ದೇವರಹಿಪ್ಪರಗಿ: ತೋಳದ ದಾಳಿಗೆ ಸಿಲುಕಿ ೧೩ ಕುರಿಮರಿಗಳು ಬಲಿಯಾದ ಘಟನೆ ದೇವೂರ ಗ್ರಾಮದ ಜಮೀನಿನಲ್ಲಿ ಜರುಗಿದೆ.
ತಾಲ್ಲೂಕಿನ ದೇವೂರ ಗ್ರಾಮದ ಹೊರವಲಯದಲ್ಲಿ ಬುಧವಾರ ಈ ಘಟನೆ ಜರುಗಿದ್ದು, ಘಟನೆಯಲ್ಲಿ ದೇವರಹಿಪ್ಪರಗಿ ನಿವಾಸಿ ಗೊಲ್ಲಾಳಪ್ಪ ಹೊನ್ನಮಿಸಿ ಎಂಬುವವರಿಗೆ ಸೇರಿದ ಕುರಿಮರಿಗಳು ಬಲಿಯಾಗಿವೆ.
ಕುರಿ ಮೇಯಿಸಿಕೊಂಡು ಬಂದು ರಾತ್ರಿ ಕುರಿದೊಡ್ಡಿಯಲ್ಲಿ ಕುರಿಗಳು ಹಾಗೂ ಮರಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ನಡುರಾತ್ರಿಯಲ್ಲಿ ಮರಿಗಳ ಮೇಲೆ ದಾಳಿ ಮಾಡಿದ ತೋಳ ಅಂದಾಜು ೧ ಲಕ್ಷ.ರೂ. ಮೌಲ್ಯದ ೧೩ ಕುರಿಗಳನ್ನು ಕೊಂದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

