ಮದನ ಚಂದ್ರಿಕೆ ಕದನವೇತಕೆ
ನುಡಿವೆ ನನ್ನಯ ಅನಿಸಿಕೆ
ನೀನು ಇಲ್ಲದೆ ಬಾಳಲೇನಿದೆ
ಅದಕೆ ಬಂದೆನು ಸನಿಹಕೆ
ಚೆಲುವ ಅಧರದಿ ನಗುವ ಬೀರದೆ
ಏಕೆ ಮೊಗವಿದು ಬಾಡಿದೆ
ನಿನ್ನ ಗೆಳೆತನ ಬಯಸಿ ಬಂದೆನು
ನೀನು ನಿಂತಿಹೆ ದೂರದೆ
ಕೋಮಲಾಂಗಿಯೆ ನಿನ್ನ ಚೆಲುವನು
ನೋಡಿ ಮನದಲಿ ದಿಗ್ಭ್ರಮೆ
ದೂರ ತಳ್ಳದೆ ನೀಡು ಜೊತೆಯನು
ಆಗು ನನ್ನಯ ಪ್ರಿಯತಮೆ
ಮನದಲುದಿಸಿದ ಪ್ರೇಮ ಭಾವವು
ನಿನ್ನ ಒಲವನು ಬಯಸಿದೆ
ಕಳೆಯೆ ಪ್ರೇಮದ ದಾಹವೆಲ್ಲವ
ಪ್ರೇಮ ಭಿಕ್ಷೆಯ ಬೇಡುವೆ||