ಇಂಡಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವೈ.ಟಿ.ಪಾಟೀಲ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಅಲ್ಪಾಫ್ ಬೋರಾಮಣಿ, ಉಪಾಧ್ಯಕ್ಷರಾಗಿ ಸಿ.ಎಸ್.ಝಳಕಿ, ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಜೆ.ಎಸ್.ತೆಲಗ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಇಂಡಿ ತಾಲೂಕಾ ಕನಕದಾಸ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಪಾಟೀಲ ಹಾಗೂ ಸರ್ವ ಸದಸ್ಯರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ಗೌಡರ, ಇಂಡಿ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಎನ್. ನೇದಲಗಿ, ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಪಿ.ಎಸ್.ಚಾಂದಕವಟೆ, ಚಡಚಣ ತಾಲೂಕಿನ ಕಸಾಪ ಅಧ್ಯಕ್ಷ ಎಸ್.ಎಲ್.ಮಾನೆ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿದರು.
ಸಭೆಯಲ್ಲಿ ರಾಯಣ್ಣ ಇವಣಗಿ, ತಾಲೂಕಿನ ಶಿಕ್ಷಕರ ಹಾಗೂ ಕನಕದಾಸ ನೌಕರರ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

