ವಿಜಯಪುರ: ಬಿಸಿಲ ತಾಪಕ್ಕೆ ಬಳಲುವ ಪಕ್ಷಿಗಳಿಗೆ ವಿಜಯಪುರ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆಂದು ಓದಲು ಬಂದ ವಿದ್ಯಾರ್ಥಿ ಯಾಸಿನ್ ನಿತ್ಯ ಪಕ್ಷಿಗಳಿಗೆ ನೀರು ಧಾನ್ಯಗಳನ್ನಿಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.
ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಮಿಷನ್ ಕಂಪೌಂಡ್ ಹತ್ತಿರ ರೂಮ್ ಮಾಡಿಕೊಂಡು ಓದುತ್ತಿರುವ ಈ ವಿದ್ಯಾರ್ಥಿ, ಹತ್ತಿರದ ಮರಗಳಲ್ಲಿ ಕುಳಿತ ಹಕ್ಕಿಗಳು ಬಿಸಿಲ ಬೇಗೆಗೆ ಬಸವಳಿಯುತ್ತಿರುವುದನ್ನು ಕಂಡು ಹಕ್ಕಿಗಳಿಗೆ ಆಹಾರ ಮತ್ತು ನೀರನ್ನು ಇಡಲು ಏನಾದರೂ ಮಾಡಲೇಬೇಕೆಂದು ಯೋಚಿಸಿ, ಅಡಿಗೆ ಎಣ್ಣೆಯ ಕ್ಯಾನನ್ನು ಯೋಜಿತವಾಗಿ ಕತ್ತರಿಸಿ ನಾಲ್ಕು ಕಡೆಗೆ ಕಾಳುಗಳನ್ನು ಹಾಗೂ ಮಧ್ಯ ನೀರನ್ನು ಹಾಕಲು ಅನುಕೂಲವಾಗುವಂತೆ ಮಾಡಿ ರಮಝಾನ್ ಪ್ರಯುಕ್ತ ನಿತ್ಯವೂ ನಸುಕಿನ ಜಾವ ಎಳುವಾಗಲೇ, ಅವುಗಳಿಗೆ ನೀರು ಕಾಳುಗಳನ್ನು ಹಾಕಿ, ನಂತರ ನಮಾಜ್ ಮಾಡಲು ಹೊರಡುತ್ತಾನೆ.
“ನಾವು ಉಳಿಯಬೇಕು, ಮತ್ತು ವನ್ಯ ಸಮುದಾಯವು ಉಳಿಯಬೇಕು. ಇಲ್ಲದಿದ್ದರೆ ಪರಿಸರದ ಅಸಮತೋಲನದಿಂದ ಮಾನವ ಸಮುದಾಯವೇ ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಯಾಸೀನ್.
ನಗರದ ಇತರ ವಿದ್ಯಾರ್ಥಿಗಳು ಇವರಂತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

