Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಸಿಂದಗಿ: ದೇವರ ದಾಸಿಮಯ್ಯ ಅವರಂತಹ ವಚನಕಾರರು ಸಮಾಜವನ್ನು ಬಹಳ ಆಳವಾಗಿ ಅಧ್ಯಯನ ಮಾಡಿ, ಅದರ ಓರೆಕೋರೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅವುಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದವರು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಸಲ್ಲಿಸಿ ಮಾತನಾಡಿದ ಅವರು, ಇಡೀ ಮಾನವ ಸಮಾಜಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಎಲ್ಲ ಸಮುದಾಯಗಳಿಗೆ ಮಾದರಿಯಾಗಿದ್ದಾರೆ. ವಚನಗಳನ್ನು ಆಲಿಸುವುದರಿಂದ ಬದುಕಿನಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಶ್ಯಾಮಲಾ ಮಂದೇವಾಲ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಕಂದಾಯ ನಿರೀಕ್ಷಿಕ ಆಯ್.ಎ. ಮಕಂದಾರ, ಪವನಕುಮಾರ ಬೇನೂರ, ಕಾಶೀನಾಥ ತೇರದಾಳ, ರಮೇಶ ರೊಟ್ಟಿ, ಶರಣು ರೊಟ್ಟಿ, ಶರಣು ಕುಂಟೋಜಿ, ಮಲ್ಲು ಸೊನ್ನದ, ಸಿದ್ದಪ್ಪ ಶಹಾಪುರ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಸಿಂದಗಿ: ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಮನಗೂಳಿ ಪೆಟ್ರೋಲ್ ಬಂಕಲ್ಲಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಗುರುಬಸಪ್ಪ (ಕುಮಾರ) ದೇಸಾಯಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರನ್ನಾಗಿ ತಾಲೂಕಿನ ಬಬಲೇಶ್ವರ ದೇಸಾಯಿ ಅವರನ್ನು ಮಹ್ಮದ ಹ್ಯಾರಿಸ್ ನಲಪಾಡರವರ ಆದೇಶ ಮೇರೆಗೆ ಆಯ್ಕೆ ಮಾಡಲಾಗಿದೆ. ಯುವಕರನ್ನು ಒಗ್ಗೂಡಿಸುವುದು ಪಕ್ಷದ ಮುಖಂಡರ ಹೊಣೆಯವಾಗಿದೆ. ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಿ, ಸ್ಪಂದಿಸಿ ಸಹಕಾರ ನೀಡಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಭೀಮನಗೌಡ ಬಿರಾದಾರ, ಸತೀಶಗೌಡ ಬಿರಾದಾರ, ಪರಶುರಾಮ ಕಾಂಬಳೆ, ಮಹೇಶ ಮನಗೂಳಿ, ಷಣ್ಮುಖ ಹಿರೇಮಠ, ಮಲ್ಲಿಕಾರ್ಜುನ ಶಂಬೇವಾಡ, ಶ್ರೀಶೈಲ ದೇಸಾಯಿ, ದವಲತ ದೊಡಮನಿ, ಈರಣ್ಣ ನಾಯ್ಕೊಡಿ, ಮಲಕಣ್ಣ ನಂದೂರ, ಬೀರಪ್ಪ ಪೂಜಾರಿ, ಪ್ರಕಾಶ ಕರ್ಪೂರಮಠ, ಕುಪೇಂದ್ರಗೌಡ ಬಿರಾದಾರ, ಮನ್ಸೂರ ಮುಜಾವರ, ಅನಿಲ ದೊಡಮನಿ ಸೇರಿದಂತೆ…
ಚಿಮ್ಮಡ: ಬಾವಿ ಗೌರಮ್ಮಎಂದೇ ಖ್ಯಾತಳಾದ ಸಿರಸಿಯ ಗೌರಿ ಸಿ.ನಾಯ್ಕ ಅವರು ಚಿಮ್ಮಡ ಗ್ರಾಮದ ವಿರಕ್ತಮಠದಿಂದ ಅಕ್ಕಮಹಾದೇವಿ ಜಯಂತಿ ಹಾಗೂ ವಿರಕ್ರ ಮಹಾಸ್ವಾಮಿಗಳ ಸ್ಮರಣೋತ್ಸವದ ಅಂಗವಾಗಿ ಪ್ರತಿ ವರ್ಷನೀಡುವ ಅಕ್ಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಏಕಾಂಗಿಯಾಗಿ ಬಾವಿಗಳನ್ನು ತೋಡಿ ಮನೆಗಳಿಗೆ, ಅಂಗನವಾಡಿ ಮಕ್ಕಳಿಗೆ ನೀರಿನಆಸರೆಯಾಗಿ ನಿಂತ ೫೭ ವರ್ಷ ವಯಸ್ಸಿನ ಗೌರಮ್ಮಳ ಏಕಾಂಗಿ ಸಾಹಸಕ್ಕೆ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. ಏ.೨೩ ರಂದು ಶ್ರೀಮಠದಲ್ಲಿ ನಡೆಯುವ ಬ್ರಹತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
ಚಿಮ್ಮಡ: ನೇಕಾರರಿಗೆ ಕಾಂಗ್ರೆಸ್ ಪಕ್ಷ ನೀಡಿದಷ್ಟು ಸೌಲಭ್ಯಗಳನ್ನು ಇತಿಹಾಸದಲ್ಲಿ ಬೇರಾವ ಪಕ್ಷವೂ ನೀಡಿಲ್ಲವೆಂದು ನೇಕಾರರ ಒಕ್ಕೂಟದ ಜಿಲ್ಲಾಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನೇಕಾರರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗಾಗಿ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಹೇಳಿದಂತೆ ನಡೆದುಕೊಂಡಿದೆ, ನೇಕಾರರ ವಿದ್ಯುತ್ ಮಗ್ಗಗಳಿಗೂ ಉಚಿತ ವಿದ್ಯುತ್ ನೀಡುತ್ತಿದೆ ಅಲ್ಲದೇ ನೇಕಾರ ಸಮ್ಮಾನ ಯೋಜನೆಯಡಿ ಐದು ಸಾವಿರ ರೂ. ನೀಡುತ್ತಿದೆ. ಇಂಥಹ ಹಲವಾರು ಯೋಜನೆಗಳ ಮೂಲಕ ಬಡವರಿಗೆ, ನೇಕಾರರಿಗೆ ಶ್ರೀರಕ್ಷೆಯಾಗಿರುವ ಪಕ್ಷಕ್ಕೆ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಮತವನ್ನು ನೀಡುವ ಮೂಲಕ ಬೆಂಬಲಿಸಬೇಕಾಗಿದೆ ಎಂದರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷ ಬದ್ದತೆಗೆ ಹೆಸರಾಗಿದೆ ಸಚಿವ ಶಿವಾನಂದ ಪಾಟೀಲರು ನೇಕಾರರ ಕುರಿತ ಕಳಕಳಿ ಹೊಂದಿದವರಾಗಿದ್ದು ಅಂಥವರನ್ನು ಬೆಂಬಲಿಸಿದಲ್ಲಿ ಬಡ ನೇಕಾರರಿಗೆ ಅನುಕೂಲವಾಗಲಿದೆ ಎಂದರು..ನೇಕಾರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಗಪ್ಪ…
ತಿಕೋಟಾ: ತಾಲ್ಲೂಕಿನ ಕನಮಡಿ ಗ್ರಾಮದ ಮಲ್ಲಪ್ಪ ಆರ್. ತುಂಗಳ ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಹಕಾರಿ ಕ್ಷೇತ್ರ ಸೇರಿದಂತೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೂ ಕೊಡುಗೆಯನ್ನು ನೀಡುತ್ತಾ ಗ್ರಾಮದ ಕೀರ್ತಿಯನ್ನು ಎಲ್ಲಡಡೆ ಹರಡುವಂತೆ ಮಾಡಿದ ಇವರಿಗೆ ಪ್ರಶಸ್ತಿ ಲಭಿಸಿರುವದು ಗ್ರಾಮಸ್ಥರಿಗೆ ಖುಷಿ ತಂದಿದೆ.ಈ ಸಂದರ್ಭದಲ್ಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜಡೆಸಿದ್ದೇಶ್ವರ ಶಿವಾಚಾರ್ಯ, ವೀರಗಂಗಾಧರ ಶಿವಾಚಾರ್ಯ ಹಾಗೂ ಅತಿಥಿಗಳು ಇದ್ದರು.
ಗಬಸಾವಳಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಜಿಗಜಿಣಗಿ ಮನವಿ ಮೋರಟಗಿ: ಪ್ರಧಾನಿ ಮೋದಿ ಹಾಗೂ ಸಚಿವರ ಮನವೊಲಿಸಿ ಕಳೆದ ಅವಧಿಯಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಜಿ ಸರಕಾರಕ್ಕೆ ಬೆಂಬಲಿಸಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಸಮೀಪದ ಗಬಸಾವಳಗಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೋರಟಗಿ ಮತ್ತು ಯಂಕಂಚಿ ಜಿಲ್ಲಾ ಪಂಚಾಯಿತಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ವಿಜಯಪುರ ಇತಿಹಾಸದಲ್ಲೇ ಗುರುತಿಸುವಂಥ ಕೆಲಸಗಳು ಕಳೆದ ಅವಧಿಯಲ್ಲಿ ಆಗಿವೆ. ನಾನೊಬ್ಬ ಜಾತ್ಯತೀತ ನಾಯಕ. ಜನ ನನ್ನ ಸರಳತೆ ನೋಡಿ ಆಶೀರ್ವದಿಸಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮತ್ತೊಮ್ಮೆ ತಮ್ಮ ಸೇವೆಗೆ ಅವಕಾಶ ಕಲ್ಪಿಸಲು ಆಶೀರ್ವದಿಸಬೇಕು ಎಂದರು.ಪ್ರಧಾನಿ ಮೋದಿ ಅವರ ಆಡಳಿತದಿಂದ ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರವಾಗಿದೆ. ೫೦…
ಕ್ಲಾಪ್ ಮಾಡಿ ಶುಭ ಹಾರೈಸಿದ ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಬೆಂಗಳೂರು: ಜಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀ ಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ಮುಹೂರ್ತ ಸಮಾರಂಭ ಏ.13 ಶನಿವಾರ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ಆರಂಭವಾಯಿತು.ಇಂಚಗೇರಿಯ ಶ್ರೀ ಪ್ರಭುಜೀ ಮಹಾರಾಜರ ಸಾನಿಧ್ಯದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.ಇಂಚಗೇರಿಯ ಶ್ರೀ ಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆಯನ್ನು ಚಿತ್ರ ಮಾಡಿ ಎಂದು ನಾನು ಎರಡು ವರ್ಷಗಳ ಹಿಂದೆ ನಿರ್ಮಾಪಕ ಮಾಧವಾನಂದ ಅವರಿಗೆ ತಿಳಿಸಿದೆ. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಇಂಚಗೇರಿ ಸಂಪ್ರದಾಯಕ್ಕೆ ಅದರದೆ ಆದ ಮಹತ್ವವಿದೆ. ಅದನ್ನು ಶ್ರೀಸಂಗಮೇಶ್ವರ ಮಹಾರಾಜರು ಪಾಲಿಸಿಕೊಂಡು ಬರುತ್ತಿದ್ದರು. ಕಲಿಯುಗದ ಕಲ್ಪತರುವೆಂದೆ ಖ್ಯಾತರಾಗಿರುವ ಶ್ರೀಸಂಗಮೇಶ್ವರರ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶ್ರೀಪ್ರಭುಜೀ ಮಹಾರಾಜರು ಆಶೀರ್ವದಿಸಿದರು.ನಾನು ಈ…
ದೇವರಹಿಪ್ಪರಗಿ: ದೇಶ ಕಟ್ಟಿದ್ದು ಕಣ್ಣ ಮುಂದೆಯೇ ಇದ್ದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಸಾವಿರಾರು ಡ್ಯಾಮ್‌ಗಳನ್ನು ಕಟ್ಟಿದ್ದು ಯಾರು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು.ಮತಕ್ಷೇತ್ರದ ಬಂಡೆಪ್ಪ ಸಾಲವಾಡಗಿ ಹಾಗೂ ಕುದರಿ ಸಾಲವಾಡಗಿ ಗ್ರಾಮಗಳಲ್ಲಿ ಶನಿವಾರ ಸಂಜೆ ನಡೆದ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.ದೊಡ್ಡ ದೊಡ್ಡ ಸಂಸ್ಥೆ, ಶಾಲೆ, ಕಾರ್ಖಾನೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ಒಂದು ಸೂಜಿಯೂ ದೇಶದಲ್ಲಿ ತಯಾರಾಗದ ಸ್ಥಿತಿಯನ್ನು ಮೀರಿಸಿ ಜಗತ್ತಿನ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಇಟ್ಟಿದ್ದು ನಮ್ಮ ಪಕ್ಷ. ಇವರು ಅಧಿಕಾರಕ್ಕೆ ಬಂದು ಅಚ್ಛೇ ದಿನ್ ಅಂತ ಹೇಳಿ ಕೆಟ್ಟ ಪ್ರಯೋಗಗಳನ್ನು ಮಾಡಿದರು. ನೋಟು ಬ್ಯಾನ್ ಮಾಡಿ ಆರ್ಥಿಕ ಸ್ಥಿತಿ ಹದಗೆಡಿಸಿದರು. ಮನಮೋಹನ್ ಸಿಂಗ್ ಅವರು ಇದ್ದಾಗ ಎಪ್ಪತ್ತೆರಡು ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿಯವರು ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಹೊಟ್ಟೆ ತುಂಬಿಸುವ, ಜನರ ಬದುಕು ಸುಧಾರಿಸುವ…
ಕೊಲ್ಹಾರ: ತಾಲೂಕಿನ ಕಲಗುರ್ಕಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ೧೦ನೇ ವಾರ್ಷಿಕೋತ್ಸವ ಏ.೧೬ರಿಂದ ೨೬ರ ವರೆಗೆ ವಿವಿಧ ಧಾರ್ಮಿಕ, ಮನೋರಂಜನಾ, ಹಾಸ್ಯ ವಿಡಂಬನೆ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮಗಳು ನಡೆಯುವವು ಎಂದು ಮಲ್ಲಿಕಾರ್ಜುನ ದೇವಸ್ಥಾನದ ದಶಮಾನೋತ್ಸವ ಸೇವಾ ಸಮೀತಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯುವವು. ದಿನಾಂಕ ೧೬ ಮಂಗಳವಾರ ಸಾಯಂಕಾಲ ೭ ಘಂಟೆಗೆ ಪುರಾಣ ಕಾರ್ಯಕ್ರಮದ ಪ್ರಾರಂಭೋತ್ಸವ ಹರ ಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ನಡೆಯುವದು. ಕಲಬುರ್ಗಿ ಜಿಲ್ಲೆ ಚಿಂಚೊಳ್ಳಿ ತಾಲೂಕಿನ ಐನಾಪೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಪಂಚಾಕ್ಷರಿ ದೇವರ ಅಮ್ರತವಾಣಿಯಿಂದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪಠಣ ನಡೆಯುವದು. ಬಸಲಿಂಗಯ್ಯ ಗವಾಯಿಗಳು ಹಾಗೂ ಸುಭಾಸ ಸಂಗೀತಸೇವೆ ಒದಗಿಸುವರು.ದಿನಾಂಕ ೨೫ ಗುರುವಾರ ಮುಂಜಾನೆ ೯ ಘಂಟೆಗೆ ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯಕ್ರಮ ೧೦.೩೦ ಘಂಟೆಗೆ ಧರ್ಮಸಭೆ, ಸಾಯಂಕಾಲ ೬ ಘಂಟೆಗೆ ದೇಶ ಸೇವೇಗೈದ ನೀವೃತ್ತ…
