಐದೇಶಿ ಹಾಗೂ ಜಾತ್ರೆಗೆ ಹೆಸರಾಗಿದ್ದು, ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂರೆಲ್ಲರೂ ಸೇರಿ ಹಬ್ಬ ಆಚರಿಸಿರುವುದು ವಿಶೇಷ. ಅಂತೆಯೇ ಈದ್ ಉಲ್ ಫಿತ್ರ್ ಹಬ್ಬದ ನಿಮಿತ್ಯ ಗ್ರಾಮದ ಮುಸ್ಲಿಂ ಜನತೆಗೆÉ ಪ್ರಸಾದ ವ್ಯವಸ್ಥೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದರು.ಕಳೆದ ವಾರವಷ್ಟೆ ಮಲ್ಲಯ್ಯನ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯ ಮುಂದೆ ನಿಂತು ಹಿಂದೂ ಜನತೆಗೆ ಪ್ರಸಾದ, ತಂಪುಪಾನೀಯ ವಿತರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಇದೇ ದಾರಿಯಲ್ಲಿ ಹಿಂದೂ ಸಮುದಾಯದವರು ಇಂದಿನ ಹಬ್ಬದಲ್ಲಿ ಪ್ರಸಾದ ವಿತರಿಸಿ ಒಬ್ಬರಿಗೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಪಾಟೀಲ, ಜಿ.ಪಿ.ಬಿರಾದಾರ, ಅಂಜುಮನ್ ಕಮೀಟಿ…
ದೇವರಹಿಪ್ಪರಗಿ: ಸಕಲ ಪ್ರಕೃತಿ ಆ ದೇವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆಗಳಾಗಿವೆ. ಆದ್ದರಿಂದ ನಾವು ದೇವರನ್ನು ಸದಾ ಸ್ಮರಿಸುವುದರ ಮೂಲಕ ಚಿರಋಣಿಯಾಗಿರಬೇಕು. ಎಂದು ಮೌಲಾನಾ ಇಸ್ಮಾಯಿಲ್ ಚಟ್ಟರಕಿ ಹೇಳಿದರು.ಪಟ್ಟಣದ ಈದಗಾ ಮೈದಾನದಲ್ಲಿ ಈದ್ ಉಲ್ ಫಿತ್ರ ನಿಮಿತ್ಯ ಗುರುವಾರ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರ ಪ್ರಾಮಾಣಿಕತೆಯಿಂದ ಸಾಗಬೇಕು. ಪ್ರತಿಯೊಂದು ಧರ್ಮದ ಸಾರವು ಒಂದೇ ಆಗಿದ್ದು, ಇಡೀ ಜಗತ್ತು ದೇವರು ನೀಡಿದ ಕೊಡುಗೆಯಾಗಿದೆ . ಈ ಕೊಡುಗೆಯನ್ನು ಸ್ಮರಣೆ ಮಾಡುವುದರ ಜೊತೆ ನಮ್ಮ ಕಾಯಕದೊಂದಿಗೆ ದೇವರ ಧ್ಯಾನ ಮಾಡಲು ಆ ದೇವರೇ ಸದಾವಕಾಶ ಕಲ್ಪಿಸಿಕೊಟ್ಟಿದ್ದಾನೆ. ಅದುವೇ ಪವಿತ್ರ ರಮಜಾನ್ ಮಾಸ. ಈ ಪವಿತ್ರ ಮಾಸವನ್ನು ಉತ್ತಮ ರೀತಿಯಲ್ಲಿ ಆಚರಿಸಿ ಪಾವನರಾಗಬೇಕಾಗಿದೆ ಎಂದರು.ಪಟ್ಟಣದ ಸಮಸ್ತ ಮುಸ್ಲಿಂ ಸಮುದಾಯ ಈದಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಆಲಂಗಿಸಿಕೊAಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯನ್ನು ಮೌಲ್ವಿ ಇಸ್ಮಾಯಿಲ್‌ಸಾಬ್ ಲಾಳಸಂಗಿ ನಡೆಸಿಕೊಟ್ಟರು.ಪ್ರಾರ್ಥನೆಯಲ್ಲಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಸಿಂದಗಿ ಕ್ಷೇತ್ರದ…
Udayarashmi kannada daily newspaper
ವಿಜಯಪುರ: ಇಲ್ಲಿನ ಪುಲಕೇಶಿ ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಗಿರೀಶ ಹೆಳವರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 93 ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಬಂದಿದ್ದಾನೆ.ಗಿರೀಶ ಹೆಳವರ ಪತ್ರಕರ್ತ ದೇವೇಂದ್ರ ಹೆಳವರ ಅವರ ಪುತ್ರನಾಗಿದ್ದು, ಪರೀಕ್ಷೆಯಲ್ಲಿ 600 ಕ್ಕೆ 558 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ವಿದ್ಯಾರ್ಥಿಗೆ ಕಾಲೇಜಿನ ಪ್ರಾಚಾರ್ಯರು, ಎಲ್ಲ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
