ದೇವರಹಿಪ್ಪರಗಿ: ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಇದರಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಹಕ್ಕನ್ನು ಚಲಾಯಿಸೋಣ ಎಂದು ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಇವರ ಸಹಯೋಗದಲ್ಲಿ ಜರುಗಿದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾರೊಬ್ಬರೂ ಮತದಾನದಿಂದ ವಂಚಿತರಾಗದಂತೆ ತಾಲ್ಲೂಕು, ಜಿಲ್ಲಾ, ಪಟ್ಟಣ ಪಂಚಾಯಿತಿಗಳ ಅಡಿಯಲ್ಲಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜನರನ್ನು ಜಾಗೃತಿಗೊಳಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಶ್ರಮಿಸಬೇಕು ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ ಮತದಾನ ಪ್ರತಿಜ್ಞಾವಿಧಿ ಬೋಧಿಸುವುದರ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.
ತಾಲ್ಲೂಕು ಪಂಚಾಯಿತಿಯಿಂದ ಆರಂಭಗೊಂಡ ಬೈಕ್ ರ‍್ಯಾಲಿ ಮೋಹರೆ ಹನುಮಂತರಾಯ ವೃತ್ತ, ಮೇನ್ ಬಜಾರ್, ಪತ್ತಾರಕಟ್ಟಿ, ಬೇವಿನಕಟ್ಟಿ, ಕರಿಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತ ತಲುಪಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ತಪ್ಪದೆ ಮತದಾನ ಮಾಡಿ, ನಮ್ಮ ಹಕ್ಕನ್ನು ನಾವು ಚಲಾಯಿಸೋಣ, ನಿಮ್ಮ ಮತ, ನಿಮ್ಮ ಹಕ್ಕು, ಜನ ಸಾಮಾನ್ಯನ ಶಕ್ತಿ ಮತ ಚಲಾವಣೆ ಎಂಬ ಘೋಷಣೆಗಳು ಜನತೆಯ ಗಮನ ಸೆಳೆದವು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿ.ಎಸ್.ಐ ಬಸವರಾಜ ತಿಪ್ಪಾರೆಡ್ಡಿ, ಬಿ.ಬಿ.ಕೊಳ್ಳಿ, ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಕಿರಿಯ ಆರೋಗ್ಯ ನಿರೀಕ್ಷಕ, ಫಿರೋಜ್ ಮುಲ್ಲಾ, ಸೋಮಶೇಖರ ಭೋವಿ, ಮುತ್ತುರಾಜ್ ಹಿರೇಮಠ, ಪ್ರವೀಣ ಹಿರೇಮಠ, ಜಿ.ಎಸ್.ರೋಡಗಿ ಪಿಡಿಓಗಳಾದ ಜಿ.ಸಿ.ಕನ್ನೊಳ್ಳಿ. ವಿನೋದ ರಾಠೋಡ, ಕೆ.ಎಸ್.ಕಡಕಭಾವಿ, ಚನ್ನಪ್ಪ ಮಲಾಬಾದಿ, ಮಲ್ಲು ಮಸಳಿ, ಎ.ಟಿ.ಅಂಗಡಿ, ಅಜ್ಜು ಗಾವಡೆ, ಸಿಬ್ಬಂದಿ ಆದಣ್ಣ ಹೊಸಮನಿ, ಕಿರಣ ಪಾಟೀಲ, ಸಿದ್ದು ಕಾಂಬಳೆ ಸೇರಿದಂತೆ ತಾಲ್ಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

