ದೇವರಹಿಪ್ಪರಗಿ: ಪಟ್ಟಣದ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಬೊರೆವೆಲ್ ಕೊರೆಯಿಸುವುದರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ನೂತನ ಹಣಮಂತ ಯಲಗೂರ ಲೇಔಟ್ ವ್ಯಾಪ್ತಿಯಲ್ಲಿ ಸುಮಾರು ೨೫ ಮನೆಗಳು ನಿರ್ಮಾಣವಾಗಿದ್ದು, ಇಲ್ಲಿ ನೀರಿನ ಸರಬರಾಜು ಇರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ನೀರಿನ ಕೊರತೆ ಕಾಡುತ್ತಿದೆ. ಆದ್ದರಿಂದ ಪಟ್ಟಣ ಪಂಚಾಯಿತಿಯಿಂದ ಬೊರವೆಲ್ ಕೊರೆಯಿಸಿ ಕುಡಿಯುವ ನೀರು ಪೂರೈಸಿದರೆ ಸಾರ್ವಜನಿಕರ ನೀರಿನ ತಾಪತ್ರಯ ತಪ್ಪಿದಂತಾಗುತ್ತದೆ. ಆದ್ದರಿಂದ ಕೂಡಲೇ ಬೊರೆವೆಲ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಶಂಕರಗೌಡ ಪಾಟೀಲ(ಯರನಾಳ), ಮುನ್ನಾ ಮಳಖೇಡ, ಅಪ್ಪಾಕರ ಚಿಕ್ಕಸಿಂದಗಿ, ನಬಿರಸೂಲ್ ಮಣೂರ, ಅಷ್ಫಾಕ್ ಚಿಕ್ಕಸಿಂದಗಿ, ರಾಜೇಸಾಬ್ ಚಿಕ್ಕಸಿಂದಗಿ, ಇಬ್ರಾಹಿಂ ತಾಂಬೋಳಿ, ಕಾಶೀನಾಥ ಕಡ್ಲೇವಾಡ, ಯಾಕೂಬ್ ನದಾಫ್, ದಾದಾ ತಾಂಬೋಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

