ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ ಹಾಗೂ ಪುಸ್ತಕ ಅನುದಾನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಪುಸ್ತಕ ಅನುದಾನ (ಕಲ್ಯಾಣ ನಿಧಿಯಿಂದ): ೧ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿರುವ, ಮಿಲಿಟರಿ ಪಿಂಚಣಿ ರಹಿತ ಕರ್ನಾಟಕದ ಮಾಜಿ ಸೈನಿಕರ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಹೊರರಾಜ್ಯದ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ನೀಡಲಾಗುತ್ತದೆ.
ಶಿಷ್ಯವೇತನ (ವಿಶೇಷ ನಿಧಿಯಿಂದ): ಪದವಿ, ಡಿಪ್ಲೋಮಾ, ಜಿ.ಒ.ಸಿ ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ) ಮಂಜೂರು ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ನವೆಂಬರ್.೩೦ ರೊಳಗಾಗಿ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ಕಚೇರಿಯ ದೂರವಾಣಿ ಸಂಖ್ಯೆ: ೦೮೩೫೨-೨೫೦೯೧೩ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
