ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಈದ್ ಉಲ್ ಫಿತ್ರ್ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಸೇರಿದಂತೆ ಸಮಸ್ತ ಗ್ರಾಮದ ಹಿಂದೂ ಸಮದಾಯದವರು ಮುಸ್ಲಿಂ ಬಾಂಧವರಿಗೆ ಪ್ರಸಾದ, ತಂಪುಪಾನೀಯ, ಮಜ್ಜಿಗೆ ಬಾಳೆಹಣ್ಣು ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮ ಹಜರತ್ ಮತಾಬ್ ಸಾಹೇಬ್ ದರ್ಗಾ ಉರುಸ್ ಹಾಗೂ ಮಲ್ಲಯ್ಯ ದೇವಸ್ಥಾನ ಐದೇಶಿ ಹಾಗೂ ಜಾತ್ರೆಗೆ ಹೆಸರಾಗಿದ್ದು, ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂರೆಲ್ಲರೂ ಸೇರಿ ಹಬ್ಬ ಆಚರಿಸಿರುವುದು ವಿಶೇಷ. ಅಂತೆಯೇ ಈದ್ ಉಲ್ ಫಿತ್ರ್ ಹಬ್ಬದ ನಿಮಿತ್ಯ ಗ್ರಾಮದ ಮುಸ್ಲಿಂ ಜನತೆಗೆÉ ಪ್ರಸಾದ ವ್ಯವಸ್ಥೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದರು.
ಕಳೆದ ವಾರವಷ್ಟೆ ಮಲ್ಲಯ್ಯನ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯ ಮುಂದೆ ನಿಂತು ಹಿಂದೂ ಜನತೆಗೆ ಪ್ರಸಾದ, ತಂಪುಪಾನೀಯ ವಿತರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಇದೇ ದಾರಿಯಲ್ಲಿ ಹಿಂದೂ ಸಮುದಾಯದವರು ಇಂದಿನ ಹಬ್ಬದಲ್ಲಿ ಪ್ರಸಾದ ವಿತರಿಸಿ ಒಬ್ಬರಿಗೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.
ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಪಾಟೀಲ, ಜಿ.ಪಿ.ಬಿರಾದಾರ, ಅಂಜುಮನ್ ಕಮೀಟಿ ಅಧ್ಯಕ್ಷ ಬಂದೇನವಾಜ್ ತರಫದಾರ, ದಾವುದ್ ಇನಾಮದಾರ, ಫೈಗಂಬರ್ ಮುಜಾವರ್, ಅರವಿಂದ ನಾಯ್ಕೋಡಿ, ಜಾವೀದ್ ಮಕಾಂದಾರ್, ಮಲಕಪ್ಪ ಸುರಗಿಹಳ್ಳಿ, ಶ್ರೀಶೈಲ ಮಠಪತಿ, ಸಾಹೇಬಗೌಡ ನಾಗರಳ್ಳಿ, ಶಿವು ಹೊನ್ನಳ್ಳಿ, ಉಮೇಶ ಮೂಲಿಮನಿ, ಮಲ್ಲು ಪೋಲೇಶಿ, ಪರಮಾನಂದ ಬಿರಾದಾರ, ಶ್ರೀಶೈಲ ತೇಲಿ, ಸಾಹೇಬಗೌಡ ಬಿರಾದಾರ, ಅಲ್ಲಾಭಕ್ಷ ಮಕಾಂದಾರ, ದಾವಲಸಾಬ್ ಗಂಗೂರ, ಮುತ್ತಣ್ಣ ಕೊರಬು, ಸಂಗು ಬಂಥನಾಳ, ಬಸು ಕೋಟಿನ್ ಸೇರಿದಂತೆ ಸಮುದಾಯಗಳ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

