ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ತಾಲೂಕಿನ ೧೧೦ಕೆ.ವಿ. ಟಕ್ಕಳಕಿ-ಕನಮಡಿ ಮಾರ್ಗದಿಂದ ಪ್ರಸ್ತಾವಿತ ೧೧೦ ಕೆ.ವಿ. ಘೋಣಸಗಿ ಉಪಕೇಂದ್ರದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು,
೧೧೦ ಕೆ.ವಿ. ಕನಮಡಿ ಉಪಕೇಂದ್ರದಿಂದ ಹೊರಹೋಗುವ ಎಲ್ಲಾ ೧೧ ಕೆ.ವಿ. ಫೀಡರ್‌ಗಳಲ್ಲಿ
ಜು. ೨೯ರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಹೆಸ್ಕಾಂದೊಂದಿಗೆ ಸಹಕರಿಸುವಂತೆ ಹೆಸ್ಕಾಂನ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
