ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಒಟ್ಟು ಶುಲ್ಕದಲ್ಲಿ ವಿನಾಯತಿ ನೀಡುತ್ತಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಭ್ಯುದಯ ಕಾಲೇಜು ಆವರಣದಲ್ಲಿ ನಡೆದ ಬ್ರಿಲಿಯಂಟ್ ಟ್ಯಾಲೆಂಟ್ ಅವಾರ್ಡ ಪರೀಕ್ಷೆ-೨೦೨೪ ರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ಕಳೆದ ಹಲವು ವರ್ಷಗಳಿಂದ ನಮ್ಮ ಸಂಸ್ಥೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತ ಬಂದಿದೆ. ಒಳ್ಳೆಯ ವಾತಾವರಣ, ಗುಣಮಟ್ಟದ ಕಟ್ಟಡ ಹೊಂದಿರುವ ಕಾಲೇಜಿನಲ್ಲಿ ನುರಿತ ಪ್ರಾಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಅವಾರ್ಡ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮೊದಲ ೧೦ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ ಕಾಲೇಜು ಫೀ ಉಚಿತ, ನಂತರದ ೫ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ.೫೦ ರಿಯಾಯತಿ, ಮುಂದಿನ ೧೦ ವಿದ್ಯಾರ್ಥಿಗಳಿಗೆ ಕಾಳೇಜು ಶುಲ್ಕದಲ್ಲಿ ಶೇ೨೦ ರಿಯಾಯತಿ ಮತ್ತು ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಶೇ೧೦ ರಿಯಾಯತಿ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಹಿಂದಿನ ವರ್ಷ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಕಿರಣ ಮದರಿ, ಪ್ರಶಾಂತ ಬಿರಾದಾರ, ಮುನೀರ ನಾಯಕ, ಎ.ಎಫ್.ಭುವಾಜಿ, ಕೆ.ಬಿ.ರೂಡಗಿ, ಸುರಜ ತಳವಾರ, ರಂಗಸ್ವಾಮಿ ಎಸ್, ಅವಿನಾಶ ತಾಳಿಕೋಟೆ, ಎನ್.ಟಿ.ಗೌಡರ, ರವಿ ಚಾಂದವಾಡಿ, ಎಂ.ಚಂದ್ರಶೇಖರ, ಪಿ.ನರೇಶ, ನಿವೇದಿತಾ ದೇಶಪಾಂಡೆ, ಎಚ್.ಎಸ್.ಗೌಡರ ಸೇರಿದಂತೆ ಮತ್ತೀತರರು ಇದ್ದರು.
ಪ್ರಾಂಶುಪಾಲ ಬಿ.ಜಿ.ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

