Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ

ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ

ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಾ. ಅಂಬೇಡ್ಕರ ಒಂದು ಜಾತಿಗೆ ಸೀಮಿತರಲ್ಲ :ಮುತ್ತಗಿ
(ರಾಜ್ಯ ) ಜಿಲ್ಲೆ

ಡಾ. ಅಂಬೇಡ್ಕರ ಒಂದು ಜಾತಿಗೆ ಸೀಮಿತರಲ್ಲ :ಮುತ್ತಗಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತಾಳಿಕೋಟಿ: ಮಹಾಮಾನವತವಾದಿ, ಸಮಾನತೆಯ ಹರಿಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರು ಎಲ್ಲ ಜಾತಿ ಜನಾಂಗದವರ ಏಳಿಗೆಯನ್ನು ಬಯಸಿದರು. ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶಗಳಿವೆ. ಇಂತಹ ಮಹಾನ್ ವ್ಯಕ್ತಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಬಾರದು ಎಂದು ದಲಿತ ಮುಖಂಡ ಜೈ ಭೀಮ ಮುತ್ತಗಿ ಹೇಳಿದರು.
ಭಾನುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 133 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ತಮ್ಮ ಜೀವನ ದುದ್ದಕ್ಕೂ ಅವಮಾನ ಮತ್ತು ನೋವನ್ನು ಅನುಭವಿಸಿದರು ಆದರೂ ತಮ್ಮ ಜೀವನದ ಗುರಿಯನ್ನು ತಲುಪಲು ಅವರು ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾದರು. ಅವರು ನಮಗೆ ವಿಶ್ವವಿಖ್ಯಾತವಾದ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ ಇಂಥ ಶ್ರೇಷ್ಠ ಗ್ರಂಥವನ್ನು ಬದಲಿಸುವ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ. ಇದು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬುದು ಅವರು ತಿಳಿಯಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ ಕೀರ್ತಿ ಚಾಲಕ್ ಅವರು ಶ್ರೇಷ್ಠ ದಾರ್ಶನಿಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಶ್ರೇಷ್ಠವಾದ ಸಂವಿಧಾನವನ್ನು ನಮಗೆ ಕೊಟ್ಟು ಹೋಗಿದ್ದಾರೆ ಅದರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿಸಲಾಗಿದೆ. ಡಾ. ಬಿ .ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದ ಮುನ್ನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ತಾಲೂಕು ಆಡಳಿತ ಹಾಗೂ ಅಂಬೇಡ್ಕರ ಸಮಾಜದ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ತಾಲೂಕ ಪಂಚಾಯತ.ಇ ಒ ಬಸವಂತ್ರಾಯಗೌಡ, ಆರ್.ಬಿರಾದಾರ. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಪಿಎಸ್ ಆಯ್ ಎಂ. ಡಿ. ಘೋರಿ, ದಲಿತ ಮುಖಂಡರಾದ ಮುತ್ತಪ್ಪ ಚಮಲಾಪೂರ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಕಸಾಪ ಅಧ್ಯಕ್ಷ ಆರ್. ಎಲ್ ಕೊಪ್ಪದ, ದೇವು ಹಾದಿಮನಿ, ಕಾರ್ತಿಕ್ ಕಟ್ಟಿಮನಿ, ನಾಗೇಶ್ ಕಟ್ಟಿಮನಿ, ಮಹೇಶ ಚಲವಾದಿ, ಮುರಿಗೆಪ್ಪ ಸರಶೆಟ್ಟಿ, ಅಲ್ಲಾಬಕ್ಷ ನಮಾಜಕಟ್ಟಿ, ಮಾಸೂಮಸಾಬ ಕೆಂಭಾವಿ, ಮಂಜುನಾಥ ಶಟ್ಟಿ, ಇಬ್ರಾಹೀಂ ಮನ್ಸೂರ, ಗಂಗಾಧರ ಕಸ್ತೂರಿ, ಸಿ ಆರ್ ಸಿ ರಾಜುಸಿಂಗ್ ವಿಜಾಪೂರ, ಇಬ್ರಾಹಿಂ ಅಲಮೇಲ, ಗೋಪಾಲ ಕಟ್ಟಿಮನಿ, ಅಬೂಬಕರ ಲಾಹೋರಿ, ನಬಿ ಲಾಹೋರಿ, ಜಗದಿಶ, ಆರ್.ಜೈನಾಪೂರ, ಸಮಾಜ ಕಲ್ಯಾಣ ಇಲಾಖೆಯ ಎಸ್. ಎಂ. ಕಲಬುರಗಿ, ಕೋರಿ, ಪುರಸಭೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ

ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ

ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ

ಪತ್ರಕರ್ತ ಈರಯ್ಯ ಪುತ್ರ ಶ್ರೀಹರ್ಷ ಉತ್ತಮ ಫಲಿತಾಂಶ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ
    In (ರಾಜ್ಯ ) ಜಿಲ್ಲೆ
  • ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಈರಯ್ಯ ಪುತ್ರ ಶ್ರೀಹರ್ಷ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಲಾಡ್ಜ್ ಮೇಲೆ ಪೊಲೀಸ್ ದಾಳಿ: ವೇಶ್ಯಾವಾಟಿಕೆ ಜಾಲದ ಈರ್ವರ ಸೆರೆ
    In Uncategorized
  • ಎಸ್ಸೆಸ್ಸೆಲ್ಸಿ: ಶ್ರೀ ಸಿದ್ದೇಶ್ವರ ಪ್ರೌಢಶಾಲೆಯ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಜಗದ ಧರ್ಮ
    In (ರಾಜ್ಯ ) ಜಿಲ್ಲೆ
  • ಕೆಯುಡಬ್ಲ್ಯೂಜೆ ಪ್ರತಿಭಾಪುರಸ್ಕಾರಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕಪ್ ಗೆದ್ದ ಬಿಎಲ್ಡಿಇ ಸಂಸ್ಥೆಯ ಆಯುರ್ವೇದ ಕಾಲೇಜ್
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 25, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.