Author: editor.udayarashmi@gmail.com

ದೇವರಹಿಪ್ಪರಗಿ: ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಇದರಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಹಕ್ಕನ್ನು ಚಲಾಯಿಸೋಣ ಎಂದು ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಇವರ ಸಹಯೋಗದಲ್ಲಿ ಜರುಗಿದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾರೊಬ್ಬರೂ ಮತದಾನದಿಂದ ವಂಚಿತರಾಗದಂತೆ ತಾಲ್ಲೂಕು, ಜಿಲ್ಲಾ, ಪಟ್ಟಣ ಪಂಚಾಯಿತಿಗಳ ಅಡಿಯಲ್ಲಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜನರನ್ನು ಜಾಗೃತಿಗೊಳಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಶ್ರಮಿಸಬೇಕು ಎಂದರು.ತಹಶೀಲ್ದಾರ ಪ್ರಕಾಶ ಸಿಂದಗಿ ಮತದಾನ ಪ್ರತಿಜ್ಞಾವಿಧಿ ಬೋಧಿಸುವುದರ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.ತಾಲ್ಲೂಕು ಪಂಚಾಯಿತಿಯಿಂದ ಆರಂಭಗೊಂಡ ಬೈಕ್ ರ‍್ಯಾಲಿ ಮೋಹರೆ ಹನುಮಂತರಾಯ ವೃತ್ತ, ಮೇನ್ ಬಜಾರ್, ಪತ್ತಾರಕಟ್ಟಿ, ಬೇವಿನಕಟ್ಟಿ, ಕರಿಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತ ತಲುಪಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ತಪ್ಪದೆ ಮತದಾನ ಮಾಡಿ, ನಮ್ಮ ಹಕ್ಕನ್ನು ನಾವು ಚಲಾಯಿಸೋಣ, ನಿಮ್ಮ ಮತ, ನಿಮ್ಮ ಹಕ್ಕು,…

Read More

ದೇವರಹಿಪ್ಪರಗಿ: ಪಟ್ಟಣದ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಬೊರೆವೆಲ್ ಕೊರೆಯಿಸುವುದರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ನೂತನ ಹಣಮಂತ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಸುಮಾರು ೨೫ ಮನೆಗಳು ನಿರ್ಮಾಣವಾಗಿದ್ದು, ಇಲ್ಲಿ ನೀರಿನ ಸರಬರಾಜು ಇರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ನೀರಿನ ಕೊರತೆ ಕಾಡುತ್ತಿದೆ. ಆದ್ದರಿಂದ ಪಟ್ಟಣ ಪಂಚಾಯಿತಿಯಿಂದ ಬೊರವೆಲ್ ಕೊರೆಯಿಸಿ ಕುಡಿಯುವ ನೀರು ಪೂರೈಸಿದರೆ ಸಾರ್ವಜನಿಕರ ನೀರಿನ ತಾಪತ್ರಯ ತಪ್ಪಿದಂತಾಗುತ್ತದೆ. ಆದ್ದರಿಂದ ಕೂಡಲೇ ಬೊರೆವೆಲ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಶಂಕರಗೌಡ ಪಾಟೀಲ(ಯರನಾಳ), ಮುನ್ನಾ ಮಳಖೇಡ, ಅಪ್ಪಾಕರ ಚಿಕ್ಕಸಿಂದಗಿ, ನಬಿರಸೂಲ್ ಮಣೂರ, ಅಷ್ಫಾಕ್ ಚಿಕ್ಕಸಿಂದಗಿ, ರಾಜೇಸಾಬ್ ಚಿಕ್ಕಸಿಂದಗಿ, ಇಬ್ರಾಹಿಂ ತಾಂಬೋಳಿ, ಕಾಶೀನಾಥ ಕಡ್ಲೇವಾಡ, ಯಾಕೂಬ್ ನದಾಫ್, ದಾದಾ ತಾಂಬೋಳಿ ಇದ್ದರು.

Read More

ಸಿಂದಗಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು ೧೭೩ ಜನ ವಿದ್ಯಾರ್ಥಿನಿಯರಲ್ಲಿ ೫೪ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, ೧೦೧ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ೧೧ ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು ೪೬ ವಿದ್ಯಾರ್ಥಿನಿಯರಲ್ಲಿ ೧೩ ಅತ್ಯುನ್ನತ ಶ್ರೇಣಿ, ೨೮ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಹೊಂದಿದ್ದಾರೆ.ವಿಜ್ಞಾನ ಭಾಗದಿಂದ ಪರೀಕ್ಷೆಗೆ ಹಾಜರಾದ ೩೩ ವಿದ್ಯಾರ್ಥಿನಿಯರಲ್ಲಿ ೧೦ ಅತ್ಯುನ್ನತ ಶ್ರೇಣಿ, ೨೦ ಪ್ರಥಮ ಶ್ರೇಣಿ, ೦೩ ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಒಟ್ಟು ಫಲಿತಾಂಶ ೧೦೦ಕ್ಕೆ ೧೦೦% ರಷ್ಟಾಗಿರುತ್ತದೆ.ಭೂಗೋಳಶಾಸ್ತ್ರ ವಿಷಯದಲ್ಲಿ ೩ ಜನ ವಿದ್ಯಾರ್ಥಿನಿಯರು, ರಾಜ್ಯಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಅರ್ಥಶಾಸ್ತ್ರ, ಶಿಕ್ಷಣಶಾಸ್ತ್ರ, ಇತಿಹಾಸ ವಿಷಯದಲ್ಲಿ ಒರ್ವ ವಿದ್ಯಾರ್ಥಿನಿಯು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದುಕೊಂಡು ಕಾಲೇಜಿನ…

Read More

ಚಡಚಣ: ಸಮೀಪದ ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಪವಿತ್ರ ರಂಜಾನ್ ಹಬ್ಬದಂದು ಮುಸ್ಲಿಂ ಬಾಂಧವರು ಪರಸ್ಪರ ಸಂಭ್ರಮ ಸಡಗರದಿಂದ ಈದ್-ಉಲ್-ಪಿತ್ರ್ ಹಬ್ಬವನ್ನು ಆಚರಿಸಿ‌ ಪ್ರೀತಿಗೆ ಪಾತ್ರರಾದರು.ರಂಜಾನ್ ಹಬ್ಬದ ಸಂಕೇತ ದಾನ,ಪರಸ್ಪರ ಬಾಂಧವ್ಯ, ಬೆಸಯುವಂತಿತ್ತು ಗ್ರಾಮದ ಎಲ್ಲ ಮುಸ್ಲಿಂ ಇದ್ಗಾ ಮೈದಾನದಲ್ಲಿ ಪವಿತ್ರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ನಾಡಿನ ಒಳಿತಿಗಾಗಿ,ಸುಖ ಶಾಂತಿ,ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡರು.

Read More

ಸಿಂದಗಿ: ತಾಲೂಕಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ೧೦೩ ವಿದ್ಯಾರ್ಥಿಗಳು ಪರೀಕ್ಷೆ ಹಾಜರಿದ್ದು ೧೦೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಕಲಾ ವಿಭಾಗದಲ್ಲಿ ರಕ್ಷಿತಾ ಗೋಗಿ ೫೭೯(ಶೇ.೯೮%) ಪ್ರಥಮ, ಆಕಾಶ ಮದರಿ ೫೭೮ (ಶೇ.೯೬.೩೩) ದ್ವಿತೀಯ, ಮಹೇಶ ತಳವಾರ ೫೭೫ (೯೫.೮೩%) ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಉತ್ತಮ ಸಾದನೆಗೆ ಕಾಲೇಜಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

Read More

ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೋರಗಿ, ಪುರದಾಳ, ಗುಬ್ಬೆವಾಡ, ಹಡಗಿನಾಳ ಹಾಗೂ ಕಣ್ಣಗುಡ್ಡಿಹಾಳ ಗ್ರಾಮದ ಪ್ರಸಕ್ತ ಸಾಲಿನ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಹಾಗೂ ಕಲಾ ವಿಭಾಗದಲ್ಲಿ ಶೇಕಡಾ ೯೦ರಷ್ಟು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ/ನೀಯರಿಗೆ ಗುಬ್ಬೇವಾಡ ಗ್ರಾಮ ಪಂಚಾಯತ್ ವತಿಯಿಂದ ಪ್ರತಿಭಾ ಪುರಸ್ಕಾರ (ಗೌರವ ಸನ್ಮಾನ) ಮಾಡಲು ನಿರ್ಧರಿಸಲಾಗಿದ್ದು, ಆಸಕ್ತ ವಿಧ್ಯಾರ್ಥಿ/ನೀಯರು ಎ.೧೫ರ ಒಳಗಾಗಿ ತಮ್ಮ ಭಾವಚಿತ್ರದ ಜೊತೆಗೆ ಶೇ.೯೦ರಷ್ಟು ಅಂಕ ಪಡೆದ ಪ್ರತಿಯನ್ನು ೯೭೪೨೮೪೯೬೬೩ ಈ ದೂರವಾಣಿ ಸಂಖ್ಯೆಯ ವ್ಯಾಟ್ಸ್ಪ್‌ಗೆ ಕಳುಹಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೯೦೦೩೯೬೪೧೦ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಚಡಚಣ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ-ಸಂಭ್ರಮದಿಂದ ಆಚರಿಸಿದರು.ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಉಮದಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Read More

ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ಮತ್ತು 10 ನೇ ಸ್ಥಾನದ ಸಾಧನೆ ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಹಾವಿದ್ಯಾಲಯದ ಒಟ್ಟು ಫಲಿತಾಂಶ 99% ರಷ್ಟು ಆಗಿದೆ. ವಿಜ್ಞಾನ ವಿಭಾಗದ ಫಲಿತಾಂಶ 100% ಆಗಿದ್ದು, ಕಲಾ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ 99% ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 394 ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 20 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಕಾಂಚನಾ ಡೋಣಗಾಂವ 590(98.33%) ಅಂಕಗಳನ್ನು ಪಡೆದು ರಾಜ್ಯಕ್ಕೆ 7 ರ‍್ಯಾಂಕ, ಜಿಲ್ಲೆಗೆ 5 ರ‍್ಯಾಂಕ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಆನಂದ ಅಡಕೆ 589(98.17%) ಅಂಕಗಳನ್ನು ಪಡೆದು ರಾಜ್ಯಕ್ಕೆ 10 ರ‍್ಯಾಂಕ, ಜಿಲ್ಲೆಗೆ 6 ರ‍್ಯಾಂಕ ಮತ್ತು…

Read More

ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ಕುಟುಂಬ ಸಮೇತ ಭೇಟಿ ನೀಡುವುದು ವಾಡಿಕೆ ಸಂಪದಾ ಹಿರೇಮಠಆಲಮಟ್ಟಿ: ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಶುಕ್ರವಾರ, ಆಲಮಟ್ಟಿಗೆ ಸಹಸ್ರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದರು.ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ತಮ್ಮ ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ವಾಡಿಕೆ. ಕಳೆದ ಒಂದು ದಶಕಗಳಿಂದಲೂ ಆಲಮಟ್ಟಿಗೆ ಹಬ್ಬದ ಮರುದಿನ ಸಹಸ್ರಾರು ಸಂಖ್ಯೆಯ ಜನ ಬರುವುದು ಸಾಮಾನ್ಯವಾಗಿದೆ.ಹೀಗಾಗಿ ಈ ವರ್ಷವೂ ಆಲಮಟ್ಟಿಯ ಎಲ್ಲಾ ಉದ್ಯಾನಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ ಹಿಡಿದು ಆಲಮಟ್ಟಿ ಜಲಾಶಯದವರೆಗೆ ಎರಡು ರಸ್ತೆಯುದ್ದಕ್ಕೂ ಜನವೋ ಜನ ಹಾಗೂ ವಾಹನಗಳ ಭರಾಟೆ ಜೋರಾಗಿತ್ತು. ಅವಳಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಆಗಮಿಸಿದ್ದರು.ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಆಲಮಟ್ಟಿಗೆ ಜನ ಸಂಜೆಯವರೆಗೂ ಬರುತ್ತಿದ್ದವು. ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ…

Read More

-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ, ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಂದು ಹಳ್ಳಿಯ ಜಮೀನ್ದಾರನ ಜಮೀನಿನಲ್ಲಿ ಒಬ್ಬ ಬಡ ಕೆಲಸದಾಳು ಹೊಲದ ಕೆಲಸವನ್ನು ಮಾಡುತ್ತಿದ್ದನು. ಮಧ್ಯಾಹ್ನದ ವೇಳೆ ಅದು, ಆಗ ಅಲ್ಲೆಲ್ಲೋ ಪಕ್ಕದ ಜಮೀನಿನಲ್ಲಿ ಯಾರೋ ಒಬ್ಬರು ಅಯ್ಯೋ ನನ್ನನ್ನು ಯಾರಾದರೂ ಕಾಪಾಡಿ… ಕಾಪಾಡಿ ಎಂದು ಜೋರಾಗಿ ಕೂಗುತ್ತಿದ್ದುದು ಆ ಕೆಲಸದ ಆಳಿಗೆ ಕೇಳಿಸಿತು. ಕೂಡಲೇ ಕೂಗು ಕೇಳಿ ಬರುತ್ತಿದ್ದ ಕಡೆಗೆ ಹೋಗಿ ನೋಡಿದಾಗ ತರುಣನೊಬ್ಬ ಪಾಳು ಬಾವಿಯೊಳಗೆ ಬಿದ್ದು ಭಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದನು. ಆ ತರುಣನ ದಯನೀಯ ಸ್ಥಿತಿಯನ್ನು ಗಮನಿಸಿದ ಆ ಕೆಲಸದಾಳು ತಕ್ಷಣ ಅಲ್ಲೇ ಸಮೀಪದ ಜಮೀನಿನ ಬಾವಿಯಲ್ಲಿದ್ದ ಹಗ್ಗವನ್ನು ತೆಗೆದುಕೊಂಡು ಬಂದು ಅದನ್ನು ತರುಣ ಬಿದ್ದಿದ್ದ ಪಾಳು ಬಾವಿಯ ಒಳಗೆ ಇಳಿಯಬಿಟ್ಟು ಅದರ ಮೂಲಕ ಆ ತರುಣನ್ನು ಮೇಲಕ್ಕೆ ಎತ್ತಿದನು. ನಂತರ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಹೊಟ್ಟೆ ತುಂಬಾ ಊಟವನ್ನು ಕೊಟ್ಟು ಆತನ…

Read More