ದೇವರಹಿಪ್ಪರಗಿ: ಮಡಿವಾಳ ಮಾಚಿದೇವ ಒಬ್ಬ ಲೋಕಚಿಂತಕ. ಅವನ ಜನ್ಮಭೂಮಿ ಅಭಿವೃದ್ಧಿಗೆ ಜಾತಿ, ಮತವೆನ್ನದೇ ಎಲ್ಲರೂ ಒಂದಾಗಿ ನಿಂತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು.
ಪಟ್ಟಣದ ಮಡಿವಾಳ ಮಾಚಿದೇವರ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಸದಯ್ಯನಮಠದಲ್ಲಿ ಜರುಗಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಮಾಡುವ ಕಾರ್ಯ ನಮ್ಮನ್ನು ನೆನೆಸುವಂತಿರಬೇಕು. ಆಗ ಮಾತ್ರ ನಮಗೆ ಇರುವಿಕೆಗೆ ನಿಜವಾದ ಅರ್ಥ. ಇಂದು ಮಡಿವಾಳ ಮಾಚಿದೇವನ ಕುರಿತು ಉತ್ಕೃಷ್ಟ ಸಾಹಿತ್ಯಕ ಗ್ರಂಥ ರಚನೆಯಾಗಬೇಕಾಗಿದೆ. ಭಾವನೆಗಳ ಮೂಲಕ ನಾವೆಲ್ಲ ಕೂಡಿ ಕಾರ್ಯಕಾಡುವ ಕೆಲಸಕ್ಕೆ ಖಂಡಿತ ಯಶಸ್ಸು ದೊರೆಯುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖರು ಮಾಚಿದೇವನ ಹೆಸರಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು. ನಮ್ಮ ರಚನ ಮತ್ತು ವಚನಗಳ ಮೂಲಕ ಏನೆಲ್ಲಾ, ಹೇಗೆ? ಸಾಧನೆ ಮಾಡಬಹುದು ಎಂಬುದರ ಕುರಿತು ಮಾರ್ಮಿಕವಾಗಿ ಹೇಳಿದರು.
ಸಮಾಜ ಚಿಂತಕ ಅಶೋಕ ದೊಮ್ಮಲೂರು ,ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರಡ್ಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಬಿ.ಕೆ.ಪಾಟೀಲ, ಜಿ.ಬಿ.ಸಾಲಕ್ಕಿ, ಕಾಶೀನಾಥ ತಳಕೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದ ನಾಮಕರಣಕ್ಕೆ ಶ್ರಮಿಸಿದ ಬಸನಗೌಡ ಪಾಟೀಲರನ್ನು ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಸದಯ್ಯನಮಠದ ವೀರಗಂಗಾಧರ ಶ್ರೀಗಳು ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷ ಮ.ಗು. ಯಾದವಾಡ, ಬಾಬುಗೌಡ ಪಾಟೀಲ (ಜಿಡ್ಡಿಮನಿ), ಕೆ.ಸಿ.ಮಠ, ಎಂ.ಆರ್.ಶಿರಸಂಗಿಮಠ, ಶಾಂತಗೌಡ ಯರನಾಳ, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ನಾನಾಗೌಡ ಪಾಟೀಲ, ವೀರೇಶ ಕುದರಿ, ಹುಸೇನ್ ಗೌಂಡಿ, ಕೆ.ಎಂ.ನಂದಿ, ನಾಗಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ಪ್ರಕಾಶ ನಾಯಿಕ, ಗೊಲ್ಲಾಳ ಬಿರಾದಾರ, ರಾಮಯ್ಯ ನಾಶೀಮಠ, ರಮೇಶ ಹಳಿಮನಿ, ಕಾಶೀನಾಥ ರಾಮಗೊಂಡ, ಕಾಸು ಕುಂಬಾರ, ಶಂಕ್ರೆಪ್ಪ ಹಡಪದ, ಮಡಿವಾಳಪ್ಪ ಹಡಪದ, ಭೀಮರಾಯ ಕುಂಬಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

