ಸಿಂದಗಿ: ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಮನಗೂಳಿ ಪೆಟ್ರೋಲ್ ಬಂಕಲ್ಲಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಗುರುಬಸಪ್ಪ (ಕುಮಾರ) ದೇಸಾಯಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರನ್ನಾಗಿ ತಾಲೂಕಿನ ಬಬಲೇಶ್ವರ ದೇಸಾಯಿ ಅವರನ್ನು ಮಹ್ಮದ ಹ್ಯಾರಿಸ್ ನಲಪಾಡರವರ ಆದೇಶ ಮೇರೆಗೆ ಆಯ್ಕೆ ಮಾಡಲಾಗಿದೆ. ಯುವಕರನ್ನು ಒಗ್ಗೂಡಿಸುವುದು ಪಕ್ಷದ ಮುಖಂಡರ ಹೊಣೆಯವಾಗಿದೆ. ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಿ, ಸ್ಪಂದಿಸಿ ಸಹಕಾರ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಭೀಮನಗೌಡ ಬಿರಾದಾರ, ಸತೀಶಗೌಡ ಬಿರಾದಾರ, ಪರಶುರಾಮ ಕಾಂಬಳೆ, ಮಹೇಶ ಮನಗೂಳಿ, ಷಣ್ಮುಖ ಹಿರೇಮಠ, ಮಲ್ಲಿಕಾರ್ಜುನ ಶಂಬೇವಾಡ, ಶ್ರೀಶೈಲ ದೇಸಾಯಿ, ದವಲತ ದೊಡಮನಿ, ಈರಣ್ಣ ನಾಯ್ಕೊಡಿ, ಮಲಕಣ್ಣ ನಂದೂರ, ಬೀರಪ್ಪ ಪೂಜಾರಿ, ಪ್ರಕಾಶ ಕರ್ಪೂರಮಠ, ಕುಪೇಂದ್ರಗೌಡ ಬಿರಾದಾರ, ಮನ್ಸೂರ ಮುಜಾವರ, ಅನಿಲ ದೊಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮೊದಲ ಪುಟಪಕ್ಷ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ :ಶಾಸಕ ಮನಗೂಳಿ
Related Posts
Add A Comment

