ಮದುವೆ ಮಂಟಪದಲ್ಲಿ ಮತದಾನ ಜಾಗೃತಿ!
ಇಂಡಿ: ತಾಲೂಕು ಸ್ವೀಪ್ ಸಮಿತಿ ವತಿಯಿಂದ ಗುರುವಾರ ಮತದಾನ ಜಾಗೃತಿ ಕುರಿತು ವಿನೂತನವಾಗಿ ಮಾಹಿತಿ ಪ್ರಚುರಪಡಿಸಿದರು.
ಇಂಡಿ ನಗರದ ಕಲ್ಯಾಣ ಮಂಟಪದಲ್ಲಿ ಜರುಗಿದ ಹಳ್ಳಿ ರವರ ಮದುವೆ ಸಮಾರಂಭದಲ್ಲಿ ತಾಲೂಕು ಸ್ವೀಪ್ ಸಮಿತಿಯ ಮತದಾರರ ಜಾಗೃತಿ ಕರ ಪತ್ರಗಳನ್ನು ವಧು-ವರರಿಗೆ ನೀಡಿ ಮದುವೆಗೆ ಆಗಮಿಸಿದ ಎಲ್ಲ ಜನರಿಗೆ ಮೇ ೦೭, ೨೦೨೪ ರಂದು ಜರುಗುವ ಮತದಾನ ದಿನದಂದು ಪ್ರತಿಜ್ಙಾವಂತ ಮತದಾರರು ತಪ್ಪದೇ ಕಡ್ಡಾಯವಾಗಿ ತಮ್ಮ-ತಮ್ಮ ಮತಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಸ್ವೀಪ್ ಸಮಿತಿ ಸದಸ್ಯರು ವಿನಂತಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳನ್ನು ಮದುವೆ ಮಂಟಪದಂತೆ ಶೃಂಗರಿಸಿ, ಮತದಾರರ ಹಿತದೃಷ್ಠಿಯಿಂದ ಮತದಾನ ಕೇಂದ್ರದಲ್ಲಿ ಕೈಗೊಂಡ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಸಾರ್ವಜನಿಕರಿಗೆ ಕುರಿತು ಮನವರಿಕೆ ಮಾಡಿಕೊಟ್ಟರು.
ಮತದಾರರಿಗೆ ಹೆಚ್ಚಿನ ಮಾಹಿತಿಗಾಗಿ ಕರಪತ್ರದಲ್ಲಿ ನೀಡಿದ ಮಾಹಿತಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಡಲು ವಿ.ಎಚ್.ಅ ಆಪ್, ಮತದಾರರ ಚೀಟಿ ಇಲ್ಲದಿದ್ದ ಪಕ್ಷದಲ್ಲಿ ಬೇಕಾದ ದಾಖಲೆಗಳು, ಸಹಾಯವಾಣಿ, ದೂರು ನಿರ್ವಹಣಾ ಸಂಖ್ಯೆ, ಸಿ-ವಿಜಿಲ್ ಹಾಗೂ ಮತದಾನ ಮಾಡಲು ಜಿಲ್ಲಾ ಸ್ವೀಪ್ ಸಮಿತಿಯವರ ಸಂದೇಶ ನೀಡುವ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಿದರು.
ಮದುವೆ ಸಮಾರಂಭದಲ್ಲಿ ೫೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಇಒ ಕುಮಾರಿ ನಿಲಗಂಗಾ ಬಬಲಾದ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಸಂಜಯ್ ಕಡಗೇಕರ್, ಶ್ರೀಶೈಲ ಹಡಪದ, ಪಿಡಿಒ ಬಸವರಾಜ ಬಬಲಾದ, ಸಿ.ಜಿ.ಪಾರೆ, ತಾಲೂಕ ಪಂಚಾಯತಿ ತಾಂತ್ರಿಕ ಸಿಬ್ಬಂದಿ, ಎಲ್ಲ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಇದ್ದರು.

