ವಿಜಯಪುರ : ಬಿ.ಡಿ.ಪಿ.ಹೆಚ್. ಡಬ್ಲೂö್ಯ. ಶಿಕ್ಷಣ ಸಂಸ್ಥೆಯ ಎಸ್.ಕೆ.ವ್ಹಿ.ಎಮ್.ಎಸ್. (ಖೇಡ) ಪದವಿ ಪೂರ್ವ ಕಾಲೇಜು, ವಿಜಯಪುರ ಇದರ ೨೦೨೪ರ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಂದೀಪ ಲಮಾಣಿ ಶೇ.೯೪ ರಷ್ಟು, ದ್ವಿತೀಯ ಸ್ಥಾನವನ್ನು ಸಚೀನ ದೊಡಮನಿ ಶೇ.೯೧.೩೩% ರಷ್ಟು ಹಾಗೂ ತೃತೀಯ ಸ್ಥಾನವನ್ನು ಕಾರ್ತಿಕ ಜಾಧವ ಶೇ.೮೪% ರಷ್ಟು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇದರೊಂದಿಗೆ ಮನೀಶ ರಾಠೋಡ ಶೇ.೮೨.೫%, ಸಚೀನ ಮಾದರ ಶೇ.೮೨%, ಅಕ್ಷತಾ ನಾಯಕ ಶೇ.೮೦%, ಸಿದ್ರಾಮ ಕುಂಬಾರ ಶೇ.೮೧.೧೬%, ಕಿರಣ ಲಮಾಣಿ ಶೇ.೭೮%, ರಾಹುಲ ರಾಠೋಡ ಶೇ.೭೮%, ವಿಶಾಲ ದೊಡಮನಿ ಶೇ.೭೮% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪ್ರತಿಭಾ ರಾಠೋಡ ಶೇ.೮೯.೫%,ದ್ವಿತೀಯ ಸ್ಥಾನವನ್ನು ಮಹೇಶ ರಾಠೋಡ ಶೇ.೮೫.೩೩%, ತೃತೀಯ ಸ್ಥಾನವನ್ನು ರಾಜಕುಮಾರ ತೊರವಿ ಶೇ.೮೪.೬೬%, ಪಡೆದುಕೊಂಡಿರುತ್ತಾರೆ. ಇದರೊಂದಿಗೆ ವಿಜಯ ಇಂಗಳೇಶ್ವರ ಶೇ.೮೩.೩೩%, ವಿನಾಯಕ ರಾಠೋಡ ಶೇ.೮೧.೫%, ಮೇಘಾ ಮಂಜಳಕರ ಶೇ.೮೧%, ಪ್ರೀಯಾ ಪೂಜಾರಿ ಶೇ.೮೧%, ಅರ್ಚನಾ ದೋತ್ರೆ ಶೇ.೮೦.೪%, ಸುದೀಪ ಲಮಾಣಿ ಶೇ.೭೮%, ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಅಕ್ಷಯ ಭಂಡಿ ಶೇ.೮೦ %, ಜಯಶ್ರೀ ರಾಠೋಡ ಶೇ.೭೫% ಅಂಕಗಳನ್ನು ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದು, ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಿದ್ದಪ್ಪ ಅಗರಖೇಡ, ನೋಡಲ್ ಅಧಿಕಾರಿ ಶಂಕರ ಭಾವಿಕಟ್ಟಿ, ಖಜಾಂಚಿ ವಿನೋದ ಎಂ.ಖೇಡ, ಪ್ರಾಚಾರ್ಯರಾದ ಎಂ.ಡಿ. ಹೆಬ್ಬಿ ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
