Author: editor.udayarashmi@gmail.com

ಇಂಡಿ: ಮೇ.7ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್‌ ಸಮಿತಿ, ಗ್ರಾಮ ಪಂಚಾಯಿತಿ ಹಿರೇರೂಗಿ ವತಿಯಿಂದ ‘ರಂಗೋಲಿ ಬಿಡಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸುತ್ತದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.ತಾಲೂಕ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ನೀಲಗಂಗಾ ಮಾತನಾಡಿ, ಚುನಾವಣೆ ಎಂಬ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಮತದಾರ ಭಾಂದವರೇ ಪ್ರಭುಗಳು. ರಾಜ್ಯದ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಪಾತ್ರ ಬಹುಮುಖ್ಯ. ಜವಾಬ್ದಾರಿಯುತವಾಗಿ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಹೇಳಿದರು.ಹಿರೇರೂಗಿ ಪಿಡಿಓ ಬಸವರಾಜ…

Read More

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ ಪತ್ರಿಕಾ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಡಾ. ಬಾಬಾಸಾಹೇಬರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿಣಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಸಲಹಾ ಮಂಡಳಿಯ ಇರ್ಫಾನ್ ಶೇಖ್ ಮತ್ತಿತರರಿದ್ದರು.

Read More

ತಾಳಿಕೋಟಿ: ಮಹಾಮಾನವತವಾದಿ, ಸಮಾನತೆಯ ಹರಿಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರು ಎಲ್ಲ ಜಾತಿ ಜನಾಂಗದವರ ಏಳಿಗೆಯನ್ನು ಬಯಸಿದರು. ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶಗಳಿವೆ. ಇಂತಹ ಮಹಾನ್ ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಬಾರದು ಎಂದು ದಲಿತ ಮುಖಂಡ ಜೈ ಭೀಮ ಮುತ್ತಗಿ ಹೇಳಿದರು.ಭಾನುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 133 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ. ಅಂಬೇಡ್ಕರ್ ಅವರು ತಮ್ಮ ಜೀವನ ದುದ್ದಕ್ಕೂ ಅವಮಾನ ಮತ್ತು ನೋವನ್ನು ಅನುಭವಿಸಿದರು ಆದರೂ ತಮ್ಮ ಜೀವನದ ಗುರಿಯನ್ನು ತಲುಪಲು ಅವರು ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾದರು. ಅವರು ನಮಗೆ ವಿಶ್ವವಿಖ್ಯಾತವಾದ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ ಇಂಥ ಶ್ರೇಷ್ಠ ಗ್ರಂಥವನ್ನು ಬದಲಿಸುವ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ. ಇದು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬುದು ಅವರು ತಿಳಿಯಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ ಕೀರ್ತಿ ಚಾಲಕ್ ಅವರು ಶ್ರೇಷ್ಠ ದಾರ್ಶನಿಕರಾದ…

Read More

ಆಲಮಟ್ಟಿ: ಸಂವಿಧಾನ ಶಿಲ್ಲಿ, ವಿಶ್ವಜ್ಞಾನಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮನುಸ್ಮೃತಿ ಆವಣಿ೯ಯವಾಗಿದೆ ಎಂದು ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎ.ಹೇಮಗಿರಿಮಠ ಹೇಳಿದರು. ಭಾನುವಾರ ಸ್ಥಳೀಯ ಎಂ.ಎಚ್.ಎಂ.ಪಪೂ ಕಾಲೇಜು ಆವರಣದಲ್ಲಿ ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ ನೇ ಜಯಂತಿ ಕಾರ್ಯಕ್ರಮದ ನಿಮಿತ್ಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಶ್ರದ್ಧೆಯಿಂದ ಪಡೆದ ಶಿಕ್ಷಣವೇ ಅಂಬೇಡ್ಕರ್ ಅವರನ್ನು ಜಗದಲ್ಲಿ ಮಿನುಗುವಂತೆ ಮಾಡಿದೆ.ದೇಶದ ಅಪ್ರತಿಮ ಅಂಬೇಡ್ಕರ್ ಎಂಬ ಸರಳತೆಯ ಪ್ರತಿಭೆಗೆ ಇಡೀ ವಿಶ್ವವೇ ಇಂದು ಗೌರವನಮನ ಸಲ್ಲಿಸಿ ಧನ್ಯತೆಭಾವ ಮೆರೆಯುತ್ತಿದೆ. ಅಂಬೇಡ್ಕರ್ ಅವರಲ್ಲಿ ಜ್ಞಾನ ಭಂಡಾರದ ಅಗಾಧತೆ ಎಂಥದಿತ್ತು ಎಂಬುದನ್ನು ನಾವು ಅರಿಯಬಹುದು. ದೇಶದ ಜನತೆಯ ನೆಮ್ಮದಿಯ ಬದುಕಿಗೆ ಪವಿತ್ರ,ಅದ್ಭುತ ಸಂವಿಧಾನ ಅವರು ನೀಡಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವುಗಳು ಜೀವನಪಥ ಸಾಗಿಸಿದರೆ ಯಶಸ್ಸು ಕಾಣಬಹುದು ಎಂದರು. ಬಾಬಾಸಾಹೇಬರ ದೂರದೃಷ್ಟಿಯ ಚಿಂತನೆ, ವಿಶಾಲ ಮನಸ್ಥಿತಿಯ ಅಧ್ಯಯನ, ಮಾನವೀಯ ಮೌಲ್ಯಗಳ ಸಾಮಾಜಿಕ ಕಳಕಳಿ…

Read More

ಆಲಮಟ್ಟಿ: ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಲು ಸಂವಿಧಾನವೇ ಮೂಲ ಕಾರಣ.ಇಂಥ ಪವಿತ್ರ ಗ್ರಂಥದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಲು ಹಾಗೂ ಜೀವನದ ಪಯಣ ಸುಗಮವಾಗಿ ಸಾಗಿಸಲು ಅಂಬೇಡ್ಕರ್ ಅವರೇ ನಮಗೆಲ್ಲ ಪ್ರೇರಣೆ ಅಗಿದ್ದಾರೆ.ಅವರ ಮಾನವೀಯತೆ ತುಡಿತ ನಿಜಕ್ಕೂ ಅನನ್ಯ ಎಂದು ಮುಖ್ಯೋಪಾಧ್ಯಾಯ ಎನ್.ಬಿ.ಬಾಬಾನಗರ ಹೇಳಿದರು. ಇಲ್ಲಿಗೆ ಸಮೀಪದ ಚಿಮ್ಮಲಗಿ ಭಾಗ-೨ ಪುನರ್ವಸತಿ ಕೇಂದ್ರದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ೧೩೩ ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪ್ರಬುದ್ಧ ಸಮಾಜ,ಶೋಷಿತರ ಜೀವನ ಮಟ್ಟ ಸುಧಾರಿಸುವ ಕನಸು ಹೊಂದಿದ್ದ ಅಂಬೇಡ್ಕರ್ ಅವರ ಜೀವನ ಮೌಲ್ಯದ ಯಶೋಗಾಥೆ ದೇಶವಾಸಿಗಳಿಗೆಲ್ಲ ಸ್ಪೂರ್ತಿಯಾಗಿದೆ. ಸಮಗ್ರ ಗೌರವಾಧಾರಿತ ವ್ಯಕ್ತಿತ್ವದ ಹೆಗ್ಗಳಿಕೆಗೆ ಅಂಬೇಡ್ಕರ್ ಪಾತ್ರರಾಗಿದ್ದಾರೆ. ಅವರ ಕಳಕಳಿ, ಸಾಧನೆಯಿಂದಲೇ ಸಂವಿಧಾನದ ಅದ್ಭುತ ಗ್ರಂಥ ಮಾರ್ಗ ದೊರೆತಿದೆ. ಅಂಬೇಡ್ಕರ್ ಅವರ ಚಿಂತನೆ ವಿಶ್ವದೆಲ್ಲೆಡೆ ಘಮಘಮಿಸಿದೆ ಎಂದು ಬಣ್ಞಿಸಿದರು. ವಿಶ್ವಜ್ಞಾನಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಮಾಲೆ ಹಾಕಿ…

Read More

ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳ ಗ್ರಾಮದ ನಿವಾಸಿ ವಿಜಯಲಕ್ಷ್ಮೀ ವಡ್ಡರ ಮತ್ತು ಈಕೆಯ ೩ ವರ್ಷದ ಪುತ್ರ ಉಮೇಶ ವಡ್ಡರ ಕಾಣೆಯಾಗಿರುವದಾಗಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಾವಲಗಿ ಗ್ರಾಮದ ಈ ಕುಟುಂಬ ಕೆಲ ವರ್ಷಗಳ ಹಿಂದೆ ಹಿರೇಮುರಾಳ ಗ್ರಾಮದಲ್ಲಿ ವಾಸವಾಗಿದ್ದರು. ಮಗುವನ್ನು ಕರೆದುಕೊಂಡು ಮಾ.೩೧ ರಂದು ಮನೆಯಿಂದ ಕೂಲಿ ಕೆಲಸಕ್ಕೆ ಹೋಗಿ ಬರುವದಾಗಿ ತಿಳಿಸಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಎಂದು ವಿಜಯಲಕ್ಷ್ಮೀಯ ತಾಯಿ ಕಸ್ತೂರಿ ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಒಟ್ಟು ಶುಲ್ಕದಲ್ಲಿ ವಿನಾಯತಿ ನೀಡುತ್ತಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಭ್ಯುದಯ ಕಾಲೇಜು ಆವರಣದಲ್ಲಿ ನಡೆದ ಬ್ರಿಲಿಯಂಟ್ ಟ್ಯಾಲೆಂಟ್ ಅವಾರ್ಡ ಪರೀಕ್ಷೆ-೨೦೨೪ ರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ಕಳೆದ ಹಲವು ವರ್ಷಗಳಿಂದ ನಮ್ಮ ಸಂಸ್ಥೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತ ಬಂದಿದೆ. ಒಳ್ಳೆಯ ವಾತಾವರಣ, ಗುಣಮಟ್ಟದ ಕಟ್ಟಡ ಹೊಂದಿರುವ ಕಾಲೇಜಿನಲ್ಲಿ ನುರಿತ ಪ್ರಾಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಅವಾರ್ಡ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮೊದಲ ೧೦ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ ಕಾಲೇಜು ಫೀ ಉಚಿತ, ನಂತರದ ೫ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ.೫೦ ರಿಯಾಯತಿ, ಮುಂದಿನ ೧೦ ವಿದ್ಯಾರ್ಥಿಗಳಿಗೆ ಕಾಳೇಜು ಶುಲ್ಕದಲ್ಲಿ ಶೇ೨೦ ರಿಯಾಯತಿ ಮತ್ತು ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ…

Read More

ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ಈ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎಲ್.ಎಂ.ನಾಯ್ಕೋಡಿ, ಮುಖ್ಯಗುರು ಎಸ್.ವಿ.ಹಿರೇಮಠ, ದೈಹಿಕ ಶಿಕ್ಷಕ ಎ.ಸಿ.ಕೆರೂರ, ಶಿಕ್ಷಕರುಗಳಾದ ಕೆ.ಎಸ್.ಚೆಟ್ಟಿ, ತಬಸ್ಸುಮ ಖಾಜಿ, ಸಂತೋಷ್ ಬಿದರಿ, ಮಹಾನಂದ ಹತ್ತರಕಿಹಾಳ ಉಪಸ್ಥಿತರಿದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತ್ಯುತ್ಸವವನ್ನು ಆಚರಿಸಲಾಯಿತು.ಈ ವೇಳೆ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರುಗಳಾದ ಗುರುಬಾಯಿ ತಂಗಡಗಿ, ವಿ.ವಿ.ಪಾಟೀಲ್, ಮಂಜುನಾಥ ಪಡದಾಳಿ, ಗುಂಡಣ್ಣ ಬಡಿಗೇರ, ಆರ್.ಕೆ.ಕುಲಕರ್ಣಿ, ಪಾಲಕರಾದ ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಮತ್ತೀತರರು ಇದ್ದರು.

Read More

ದೇವರಹಿಪ್ಪರಗಿ: ಮಡಿವಾಳ ಮಾಚಿದೇವ ಒಬ್ಬ ಲೋಕಚಿಂತಕ. ಅವನ ಜನ್ಮಭೂಮಿ ಅಭಿವೃದ್ಧಿಗೆ ಜಾತಿ, ಮತವೆನ್ನದೇ ಎಲ್ಲರೂ ಒಂದಾಗಿ ನಿಂತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು.ಪಟ್ಟಣದ ಮಡಿವಾಳ ಮಾಚಿದೇವರ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಸದಯ್ಯನಮಠದಲ್ಲಿ ಜರುಗಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಾವು ಮಾಡುವ ಕಾರ್ಯ ನಮ್ಮನ್ನು ನೆನೆಸುವಂತಿರಬೇಕು. ಆಗ ಮಾತ್ರ ನಮಗೆ ಇರುವಿಕೆಗೆ ನಿಜವಾದ ಅರ್ಥ. ಇಂದು ಮಡಿವಾಳ ಮಾಚಿದೇವನ ಕುರಿತು ಉತ್ಕೃಷ್ಟ ಸಾಹಿತ್ಯಕ ಗ್ರಂಥ ರಚನೆಯಾಗಬೇಕಾಗಿದೆ. ಭಾವನೆಗಳ ಮೂಲಕ ನಾವೆಲ್ಲ ಕೂಡಿ ಕಾರ್ಯಕಾಡುವ ಕೆಲಸಕ್ಕೆ ಖಂಡಿತ ಯಶಸ್ಸು ದೊರೆಯುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖರು ಮಾಚಿದೇವನ ಹೆಸರಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು. ನಮ್ಮ ರಚನ ಮತ್ತು ವಚನಗಳ ಮೂಲಕ ಏನೆಲ್ಲಾ, ಹೇಗೆ? ಸಾಧನೆ ಮಾಡಬಹುದು ಎಂಬುದರ ಕುರಿತು ಮಾರ್ಮಿಕವಾಗಿ ಹೇಳಿದರು.ಸಮಾಜ ಚಿಂತಕ ಅಶೋಕ ದೊಮ್ಮಲೂರು ,ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರಡ್ಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಬಿ.ಕೆ.ಪಾಟೀಲ, ಜಿ.ಬಿ.ಸಾಲಕ್ಕಿ, ಕಾಶೀನಾಥ…

Read More