ದೇವರಹಿಪ್ಪರಗಿ: ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿ, ವಚನ ಸಾಹಿತ್ಯಕ್ಕೆ ತನ್ನದೆಯಾದ ಕೊಡುಗೆ ನೀಡಿದ ಶಿವಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಬಸವ ಶರಣ ಸಂಗಮ ಸಮಿತಿ ಅಧ್ಯಕ್ಷ ಸಂಗಣ್ಣ ತಡವಲ್ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬಸವಶರಣ ಸಂಗಮ ಸಮಿತಿ ಅಡಿಯಲ್ಲಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಚೈತ್ರ ಮಾಸದ ಚಿತ್ತಾ ನಕ್ಷತ್ರದ ದವನದ ಹುಣ್ಣಿಮೆಯ ದಿನ ಶಿವಶರಣೆ ಅಕ್ಕಮಹಾದೇವಿ ಮಹಾಮಾತೆ ಜನಿಸಿ, ಶರಣ ಚಳುವಳಿಯ ಮುಂಚೂಣಿಯಲ್ಲಿ ಕಲ್ಯಾಣ ಕ್ರಾಂತಿಯ ಜೊತೆಗೆ ಇಡೀ ತಮ್ಮ ಬದುಕನ್ನು ಹೋರಾಟದಲ್ಲಿ ಕೊನೆಗಾಣಿಸಿದವರು. ಅವರ ಜೀವನ, ಸಾಧನೆ, ರಚಿಸಿದ ವಚನಗಳ ಸಾರವನ್ನು ನಾವು ಅರಿತುಕೊಂಡು ಮುನ್ನಡೆಯೋಣ ಎಂದರು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಕೆ.ಎಮ್.ನಂದಿ, ಗೋಲ್ಲಾಳ ಬಿರಾದಾರ, ನಿಂಗು ಜಡಗೊಂಡ, ಮಲ್ಲು ಹಳಿಮನಿ, ಕಾಶೀನಾಥ ರಾಮಗೊಂಡ, ಕಾಸಪ್ಪ ಕುಂಬಾರ, ಹನುಮೇಶ ನಂದ್ಯಾಳ, ಶ್ರೇಯಾ, ರಾಣಿ ಸೇರಿದಂತೆ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

