ವಿಜಯಪುರ: ನಗರ ಸ್ಲಂ – ಸ್ವಸಹಾಯ ಸಂಘಗಳ ಒಕ್ಕೂಟ (ರಿ ), ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ (ರಿ ), ವಿಜಯಪುರ ನಗರ ಗೃಹ ಕಾರ್ಮಿಕರ ಯೂನಿಯನ್(ರಿ ), ನಗರ ಅಸಂಘಟಿತ ಯುವತಿಯರ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಹಯೋಗದಲ್ಲಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಆಗುತ್ತಿರುವುದನ್ನು ಖಂಡಿಸಿ ನಗರದ ಅಂಬೇಡ್ಕರ ವೃತ್ತದಿಂದ ಗಾಂಧಿ ವೃತದವರಿಗೆ ಮಹಿಳೆಯರು ಪಂಜಿನ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ನಿರ್ಮಲಾ ಹೊಸಮನಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ಕೊಲೆ ಮಾಡುವುದು ಈಗ ಹೆಚ್ಚಾಗಿದೆ. ಅಂತಹ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ಹೆಣ್ಣು ಮಕ್ಕಳು ಎಂದರೆ ಆ ದುಷ್ಕರ್ಮಿಗಳಿಗೆ ಆಟ ಆಡುವ ವಸ್ತುವಾಗಿದ್ದಾರೆ. ಯಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೋ ಅಂಥವರನ್ನು ಗುರುತಿಸಿ ಅಂಥವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿದರೆ ಮುಂದಿನ ದಿನಗಳಲ್ಲಿ ಅತ್ಯಾಚಾರ ಮಾಡುವಂತಹ ಕೃತ್ಯಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ರಮ್ ಮಾಶ್ಯಾಳಕರ, ಸಿ ಎ ಗಂಟಪ್ಪಗೋಳ, ಅಬ್ದುಲ್ ಖಾಧೀರ್, ರಾಜೇಶ್ವರಿ ಮಠಪತಿ, ಮೀನಾಕ್ಷಿ ಖಾಲಿಬಾಗ, ಶೋಭಾ ಗಾಯಕವಾಡ, ಯಲವ್ವ ಗಡೇಕರ, ಶಬೀರ್ ಕಾಗಜಕೋಟಿ, ಕುಸುಮಾ ಬಡಿಗೇರ, ಖತೀಜ ಹೆಬ್ಬಾಳ ಸೇರಿದಂತೆ ವಿವಿಧ ಸ್ಲಂ ಗಳಿಂದ, ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

