ಕಲಕೇರಿ: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿಕೇಂದ್ರ ಕಲಕೇರಿಯ ಹಿರೇಮಠ ಮತ್ತು ಗದ್ದಿಗೆಮಠ ಗುರುಹಿರಿಯರಿಗೆ ಬಿಜೆಪಿ ಪಕ್ಷದ ಕರಪತ್ರಗಳನ್ನು ನೀಡುವ ಮೂಲಕ ವಿಜಯಪುರ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದರು.
ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಹಿರಿಯ ರಾಜಕಾರಣಿಗಳಾದ ರಮೇಶ ಜಿಗಜಿಣಗಿ ಅವರ ಪರವಾಗಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು, ದೇವರ ಹಿಪ್ಪರಗಿ ಮಂಡಲ ಉಪಾಧ್ಯಕ್ಷರು, ಯುವ ಮೋರ್ಚಾ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರಮುಖ ಬಜಾರದಲ್ಲಿ ಮತ್ತು ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಕರಪತ್ರಗಳನ್ನು ನೀಡಿ ಮತಯಾಚನೆ ಸಂಪರ್ಕ ಅಭಿಯಾನ ಪ್ರಾರಂಭ ಮಾಡಿದರು.
ಈ ವೇಳೆ ಪಕ್ಷದ ಮುಖಂಡರುಗಳು ಮತ್ತು ಪದಾಧಿಕಾರಿಗಳಾದ ಪ್ರಭುಗೌಡ ಬಿರಾದಾರ ಅಸ್ಕಿ, ಸುಧಾಕರ ಅಡಕಿ, ಅಪ್ಪು ದೇಸಾಯಿ, ಸೋಮಶೇಖರ್ ಸಜ್ಜನ, ಕಿರಣ್‌ಕುಮಾರ್ ದೇಸಾಯಿ, ಪ್ರಕಾಶ ಯರನಾಳ, ಪವನಕುಮಾರ್ ನಾಡಗೌಡ, ಮಡಿವಾಳಪ್ಪ ಹೂಗಾರ, ಶಿವಾನಂದ್ ಗಣೇಶಮಠ, ಅಶೋಕ ವಡ್ಡರ, ಸುನೀಲ್ ಬಡಿಗೇರ, ಸುನೀಲ್ ಕಲಕೇರಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

