ಚಿಮ್ಮಡ: ಬಾವಿ ಗೌರಮ್ಮಎಂದೇ ಖ್ಯಾತಳಾದ ಸಿರಸಿಯ ಗೌರಿ ಸಿ.ನಾಯ್ಕ ಅವರು ಚಿಮ್ಮಡ ಗ್ರಾಮದ ವಿರಕ್ತಮಠದಿಂದ ಅಕ್ಕಮಹಾದೇವಿ ಜಯಂತಿ ಹಾಗೂ ವಿರಕ್ರ ಮಹಾಸ್ವಾಮಿಗಳ ಸ್ಮರಣೋತ್ಸವದ ಅಂಗವಾಗಿ ಪ್ರತಿ ವರ್ಷನೀಡುವ ಅಕ್ಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಕಾಂಗಿಯಾಗಿ ಬಾವಿಗಳನ್ನು ತೋಡಿ ಮನೆಗಳಿಗೆ, ಅಂಗನವಾಡಿ ಮಕ್ಕಳಿಗೆ ನೀರಿನಆಸರೆಯಾಗಿ ನಿಂತ ೫೭ ವರ್ಷ ವಯಸ್ಸಿನ ಗೌರಮ್ಮಳ ಏಕಾಂಗಿ ಸಾಹಸಕ್ಕೆ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. ಏ.೨೩ ರಂದು ಶ್ರೀಮಠದಲ್ಲಿ ನಡೆಯುವ ಬ್ರಹತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

