ಚಿಮ್ಮಡ: ನೇಕಾರರಿಗೆ ಕಾಂಗ್ರೆಸ್ ಪಕ್ಷ ನೀಡಿದಷ್ಟು ಸೌಲಭ್ಯಗಳನ್ನು ಇತಿಹಾಸದಲ್ಲಿ ಬೇರಾವ ಪಕ್ಷವೂ ನೀಡಿಲ್ಲವೆಂದು ನೇಕಾರರ ಒಕ್ಕೂಟದ ಜಿಲ್ಲಾಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನೇಕಾರರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗಾಗಿ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಹೇಳಿದಂತೆ ನಡೆದುಕೊಂಡಿದೆ, ನೇಕಾರರ ವಿದ್ಯುತ್ ಮಗ್ಗಗಳಿಗೂ ಉಚಿತ ವಿದ್ಯುತ್ ನೀಡುತ್ತಿದೆ ಅಲ್ಲದೇ ನೇಕಾರ ಸಮ್ಮಾನ ಯೋಜನೆಯಡಿ ಐದು ಸಾವಿರ ರೂ. ನೀಡುತ್ತಿದೆ. ಇಂಥಹ ಹಲವಾರು ಯೋಜನೆಗಳ ಮೂಲಕ ಬಡವರಿಗೆ, ನೇಕಾರರಿಗೆ ಶ್ರೀರಕ್ಷೆಯಾಗಿರುವ ಪಕ್ಷಕ್ಕೆ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಮತವನ್ನು ನೀಡುವ ಮೂಲಕ ಬೆಂಬಲಿಸಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷ ಬದ್ದತೆಗೆ ಹೆಸರಾಗಿದೆ ಸಚಿವ ಶಿವಾನಂದ ಪಾಟೀಲರು ನೇಕಾರರ ಕುರಿತ ಕಳಕಳಿ ಹೊಂದಿದವರಾಗಿದ್ದು ಅಂಥವರನ್ನು ಬೆಂಬಲಿಸಿದಲ್ಲಿ ಬಡ ನೇಕಾರರಿಗೆ ಅನುಕೂಲವಾಗಲಿದೆ ಎಂದರು..
ನೇಕಾರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಗಪ್ಪ ಹಳ್ಳೂರ. ಅಶೋಕ ಧಡೂತಿ, ಚಂದ್ರಕಾಂತ ಜಾಡಗೌಡ, ಪಿಕೆಪಿಎಸ್ ನಿರ್ದೆಶಕ ಚನ್ನಪ್ಪಾ ಬಿಳ್ಳೂರ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿರಸಾಬ ನದಾಫ, ಚನಮಲ್ಲಪ್ಪಾ ವಿಜಾಪೂರ ಇಮಾಮ ಯಾದವಾಡ, ಮಹಾದೇವ ಅಥಣಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

