ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಕೊಣ್ಣೂರ-ಹೂವಿನಹಿಪ್ಪರಗಿ ಕೂಡುವ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಕೊಣ್ಣೂರ ಗ್ರಾಮದ ರೈತರು, ಹಿರಿಯರು, ಹೋರಾಟಗಾರರು, ಮುಖಂಡರು ಶಾಸಕ ಸಿ.ಎಸ್.ನಾಡಗೌಡರಿಗೆ ಮನವಿ ಮಾಡಿಕೊಂಡರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕರ ನಿವಾಸದಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ದೂರವಾಣಿಯ ಮೂಲಕ ಮಾತನಾಡಿ, ಶೀಘ್ರವಾಗಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವದಾಗಿ ಭರವಸೆಯನ್ನು ನೀಡಿದರು.
ಈ ವೇಳೆ ಅಸ್ಕಿ ಫೌಂಡೇಶನ ಅಧ್ಯಕ್ಷ ಸಿ.ಬಿ.ಅಸ್ಕಿ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಹಡಲಗೇರಿ, ನಿವೃತ ಶಿಕ್ಷಕ ಉ.ಉ.ಅಸ್ಕಿ, ಬಾಲನಗೌಡ ಬಿರಾದಾರ, ಚಂದ್ರಶೇಖರ ಇಂಗಳಗಿ, ಸುಭಾಸ ತಾಳಿಕೋಟಿ, ಗಂಗಣ್ಣ ಬಡಿಗೇರ, ಮಕ್ತುಮಸಾಬ ಅವಟಿ, ಮಶ್ಯಾಕ ಅವಟಿ, ರಮೇಶ ಕೊಟಗಿ, ಬಸನಗೌಡ ಪಾಟೀಲ, ಬಾಪೂಗೌಡ ನೀರಲಗಿ, ಮಂಜುನಾಥ ಶಿನ್ನೂರ, ಸಿದ್ದಪ್ಪ ಶಿರಕನಳ್ಳಿ, ಮಾಂತಗೌಡ ಏವೂರ, ಅಭಿಷೇಕ ಹಡಲಗೇರಿ, ಶ್ರೀಕಾಂತ ಅಸ್ಕಿ, ಪ್ರಕಾಶ ಅಸ್ಕಿ, ವೀರೇಶ ಅಸ್ಕಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

