Author: editor.udayarashmi@gmail.com

ಬಿಜೆಪಿಯಿಂದ ಜಾತಿಗಳಲ್ಲಿ ಜಗಳ ಹಚ್ಚುವ ಕೆಲಸ | ಯಥಾಸ್ಥಿತಿ ಕಾಯ್ದುಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ ವಿಜಯಪುರ: ಬಿಜೆಪಿ ಸರ್ಕಾರವು ನ್ಯಾ.ಸದಾಶಿವ ಆಯೋಗವನ್ನು ಜಾರಿಗೊಳಿಸುವ ಮೂಲಕ ಸಮಾಜದಲ್ಲಿ ಒಡಹುಟ್ಟಿದ ಸಹೋದರರಂತಿದ್ದ ಪರಿಶಿಷ್ಟ ಜಾತಿಗಳನ್ನು ಒಡೆದು ಅವರವರಲ್ಲಿಯೇ ಒಳಜಗಳ ಹಚ್ಚುವ ಕೆಲಸಮಾಡಿದ್ದು ಖಂಡನೀಯ ಎಂದು ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಙಾಣ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ನಗರದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಬಿಜೆಪಿ ಸರ್ಕಾರದ ಈ ಕ್ರಮದಿಂದ ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ಸಂಘರ್ಷಗಳು ಏರ್ಪಟ್ಟುಆಶಾಂತಿ ಮತ್ತು ಆರಾಜಕತೆಗಳು ಸೃಷ್ಟಿಯಾಗಿ, ಸಮಾಜದ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರವು 1976 ರಲ್ಲಿ ಸಂಸತ್‌ನಲ್ಲಿ ಬಿಲ್ ಪಾಸ್ ಮಾಡುವ ಮೂಲಕ ಹಿಂದುಳಿದ ಬುಡಕಟ್ಟುಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು, ಆದರೆ ರಾಜ್ಯ ಬಿ.ಜೆ.ಪಿ ಸರ್ಕಾರವು ಅವೈಜ್ಞಾನಿಕವಾಗಿರುವ ನ್ಯಾ.ಸದಾಶಿವ ಆಯೋಗವನ್ನು ಜಾರಿಗೊಳಿಸಿರುವುದು ಸಂಪೂರ್ಣ ಅಸಂವಿಧಾನಿಕ ನಿರ್ಣಯವಾಗಿದೆ. ಮತ್ತು ಸಂವಿಧಾನಕ್ಕೆಸಗಿರುವ ಅಪಚಾರವಾಗಿದೆ ಎಂದರು.ಸರ್ಕಾರವು ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಿರುವದರಿಂದ, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಿಂದ ಲಂಬಾಣಿ, ಕೊರಮ, ಭೋವಿ, ಕೊರಚ ಹಾಗೂ ಕೊರವ ಜಾತಿಗಳಿಗೆ ಅನ್ಯಾಯವಾಗಲಿದೆ.ಪರಿಶಿಷ್ಟ…

Read More

ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂಸಹ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ.ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯನ್ನು ಕಡೆಗಣಿಸುತ್ತಿರುವುದು ಅತ್ಯಂತ ನೊವಿನ ಸಂಗತಿ ಎಂದು ಯುಗದರ್ಶಿನಿ ಫೌಂಡೇಶನ್ ಅಧ್ಯಕ್ಷೆ, ಹಿರಿಯ ಸಾಹಿತಿ ಸರಸ್ವತಿ ಚಿಮ್ಮಲಗಿ ವಿಷಾದಿಸಿದರು.ಮಂಗಳವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು. ದೇಶವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಸಮಾನ ಅವಕಾಶ ಸಿಗುವುದು ಒತ್ತಟ್ಟಿಗಿರಲಿ, ಈಗ ಆಯಾ ಪಕ್ಷಗಳು ಬಿಡುಗಡೆ ಮಾಡಿದ ಮೊದಲ ಹಂತದ ಪಟ್ಟಿ ನೋಡಿದರೆ ಮಹಿಳಾ ಅಭ್ಯರ್ಥಿಗಳೇ ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು – ಇಲ್ಲೊಂದು ಎನ್ನುವಂತಿದೆ ಎಂದರು.ಮೀಸಲಾತಿ ಕಸದ ಬುಟ್ಟಿ ಸೇರಿದೆ. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು, ಸಮಾನ ಅವಕಾಶಗಳನ್ನು ನೀಡಲುಪುರುಷವರ್ಗ ಹಿಂದೇಟು ಹಾಕುತ್ತಿದೆ.ನಾಯಕರಾದವರು “ಮಹಿಳೆಯರಿಗೆ ಸ್ಥಾನಮಾನ ನೀಡಲಾಗುವುದು, ಮಹಿಳೆಯರನ್ನು ಮುಂದೆ ತರಲಾಗುವುದು, ಮಹಿಳಾ ಸಬಲೀಕರಣ ಮಾಡಲಾಗುವುದು” ಎಂದು ಹೇಳುವ ಹಲವಾರು ವಿಚಾರಗಳು ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ. ಎಲ್ಲ ರಾಜಕೀಯ ಪಕ್ಷಗಳು ಇಂಥ…

Read More

ಅದೊಂದು ಕಾಲವಿತ್ತು. ಮಾನವನ ಬದುಕಿನ ಆರಂಭದ ದಿನಗಳು.ಗಂಡು, ಬಿಸಿಲೋ ಮಳೆಯೋ.. ಯಾವುದನ್ನೂ ಲೆಕ್ಕಿಸದೆ, ತನ್ನ ಮತ್ತು ತನ್ನ ಸಂಗಾತಿಯ ತುತ್ತಿನ ಚೀಲ ತುಂಬಿಸಲು ಹೋರಾಟ ನಡೆಸುತ್ತಿದ್ದ ದಿನಗಳು. ಹೆಣ್ಣು ಅವನ ಸಂತತಿ ಮುನ್ನೆಡೆಸುವ ಜವಾಬ್ದಾರಿ ಹೊತ್ತ ದಿನಗಳು.ಹಾಗೆ ಕಾಲಚಕ್ರ ಉರುಳ ತೊಡಗಿತು ದಿನದಿಂದ ದಿನಕ್ಕೆ ಮಾನವನ ಜೀವನ ಮಟ್ಟ ಮೇಲೇರ ತೊಡಗಿತು. ಅವನ ರೀತಿ ನೀತಿ, ಬದುಕಿನ ಶೈಲಿ.. ಎಲ್ಲೆಲ್ಲೂ ಬದಲಾವಣೆಯ ಗಾಳಿ.ಆ ಕಾಲಘಟ್ಟದಲ್ಲಿ.. ದೈಹಿಕವಾಗಿ ಹೆಣ್ಣಿಗಿಂತ ಸದೃಢವಾಗಿದ್ದು, ಬಿಸಿಲು ಬೆಂಕಿಯಲ್ಲಿ ದುಡಿಯುವ ತಾನು ಹೆಣ್ಣಿಗಿಂತ ಶ್ರೇಷ್ಠ ಎಂಬ ಭಾವ ಗಂಡಿನಲ್ಲಿ ಬಲವಾಗಿ ಬೇರೂರಿತು.ತನ್ನ ಮತ್ತು ತನ್ನ ಮಕ್ಕಳನ್ನು ಜೋಪಾನ ಮಾಡುವ ಗಂಡು ತನಗಿಂತಲೂ ಉಚ್ಚನಿರಬಹುದು ಎಂಬ ಅನಿಸಿಕೆ ಹೆಣ್ಣಿನಲ್ಲೂ. ಶ್ರೇಷ್ಠವಾದುದನ್ನೇ ಬಯಸೋದು ಮನುಜ ಸಹಜ ಗುಣ ತಾನೇ. ಹಾಗೆ ತಮಗೆ ಹುಟ್ಟುವ ಸಂತತಿಯಲ್ಲೂ ಶ್ರೇಷ್ಠವಾದ ಗಂಡು ಸಂತಾನವೇ ತಮ್ಮ ಮನೆ ತುಂಬಲೆಂದು ಬಯಸ ತೊಡಗಿದರು. ಬಯಕೆಯೇನೋ ಸಹಜ. ಆದರೆ ಲಿಂಗಪತ್ತೆ ಭ್ರೂಣ ಹತ್ಯೆ.. ಯಾವುದರ ಜ್ಞಾನವೂ ಇಲ್ಲದ ಕಾಲದಲ್ಲಿ ಒಡಲಲ್ಲಿ…

Read More

ಮದನ ಚಂದ್ರಿಕೆ ಕದನವೇತಕೆನುಡಿವೆ ನನ್ನಯ ಅನಿಸಿಕೆನೀನು ಇಲ್ಲದೆ ಬಾಳಲೇನಿದೆಅದಕೆ ಬಂದೆನು ಸನಿಹಕೆ ಚೆಲುವ ಅಧರದಿ ನಗುವ ಬೀರದೆಏಕೆ ಮೊಗವಿದು ಬಾಡಿದೆನಿನ್ನ ಗೆಳೆತನ ಬಯಸಿ ಬಂದೆನುನೀನು ನಿಂತಿಹೆ ದೂರದೆ ಕೋಮಲಾಂಗಿಯೆ ನಿನ್ನ ಚೆಲುವನುನೋಡಿ ಮನದಲಿ ದಿಗ್ಭ್ರಮೆದೂರ ತಳ್ಳದೆ ನೀಡು ಜೊತೆಯನುಆಗು ನನ್ನಯ ಪ್ರಿಯತಮೆ ಮನದಲುದಿಸಿದ ಪ್ರೇಮ ಭಾವವುನಿನ್ನ ಒಲವನು ಬಯಸಿದೆಕಳೆಯೆ ಪ್ರೇಮದ ದಾಹವೆಲ್ಲವಪ್ರೇಮ ಭಿಕ್ಷೆಯ ಬೇಡುವೆ||

Read More

ಎಸ್.ಆರ್.ಪಿ ಹೆಸರಿನ ಟೀಶರ್ಟ್ಸ್, ಗೋಡೆ ಗಡಿಯಾರಗಳ ಸಂಗ್ರಹ ಮುದ್ದೇಬಿಹಾಳ: ತಾಲೂಕಿನ ಯರಗಲ್ಲದಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಮಾಜಿ ಶಾಸಕರ ಭಾವಚಿತ್ರ ಹಾಗೂ ಹೆಸರು ಇರುವ ಟೀ-ಶರ್ಟ ಮತ್ತು ಗೋಡೆ ಗಡಿಯಾರಗಳು ಪತ್ತೆಯಾಗಿದ್ದು ಸಂಶಯಾಸ್ಪದವಾಗಿ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಚುನಾವಣಾಧಿಕಾರಿ ಸುರೇಶ ಭಾವಿಕಟ್ಟಿ ಅವರಿಗೆ ಬಂದ ಮಾಹಿತಿಯನ್ನಾಧರಿಸಿ ಕಾರ್ಖಾನೆಯ ಗೋಡಾವನ ಮೇಲೆ ಸಂಶಯಾಸ್ಪದವಾಗಿ ದಾಳಿ ನಡೆಸಿದ್ದು ವಸ್ತುಗಳು ಇರುವುದು ಖಚಿತಗೊಂಡಿದೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿರುವ ಎಸ್.ಆರ್.ಪಾಟೀಲರು ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹಬ್ಬಿರುವಂತೆಯೇ ಎಸ್.ಆರ್.ಪಿ. ಎಂದು ಬರೆದಿರುವ ಅಪಾರ ಪ್ರಮಾಣದ ಟೀ ಶರ್ಟುಗಳ ಬಾಕ್ಸುಗಳನ್ನು, ಹಾಗೂ ಎಸ್.ಆರ್.ಪಾಟೀಲ ಅವರ ಭಾವಚಿತ್ರ ಇರುವ ಗೋಡೆ ಗಡಿಯಾರಗಳ ಪರಿಶೀಲನೆ ನಡೆದಿದೆ.ಈ ಕುರಿತು ಮಾಹಿತಿ ನೀಡಿದ ಚುನಾವಣಾ ಸೆಕ್ಟರ್ ಆಫೀಸರ್ ಸುರೇಶ ಭಾವಿಕಟ್ಟಿ ಅವರು, ಗೋಡಾವನದಲ್ಲಿ ಅಪಾರ ಪ್ರಮಾಣದ ಸರಕುಗಳಿವೆ. ಅವುಗಳನ್ನು ಯಾಕೆ ತರಿಸಲಾಯಿತು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಇಲ್ಲಿ ಸಿಕ್ಕ ಎಲ್ಲ ಸರಕುಗಳ ಬಗ್ಗೆ ಮುದ್ದೇಬಿಹಾಳ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾAತ…

Read More

ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಮುದ್ದೇಬಿಹಾಳ : ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ತಾಲೂಕಿನ ಢವಳಗಿ ಗ್ರಾಮದ ಎಂಬಿಪಿ ಪರೀಕ್ಷಾ ಕೇಂದ್ರವನ್ನು ರದ್ದು ಪಡಿಸಿ ಮೊದಲ ಹಂತದ ಕ್ರಮವನ್ನು, ವರ್ಷದ ಬಳಿಕ ಕೈಗೊಂಡAತಾಗಿದೆ.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಸಭೆಯಲ್ಲಿ ಮಾತನಾಡುವಾಗ ಬಿಇಓ ಎಸ್.ಜೆ.ನಾಯಕ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರಾಜ್ಯಮಟ್ಟದಲ್ಲಿ ತಾಲೂಕಿನ ಹೆಸರಿಗೆ ಕಳಂಕ ಬಂದಿದ್ದರಿAದ ಈ ವರ್ಷ ಢವಳಗಿಯ ಎಂಬಿಪಿ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿ ತಾಲೂಕಿನ ಬಸರಕೋಡದಲ್ಲಿ ಹೊಸ ಸೆಂಟರ್ ತೆರೆಯಲಾಗಿದೆ. ಢವಳಗಿ ಭಾಗದ ವಿದ್ಯಾರ್ಥಿಗಳು ಇಂಗಳಗೇರಿಯ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಸಂಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಾರಿ ತಾಲೂಕಿನಲ್ಲಿ ಒಟ್ಟು ೨೦ ಪರೀಕ್ಷಾ ಕೇಂದ್ರಗಳಿದ್ದು ೬೨೪೬ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊAಡಿರುವದಾಗಿ ಮಾಹಿತಿ ನೀಡಿದರು.ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಗೂ ಪರೀಕ್ಷೆಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ ರೇಖಾ.ಟಿ ಮಾತನಾಡಿ, ಈ ಸಾಲಿನ…

Read More

ವಿಜಯಪುರ: ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಯುಕೆಪಿ ಬಳಿಯ ಸೇತುವೆ ಮೇಲೆ ಸೋಮವಾರ ನಡೆದಿದೆ. 64 ವರ್ಷದ ಕೊಲ್ಹಾರ ಗ್ರಾಮದ ನಿವಾಸಿ ಸಿದ್ದಲಿಂಗಪ್ಪ ಮೃತಪಟ್ಟಿರುವ ದುರ್ದೈವಿ. ಇನ್ನು ಸ್ಥಳಕ್ಕೆ ಕೊಲ್ಹಾರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More

ಮುದ್ದೇಬಿಹಾಳ : ಒಬ್ಬರ ತಟ್ಟೆಯನ್ನು ಕಸಿದು ಬೇರೊಬ್ಬರಿಗೆ ಉಣಬಡಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಅಸಂವಿಧಾನಿಕವಾಗಿದೆ ಎಂದು ಅಂಜುಮನ್ ಎ ಇಸ್ಲಾಂ ಕಮೀಟಿಯ ಸಲಹಾ ಸದಸ್ಯ ಎಚ್.ಆರ್.ಬಾಗವಾನ ಹೇಳಿದರು.ಪಟ್ಟಣದ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಅಲ್ಪಸಂಖ್ಯಾತರಿಗೆ ಇದ್ದ ಶೇ.೪ ಮೀಸಲಾತಿಯನ್ನು ಯಾವುದೇ ಆಯೋಗದ ವರದಿ ಇರದೇ, ಸಮಾಜದ ಸ್ಥಿತಿಗತಿಗಳನ್ನು ಅವಲೋಕನ ಮಾಡದೇ, ಅಧಿಕಾರದ ಆಸೆಗಾಗಿ ಇತರ ಸಮಾಜಗಳಿಗೆ ಒಡೆದು ಹಾಕಿರುವದನ್ನು ನಾವು ಖಂಡಿಸುತ್ತೇವೆ. ಸಾಮಾಜಿಕ ತಳಹದಿಯ ಮೇಲೆ ಆಡಳಿತ ಮಾಡಬೇಕಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಸಮಾಜವನ್ನು ಟಾರ್ಗೇಟ್ ಮಾಡಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ನ್ಯಾಯವಾದಿ ಎಂ.ಎಸ್.ಹಳ್ಳಿ ಮಾತನಾಡಿ, ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಕೂಡಲೇ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.ಹಿರಿಯ ಮುಖಂಡ ಎಲ್.ಎನ್.ನಾಯ್ಕೋಡಿ, ಪುರಸಭೆ ಸದಸ್ಯ…

Read More

ವಿಜಯಪುರ: ಉಳಿದವರಂತೆ ನಾನು ಬೋಗಸ್ ಭೂಮಿಪೂಜೆ ಮಾಡುತ್ತಿಲ್ಲ. ಅನುದಾನ ಬಿಡುಗಡೆಗೊಂಡು, ಟೆಂಡರ್ ಮುಗಿದ ಬಳಿಕವೇ ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಮಾಡಲು ಭೂಮಿಪೂಜೆ ಮಾಡುತ್ತಿದೇನೆ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.ಮಹಾನಗರ ಪಾಲಿಕೆ ವಾರ್ಡ ನಂ.೧ರ ಸಂಗಮೇಶ್ವರ ಕಾಲೊನಿಯ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಸಿ ರಸ್ತೆ ಕಾಣದ ನಗರದಲ್ಲಿ, ನನ್ನ ಅವಧಿಯಲ್ಲಿ ಅಭಿವೃದ್ದಿಗೊಂಡ ರಸ್ತೆಗಳು, ಸುಳ್ಳು ಹೇಳಿ ಹೋಗುವ ರಾಜಕಾರಣಿ ಅಲ್ಲ. ಹೇಳಿದಂತೆ ನಡೆದುಕೊಳ್ಳುವೆ ಎಂದರು.ನನ್ನ ಅವಧಿಯಲ್ಲಿ ಆಗಿರುವ ರಸ್ತೆಗಳು, ಕನಿಷ್ಠ ೨೦ ರಿಂದ ೨೫ ವರ್ಷ ಏನು ಆಗುವುದಿಲ್ಲ. ಕೇವಲ ಮುಖ್ಯ ರಸ್ತೆಗಳನ್ನು ಮಾತ್ರ ಅಭಿವೃದ್ಧಿ ಮಾಡದೆ, ಪ್ರತಿ ಕಾಲೊನಿ, ಬಡಾವಣೆಗಳಲ್ಲಿಯೂ ಆಂತರಿಕ ರಸ್ತೆಗಳು ಅಭಿವೃದ್ಧಿಗೊಂಡಿದ್ದರಿAದ, ಧೂಳಾಪುರ ಕುಖ್ಯಾತಿ ಹೋಗಿದೆ ಎಂದರು.ನಗರದ ತುಂಬಾ ರಸ್ತೆ ಬದಿಯಲ್ಲಿ, ಉದ್ಯಾನಗಳಲ್ಲಿ ಸಾಕಷ್ಟು ಗಿಡಗಳನ್ನು ಬೆಳೆಸಿದ್ದರಿಂದ ನಗರದ ಪರಿಸರವೇ ಬದಲಾಗಿದೆ. ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕಗಳು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.…

Read More