ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾ ಜಾತ್ರೆಯಂಗವಾಗಿ ಗುರುವಾರ ಭಾರವಾದ ಗುಂಡು ಎತ್ತುವದು, ಸಂಗ್ರಾಣಿ ಕಲ್ಲು ಸಾಗ ಎತ್ತುವದು ಸ್ಪರ್ಧೆಗಳು ಜರುಗಿದವು.
ಭಾರವಾದ ಗುಂಡು ಎತ್ತುವ ಸ್ಪರ್ಧೆ ಪ್ರಥಮ ಸ್ಥಾನ ನಗದು ರೂ.೧೦ ಸಾವಿರ ಯಾಳವಾರ ಗ್ರಾಮದ ಮಾಳಪ್ಪ ಕೊಂಡಗುಳಿ ಪೂಜಾರಿ, ಹಳ್ಳೂರಿನ ಚಂದ್ರಶೇಖರ ಯಾಳವಾರ, ದ್ವಿತೀಯ ಸ್ಥಾನ ಯಾಳವಾರದ ಮಾಳಪ್ಪ ಬಿಸನಾಳ ಪಡೆದುಕೊಂಡರು.
ಸಂಗ್ರಾಣಿ ಕಲ್ಲು ಮೇಲೆ ಒತ್ತಗಲ್ಲು ಸ್ಪರ್ಧೆಯಲ್ಲಿ ಗೋಕಾಕ ತಾಲೂಕಿನ ಶಿವು ಬೆಳಬೆಂಕಿ ದ್ವಿತೀಯ ವಿಠ್ಠಲ ಬೆನ್ನಿಕಟ್ಟಿ, ತೃತೀಯ ಶಿವರಾಜ ಹುಣಶ್ಯಾಳ ಪಡೆದುಕೊಂಡರು. ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ಅಫಝಲಖಾನ ಮುಜಾವರ ಪ್ರಥಮ ಸ್ಥಾನ, ವಿಠ್ಠಲ ಬೆನ್ನಕಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು. ಭಾರವಾದ ಚೀಲ ಎತ್ತುವ ಬಿದರಕುಂದಿಯ ಮಲ್ಲಣ್ಣ ಹನುಮಸಾಗರ, ಗೋನಾಳದ ವಿಠ್ಠಲ ಗೋನಾಳ ಬಹುಮಾನ ಪಡೆದುಕೊಂಡರು. ಮಧ್ಯಾನ್ಹ ಜಂಗೀ ಕುಸ್ತಿಗಳು ಜರುಗಿದವು. ರಾತ್ರಿ ಜಮಖಂಡಿ ತಾಲೂಕಿನ ಕುಲ್ಲಹಳ್ಳಿಯ ಶಿವಲಿಂಗೇಶ್ವರ ನಾಟ್ಯ ಸಂಘದಿಂದ ತವರಿಗೆ ಬಂದ ತಂಗಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು. ಜಾತ್ರೆಯಂಗವಾಗಿ ಏ.೧೨ ರಂದು ಬೆಳಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಾದಿ-ಪ್ರತಿವಾದಿ ಗೀ ಗೀ ಪದಗಳು, ರೇಣುಕಾ ಯಲ್ಲಮ್ಮ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನವಿದೆ ಎಂದು ಜಾತ್ರಾ ಉತ್ಸವ ಸಮಿತಿಯವರು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

