Author: editor.udayarashmi@gmail.com

ಗುರುಪ್ರಸಾದ ಡಿ.ಎನ್ ಫೇಕ್ ನ್ಯೂಸ್ ಅಥವಾ ನಕಲಿ-ಸುಳ್ಳು ಸುದ್ದಿ ಜಾಲ ಮತ್ತು ಹರಡುವಿಕೆ ಈಗ ಯಾವುದೇ ಜಾಗತಿಕ ಪಿಡುಗಿಗಿಂತಲೂ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಹಲವು ಸರ್ಕಾರಗಳು ಇದರ ತಡೆಗೆ ಗಂಭೀರ ಪ್ರಯತ್ನಗಳನ್ನು ಮಾಡುತ್ತಿವೆ. ಇನ್ನೂ ಕೆಲವು ದೇಶಗಳ ಪ್ರಭುತ್ವಗಳು ಈ ಫೇಕ್ ನ್ಯೂಸ್ ಎಕೋಸಿಸ್ಟಮ್‌ಅನ್ನು ತಮ್ಮ ಅವಕಾಶಕ್ಕೆ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತಿವೆ. ಭಾರತವೂ ಕೂಡ ಇಂತಹುದೇ ಒಂದು ಅಪಾಯಕಾರಿ ಸಂದರ್ಭ-ಸನ್ನಿವೇಶದಲ್ಲಿದೆ. ಆಡಳಿತ ಒಕ್ಕೂಟ ಸರ್ಕಾರದ ಮುಂದಾಳತ್ವ ವಹಿಸಿರುವ ಬಿಜೆಪಿ ಪಕ್ಷ ಮತ್ತು ಅದರ ಸೈದ್ಧಾಂತಿಕ ಬೆಂಬಲಿಗೆ ಸಂಘ ಪರಿವಾರ ಇಂತಹ ಫೇಕ್ ನ್ಯೂಸ್ ಜಾಲದ ಭಾರಿ ಫಲಾನುಭವಿ ಆಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದುದರಿಂದ ಒಕ್ಕೂಟ ಸರ್ಕಾರದಿಂದ ಏನಾದರೂ ಸಕಾರಾತ್ಮಕ ಕ್ರಮವನ್ನು ನಿರೀಕ್ಷಿಸುವುದು ವಿಫಲ ಆಶಾವಾದವಾದೀತು! ಅಲ್ಲದೆ, ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) 2021ರ ಕೇಂದ್ರ ಸರ್ಕಾರದ ತಿದ್ದುಪಡಿ ಫೇಕ್ ಸುದ್ದಿಗಳನ್ನು ನಿಯಂತ್ರಿಸುವ ಉದ್ದೇಶದಲ್ಲಿ ಯಾವ ರೀತಿಯಲ್ಲೂ ಸ್ಪಷ್ಟತೆಯನ್ನು…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ವಿವೇಕಾನಂದ. ಎಚ್.ಕೆ. ಬೆಂಗಳೂರು ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು – ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ ಶವವದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾವಿನಕಟ್ಟೆಯ ಸೋಮು ಪೂಜಾರಿಯ ರೋಚಕ ಹೋರಾಟದ ಬದುಕಿನ ಪುಟಗಳಿಂದ…….. ಸೋಮು ಪೂಜಾರಿ ಅತ್ಯಂತ ಬಡ ಕುಟುಂಬದ ನಾರಾಯಣ ಪೂಜಾರಿಯ ಮಗ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರೂ ತಂದೆಯ ಸಹಕಾರದಿಂದ ಸರ್ಕಾರಿ ಶಾಲೆಯಲ್ಲಿ ಓದಿದ. ಅತ್ಯಂತ ಪ್ರತಿಭಾವಂತನಾದ ಆತ ಶಾಲೆಯ ಸ್ಕಾಲರ್ಶಿಪ್ ನಿಂದಲೇ ಓದುತ್ತಾ ಎಸ್ಎಸ್ಎಲ್ಸಿ ನಂತರ ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ನಂತರ ಎಂಇ, ಎಂಟೆಕ್, ಮಾಡಿ ಅಲ್ಲಿಯೇ ಲೆಕ್ಚರರ್ ಆಗಿ ಉದ್ಯೋಗ ಮಾಡುತ್ತಿದ್ದ. ಅಪ್ಪನ ಒತ್ತಾಯದ ಮೇರೆಗೆ ಅದೇ ಊರಿನ ಪಕ್ಕದಲ್ಲೇ ಇದ್ದ ಕಡು ಬಡತನದ ಅನಕ್ಷರಸ್ಥೆಯಾದ, ಅನಾಥೆಯಾದ ತನ್ನ ಸಂಬಂಧಿಗಳ ಮಗಳನ್ನೇ ಸರಳವಾಗಿ…

Read More

ಪ್ರನಾವು ಶವವಾಗುವ ಮುನ್ನ..ಬುದ್ಧ ಮನಸ್ಸು ಪ್ರಬುದ್ಧ ಸಮಾಜ ವಿವೇಕಾನಂದ. ಎಚ್.ಕೆ. ಬೆಂಗಳೂರು ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು – ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ ಶವವದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾವಿನಕಟ್ಟೆಯ ಸೋಮು ಪೂಜಾರಿಯ ರೋಚಕ ಹೋರಾಟದ ಬದುಕಿನ ಪುಟಗಳಿಂದ…….. ಸೋಮು ಪೂಜಾರಿ ಅತ್ಯಂತ ಬಡ ಕುಟುಂಬದ ನಾರಾಯಣ ಪೂಜಾರಿಯ ಮಗ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರೂ ತಂದೆಯ ಸಹಕಾರದಿಂದ ಸರ್ಕಾರಿ ಶಾಲೆಯಲ್ಲಿ ಓದಿದ. ಅತ್ಯಂತ ಪ್ರತಿಭಾವಂತನಾದ ಆತ ಶಾಲೆಯ ಸ್ಕಾಲರ್ಶಿಪ್ ನಿಂದಲೇ ಓದುತ್ತಾ ಎಸ್ಎಸ್ಎಲ್ಸಿ ನಂತರ ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ನಂತರ ಎಂಇ, ಎಂಟೆಕ್, ಮಾಡಿ ಅಲ್ಲಿಯೇ ಲೆಕ್ಚರರ್ ಆಗಿ ಉದ್ಯೋಗ ಮಾಡುತ್ತಿದ್ದ. ಅಪ್ಪನ ಒತ್ತಾಯದ ಮೇರೆಗೆ ಅದೇ ಊರಿನ ಪಕ್ಕದಲ್ಲೇ ಇದ್ದ ಕಡು ಬಡತನದ ಅನಕ್ಷರಸ್ಥೆಯಾದ, ಅನಾಥೆಯಾದ ತನ್ನ ಸಂಬಂಧಿಗಳ…

Read More

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿದ್ದಾರೆ. ಈ ವೇಳೆ ಸ್ಥಳದಲ್ಲೇ ಮೂವರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 10 ಲಕ್ಷ ರೂ ಪರಿಹಾರವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.ಈ ಕುರಿತು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ರಾಮನಗರ ಜಿಲ್ಲೆಯ ವಿಜಯಕುಮಾರ್‌ ಬಿನ್‌ ನರಸಿಂಹಮೂರ್ತಿ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಮಂಜೂರು ಮಾಡಿದರು. ಇನ್ನೂ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಸನಗೌಡ ಬಿರಾದಾರ್‌ ಬೋನ್‌ ಮ್ಯಾರೋ ಕಸಿಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲಿಯೇ ಮಂಜೂರು ಮಾಡಿದರು.ಅಲ್ಲದೇ ತುಮಕೂರು ಜಿಲ್ಲೆಯ ಐದು ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಮಂಜೂರು ಮಾಡಿದರು. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ನಾಗರಾಜಯ್ಯ ಅವರು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಶಿರಾಸಲ್ಲಿ…

Read More

3 ತಿಂಗಳೊಳಗೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸಿಎಂ ಸ್ಪಷ್ಠ ಸೂಚನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಫೆ.8) ವಿಧಾನಸೌಧದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 12,372 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ಥಳದಲ್ಲಿಯೇ 246 ಅರ್ಜಿಗಳು ಇತ್ಯರ್ಥವಾಗಿದ್ದು, 12,126 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.ನವೆಂಬರ್‌ 27,2023ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ. 98ರಷ್ಟು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ ಎಂದು ಸಿಎಂ ಹೇಳಿದ್ದಾರೆ.ಕಾನೂನು ಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ. ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ…

Read More

ವಿಜಯಪುರ: ಪ್ರತಿವರ್ಷದಂತೆ ಈ ವರ್ಷವೂ ಫೆ.೧೦ ರಿಂದ ೧೮ರವರೆಗೆ ಇಂಡಿ ತಾಲೂಕಿನ ಇಂಚಗೇರಿಯಲ್ಲಿ ಜರುಗುವ ಶ್ರೀ ಬಾವುಸಾಹೇಬ ಮಹಾರಾಜರ ಸಪ್ತಹ ಹಾಗೂ ಸಿಂದಗಿ ತಾಲೂಕಿನ ಯಂಕಂಚಿಯಲ್ಲಿ ಜರುಗುವ ದಾವಲಮಲಿಕ ಉರುಸಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡಲಾಗುವುದು.ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ನಿಗಮದ ವಿಜಯಪುರ ವಿಭಗದ ವಿಜಯಪುರ ಕೇಂದ್ರ ಬಸ್ ನಿಲ್ದಾಣ, ಇಂಡಿ ಸಿಂದಗಿ, ಚಡಚಣ ಹಾಗೂ ಹೊರ್ತಿ ಬಸ್ ನಿಲ್ದಾಣಗಳಿಂದ ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸಾರಿಗೆ ಸೌಲಭ್ಯ ಮತ್ತು ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-೧ ಮೊ: ೭೭೬೦೯೯೨೨೬೩, ಘಟಕ-೨ ಮೊ: ೭೭೬೦೯೯೨೨೬೪, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಕೇಂದ್ರ ಬಸ್ ನಿಲ್ದಾಣ ನಿಲ್ದಾಣಾಧಿಕಾರಿಗಳು ವಿಜಯಪುರ ಮೊ: ೭೭೬೦೯೯೨೨೫೮ ಹಾಗೂ ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ:೦೮೩೫೨-೨೫೧೩೪೪…

Read More

ವಿಜಯಪುರ: ಇಡೀ ಜಗತ್ತೀನಲ್ಲಿ ನಮ್ಮ ದೇಶದ ಸಂವಿಧಾನ ಅತ್ಯಂತ ವಿಶೇಷ ಮತ್ತು ವಿಶಿಷ್ಟವಾದ ಸಂವಿಧಾನವಾಗಿದೆ. ಅಂತಹ ಬೃಹತ್ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರಿಗೆ ನಾವೇಲ್ಲರು ಸದಾ ಚಿರರುಣಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೆವಂತಿ ಜಾಧವ ಹೇಳಿದರು.ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಅಭಿಯಾನವನ್ನು ಉದ್ದೇಶಿಸಿದ ಅವರು ಮಾತನಾಡಿದರು.ನಮ್ಮ ಸಂವಿಧಾನದ ಅರಿವನ್ನು ಮೂಡಿಸುವ ಸಲುವಾಗಿ ಸರ್ಕಾರದಿಂದ ಹಮ್ಮಿಕೊಂಡಂತಹ ಈ ಜಾಥಾ ಅಭಿಯಾನ ಒಂದು ವಿಶೇಷ ಆಲೋಚನೆಯಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಸಹ ತಿಳಿದುಕೊಂಡು ಬದುಕಬೇಕಾದದ್ದು ಅನಿವಾರ್ಯ ಮತ್ತು ಅವಶ್ಯಕ ಎಂದರು.ಶಿಕ್ಷಕರಾದ ಜಿ.ಪಿ ಕಾಂಬಳೆ ಮಾತನಾಡಿ, ರಾಜ್ಯವು ಆಯ್ಕೆ ಮಾಡಿಕೊಂಡಿರುವಂತಹ ಜೀವನದ ವಿಧಾನವನ್ನು ಸಂವಿಧಾನ ಎಂದು ಅರಿಸ್ಟಾಟಲ್ ಹೇಳುತ್ತಾರೆ. ಸಂವಿಧಾನ ಎಂದರೆ ಒಂದು ದೇಶದ ಸರ್ಕಾರ ಹೇಗಿರಬೇಕು ಎಂದು ತಿಳಿಸುವ ಮೂಲಭೂತ ಚೌಕಟ್ಟನ್ನು ಸಂವಿಧಾನ ಎಂದು ಕರೆಯುತ್ತಾರೆ ಎಂದು ಉಪನ್ಯಾಸ ನೀಡಿದರು.ಮಲಘಾಣ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಡೊಳ್ಳು ಕುಣಿತ,…

Read More

ಕೇಂದ್ರದಿಂದ ವೈದ್ಯರ ತಂಡ ವಿಜಯಪುರ ಜಿಲ್ಲೆಗೆ ಭೇಟಿ ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಆನೇಕಾಲು ರೋಗ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಔಷಧ ಸೇವಿಸುವ ಕಾರ್ಯಕ್ರಮ ಪೆಬ್ರುವರಿ ತಿಂಗಳಿನಿಂದ ನಡೆಯುತ್ತಿದೆ.ಈ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಕೇಂದ್ರದಿಂದ ಡಾ. ಜಾನ್ಸನ್ ಅಮಲಾ ಜಷ್ಟಿನ್, ಡಾ. ಮಣಿಕಷಾ ದೆಹಲಿ, ಡಾ. ಸಿರಿಷಾ ಪಟೇಲ ಹೈದ್ರಾಬಾದ, ಹಾಗೂ ಬೆಂಗಳೂರಿನ ಸಂಶೋಧನಾ ಅಧಿಕಾರಿಗಳಾದ ಡಾ. ನಾಗರಾಜ, ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿದರು.ವಿಜಯಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಬಸವರಾಜ ಹುಬ್ಬಳ್ಳಿ ಅವರನ್ನು ಭೇಟಿಯಾಗಿ ಸಾಮೂಹಿಕ ಔಷಧ ಸೇವಿಸುವ ಕಾರ್ಯಕ್ರಮ ೧೦೦% ಪ್ರಗತಿ ಸಾಧಿಸುವ ಕುರಿತು ಚರ್ಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಜೈಬುನ್ನಿಸಾಬೇಗಂ ಬೀಳಗಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಸಲಹೆ ವಿಜಯಪುರ: ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ, ಕಿಶೋರ್ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಿಸಿ, ಫೋಕ್ಸೋ ಪ್ರಕರಣ ದಾಖಲಿಸುವುದು ಹಾಗೂಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಮಕ್ಕಳ ರಕ್ಷಣೆ ಮಾಡಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಪೋಕ್ಸೋ ಕಾಯ್ದೆ-೨೦೧೨ ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬, ಆರ್.ಟಿ.ಇ ಕಾಯ್ದೆ-೨೦೦೯ರ ಕುರಿತು ಭಾಗೀದಾರ ಇಲಾಖೆಗಳ ಜಿಲ್ಲಾ, ತಾಲ್ಲೂಕು…

Read More

ವಿಜಯಪುರ: ೨೦೨೩-೨೪ನೇ ಸಾಲಿನಲ್ಲಿ ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ್ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.ಈ ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಈ ತರಬೇತಿ ಕಾರ್ಯಕ್ರಮಕ್ಕೆ ಪದವಿ, ಸ್ನಾತಕೋತ್ತರ, ಡೀಪ್ಲೋಮ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ೧೪-೦೨-೨೦೨೪ರ ಸಂಜೆ ೫ ಗಂಟೆಯೊಳಗೆ ಇಂಡಿ ಪುರಸಭೆ ಡೇ-ನಲ್ಮ್ ಶಾಖೆಗೆ ಸಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸುವಂತೆ ಇಂಡಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More